Sunday, 15th December 2024

Viral Video: ಮಗನ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದ ತಾಯಿ ಹೃದಯಾಘಾತದಿಂದ ಸಾವು

Viral Video

ಇತ್ತೀಚಿನ ದಿನಗಳಲ್ಲಿ ಸಾವು (death) ಯಾರಿಗೆ ಯಾವಾಗ ಬರುತ್ತದೆ ಎಂದು ಹೇಳಲು ಸಾಧ್ಯವಾಗದು. ಸಂಭ್ರಮದ ಕ್ಷಣ ಯಾವಾಗ ಬೇಕಾದರೂ ದುಃಖದ ಪರಿಸ್ಥಿತಿಯಾಗಿ ಬದಲಾಗಬಹುದು. ಇದಕ್ಕೆ ಇತ್ತೀಚಿಗೆ ವೈರಲ್ (Viral Video) ಆಗುತ್ತಿರುವ ಕೆಲವು ವಿಡಿಯೋಗಳು ಸಾಕ್ಷಿಯಾಗುತ್ತವೆ. ಇಲ್ಲೊಬ್ಬರು ಮಹಿಳೆ ಮಗನ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದರು. ಆದರೆ ಜವರಾಯ ಆಕೆಗಾಗಿ ಹೊಂಚು ಹಾಕಿ ಕುಳಿತಿದ್ದ ಎನ್ನುವಂತೆ ಹಠಾತ್ ಹೃದಯಾಘಾತವಾಗಿದೆ. ಗಂಡ, ಮಗು, ಕುಟುಂಬ ಸದಸ್ಯರೆಲ್ಲರು ಇರುವಾಗಲೇ ಮಹಿಳೆ ಮೃತಪಟ್ಟಿದ್ದಾಳೆ.

ಮಗನ ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದ ಮಹಿಳೆಯೊಬ್ಬರು ಹಠಾತ್ ಹೃದಯಾಘಾತದಿಂದ ಕುಸಿದು ಮೃತಪಟ್ಟ ಘಟನೆ ಗುಜರಾತ್‌ನ ವಲ್ಸಾದ್‌ನಲ್ಲಿ ನಡೆದಿದೆ. ಪತಿ ಮತ್ತು ಮಗನೊಂದಿಗೆ ವೇದಿಕೆಯಿಂದ ಕೆಳಗೆ ಇಳಿಯುತ್ತಿದ್ದಾಗ ನಡೆದ ದುರಂತದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ರಾಯಲ್ ಶೆಲ್ಟರ್ ಹೊಟೇಲ್‌ನಲ್ಲಿ ಮಗನ ಐದನೇ ಹುಟ್ಟುಹಬ್ಬದ ಆಚರಣೆಯ ಸಂಭ್ರಮದಲ್ಲಿದ್ದ ತಾಯಿಗೆ ಹಠಾತ್ ಹೃದಯಾಘಾತವಾಗಿದೆ. ಇದರ ದೃಶ್ಯ ಸಿಸಿಟಿವಿ ಕೆಮರಾದಲ್ಲಿ ಸೆರೆಯಾಗಿದೆ. ಹೃದಯಾಘಾತದಿಂದ ಮಹಿಳೆ ವೇದಿಕೆಯಿಂದ ಕೆಳಗೆ ಬೀಳುವುದನ್ನು ವಿಡಿಯೋದಲ್ಲಿ ಕಾಣಬಹುದು.

ಮಗನ ಹುಟ್ಟುಹಬ್ಬವನ್ನು ಆಚರಿಸಲು ಹೆಚ್ಚಿನ ಸಂಖ್ಯೆಯಲ್ಲಿ ಕುಟುಂಬ ಸದಸ್ಯರು ಜಮಾಯಿಸಿದ್ದರು. ಹಲವು ಮಂದಿ ನೃತ್ಯ ಮಾಡುತ್ತಿದ್ದರು. ಮಹಿಳೆ, ಆಕೆಯ ಪತಿ ಮತ್ತು ಮಗು ವೇದಿಕೆಯ ಮೇಲೆ ನಿಂತಿದ್ದರು. ಸುಸ್ತಾದಂತೆ ಕಾಣುವ ಮಹಿಳೆ ಮಗುವನ್ನು ಪತಿಗೆ ಹಸ್ತಾಂತರಿಸಿದರು. ಬಳಿಕ ಆಕೆ ತಲೆಯನ್ನು ಹಿಡಿದುಕೊಂಡು ವೇದಿಕೆಯ ಮೇಲೆ ನಡೆಯುವಾಗ ಏಕಾಏಕಿ ಕುಸಿದು ಬಿದ್ದಿದ್ದಾರೆ.

Viral Video: ತುಂಡುಡುಗೆ ಧರಿಸಿ ದೇಗುಲಕ್ಕೆ ಬಂದ ಯುವತಿ; ಆಮೇಲೆ ಆಗಿದ್ದೇನು? ಇಲ್ಲಿದೆ ವಿಡಿಯೋ

ಕೂಡಲೇ ಕುಟುಂಬ ಸದಸ್ಯರು ಆಕೆಯ ಸಹಾಯಕ್ಕೆ ಧಾವಿಸಿದರು ಮತ್ತು ಮಹಿಳೆಯನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಆಕೆ ಮೃತಪಟ್ಟಿದ್ದಾಳೆ ಎಂದು ವೈದ್ಯರು ಘೋಷಿದರು.