Monday, 16th December 2024

Viral Video: ತರಗತಿಯಲ್ಲಿ ತಲೆಕೆಳಗಾಗಿ ನಿಂತ ಶಿಕ್ಷಕ- ಇಷ್ಟೆಲ್ಲಾ ಸರ್ಕಸ್‌ ಬೇಕಿತ್ತಾ ಎಂದ ನೆಟ್ಟಿಗರು; ಅಷ್ಟಕ್ಕೂ ನಡೆದಿದ್ದೇನು?

Viral Video

ನವದೆಹಲಿ: ವಿದ್ಯಾರ್ಥಿಗಳಿಗೆ ಸರಿಯಾಗಿ ನೆನಪಿಟ್ಟುಕೊಳ್ಳಲು ಸಹಾಯವಾಗುವಂತೆ ಶಿಕ್ಷಕರು ನಾನಾ ರೀತಿಯ ಟ್ರಿಕ್‌ಗಳನ್ನು ಹೇಳಿಕೊಡುತ್ತಾರೆ. ಇದರಿಂದ ವಿದ್ಯಾರ್ಥಿಗಳಿಗೆ ಕಲಿಯಲು ಸುಲಭವಾಗುತ್ತದೆ. ಇತ್ತೀಚೆಗೆ  ಭೌತಶಾಸ್ತ್ರ ಶಿಕ್ಷಕರೊಬ್ಬರು ತಮ್ಮ ವಿದ್ಯಾರ್ಥಿಗಳಿಗೆ ರಸಾಯನಶಾಸ್ತ್ರವನ್ನು ಅರ್ಥ ಮಾಡಿಸಲು ಹೊಸ ಟ್ರಿಕ್‍ ಅನ್ನು ಪ್ರಯತ್ನಿಸಿದ್ದಾರೆ. ಅವರ ಪ್ರಯತ್ನಗಳ ವಿಡಿಯೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದ್ದು, ನೆಟ್ಟಿಗರಿಂದ ಮೆಚ್ಚುಗೆಯನ್ನು ಪಡೆದಿದೆ.

ಈ ವೈರಲ್ ವಿಡಿಯೊದಲ್ಲಿ  ಜನಪ್ರಿಯ ಎಡ್-ಟೆಕ್ ಪ್ಲಾಟ್‌ಫಾರ್ಮ್‌ ಫಿಸಿಕ್ಸ್ ಶಿಕ್ಷಕರೊಬ್ಬರು ರಸಾಯನಶಾಸ್ತ್ರದಲ್ಲಿ ಚಿರಾಲಿಟಿ ಪರಿಕಲ್ಪನೆಯನ್ನು ವಿದ್ಯಾರ್ಥಿಗಳಿಗೆ ಕಲಿಸಲು ಅನುಸರಿಸಿದ ಟ್ರಿಕ್‌ ಈಗ ಸಖತ್‌ ವೈರಲ್‌ ಆಗಿದೆ.

ರಾಸಾಯನಿಕ ಸಂಯುಕ್ತದ ರಚನೆಯನ್ನು ವಿವರಿಸುವಾಗ, ಶಿಕ್ಷಕರು ಅಣುವಿನ ತಿರುಗುವಿಕೆಯನ್ನು ಪ್ರದರ್ಶಿಸಲು ಸಿಕ್ಕಾಪಟ್ಟೆ ಸರ್ಕಸ್‌ ಮಾಡಿದ್ದಾರೆ. ಕೊನೆಗೆ  ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಹೊಸ ಟ್ರಿಕ್‌ ಅನುಸರಿಸಿದ್ದಾರೆ. ಈ ವಿಡಿಯೊದಲ್ಲಿ  ಶಿಕ್ಷಕರು ತಮ್ಮ ಎರಡು ಕೈ ಗಳನ್ನು ನೆಲಕ್ಕೆ ಊರಿ ಬಗ್ಗಿದ್ದಾರೆ. ಹಾಗೇ ಕಾಲಗಳನ್ನು ಎಡ ಹಾಗೂ ಬಲಕ್ಕೆ ಚಾಚಿ ವಿದ್ಯಾರ್ಥಿಗಳಿಗೆ ವಿಭಿನ್ನವಾದ ರೀತಿಯಲ್ಲಿ ಹೇಳಿಕೊಟ್ಟಿದ್ದಾರೆ.

ಈ ಸುದ್ದಿಯನ್ನೂ ಓದಿ: ಪುಟ್ಟ ಹುಡುಗಿಯ ಕೋರಿಕೆಗೆ ಅಲೆಕ್ಸಾ ಫುಲ್‌ ಶಾಕ್‌! ಅದರ ರಿಯಾಕ್ಷನ್‌ ಈಗ ಭಾರೀ ವೈರಲ್‌

ಈ ವಿಡಿಯೊವನ್ನು ನೆಟ್ಟಿಗರರೊಬ್ಬರು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದು, ಅವರು ಇದನ್ನು “ಉತ್ತಮ ಸಿನೆಮಾ” ಎಂದು ಹೇಳಿದ್ದಾರೆ. ಶಿಕ್ಷಕರ ವಿಶಿಷ್ಟ ಪ್ರಯತ್ನದಿಂದ ಪ್ರಭಾವಿತರಾದ ನೆಟ್ಟಿಗರು  ಕಾಮೆಂಟ್ ಮೂಲಕ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಶಿಕ್ಷಕರು ಹಿಂದಕ್ಕೆ ಬಾಗುವ ಬದಲು ಪರಿಕಲ್ಪನೆಯನ್ನು ವಿವರಿಸಲು ಪ್ಲಾಸ್ಟಿಕ್ ಮಾದರಿಗಳು ಅಥವಾ 3 ಡಿ ಗ್ರಾಫಿಕ್ಸ್ ಅನ್ನು ಬಳಸಬಹುದಿತ್ತು ಎಂದು ಹೆಚ್ಚಿನ ನೆಟ್ಟಿಗರು ಹೇಳಿದ್ದಾರೆ.