ಪ್ರಕೃತಿಯ ಅದ್ಭುತಗಳು ನಮ್ಮ ಕಲ್ಪನೆಗೂ ಮೀರಿದವು. ಅಂತಹ ಅದ್ಭುತಗಳು ಜಗತ್ತಿನಲ್ಲಿ ಆಗಾಗ ನಡೆಯುತ್ತಿರುತ್ತವೆ. ಅದೇರೀತಿ ಇದೀಗ ಚಿಕ್ಕ ಹಾವೊಂದು ತನ್ನ ತಲೆಗಿಂತ ಎರಡು ಪಟ್ಟು ದೊಡ್ಡದಾಗಿರುವ ಮೊಟ್ಟೆಯನ್ನು ಸಂಪೂರ್ಣವಾಗಿ ನುಂಗುವ ವಿಡಿಯೊವೊಂದು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ಸಿಕ್ಕಾಪಟ್ಟೆ ವೈರಲ್(Viral Video) ಆಗಿದೆ. ಈ ವಿಡಿಯೊ ನೆಟ್ಟಿಗರನ್ನು ಬೆಚ್ಚಿಬೀಳಿಸಿದೆ.
ಈ ವೈರಲ್ ವಿಡಿಯೊದಲ್ಲಿ ಚಿಕ್ಕದಾದ ಹಾವು ತನ್ನ ತಲೆಗಿಂತ ದೊಡ್ಡದಾದ ಮೊಟ್ಟೆಯನ್ನು ನುಂಗುವ ರೀತಿಯನ್ನು ಇಲ್ಲಿ ಬಹಳ ಅದ್ಭುತವಾಗಿ ತೋರಿಸಿದ್ದಾರೆ. ಹಾವು ಮೊಟ್ಟೆಯನ್ನು ನುಂಗಲು ಅದರ ದವಡೆ ಹೇಗೆ ವಿಸ್ತರಿಸುತ್ತದೆ ಎಂಬುದನ್ನೂ ಇಲ್ಲಿ ತೋರಿಸಿದ್ದಾರೆ. ಈ ವಿಲಕ್ಷಣ ವಿಡಿಯೊಗೆ ಅನೇಕರು ಕಮೆಂಟ್ ಮಾಡಿದ್ದಾರೆ ಹಾಗೂ ವಿಡಿಯೊವನ್ನು ಅನೇಕರು ಹಂಚಿಕೊಂಡಿದ್ದಾರೆ.
Snake gulping an entire egg bigger than its head pic.twitter.com/YN2TwWLaVd
— Nature is Amazing ☘️ (@AMAZlNGNATURE) October 18, 2024
ಅನೇಕ ಬಳಕೆದಾರರು ಈ ಘಟನೆಯನ್ನು ಪ್ರಕೃತಿಯ ಅದ್ಭುತ ಎಂದು ಕರೆದರೆ, ಅನೇಕರು ಕೆಲವು ಜಾತಿಯ ಹಾವುಗಳು ಮೊಟ್ಟೆಗಳಂತಹ ವಸ್ತುಗಳನ್ನು ನುಂಗಲು ತಮ್ಮ ದವಡೆಯನ್ನು ಇದಕ್ಕಿಂತ ನಾಲ್ಕು ಪಟ್ಟು ವಿಸ್ತರಿಸುವ ವಿಶಿಷ್ಟ ಸಾಮರ್ಥ್ಯವನ್ನು ಹೊಂದಿವೆ ಎಂದು ವಿವರಿಸಿದ್ದಾರೆ.
ಹಾವುಗಳು ಇಂತಹ ಅದ್ಭುತವಾದ ದವಡೆಗಳನ್ನು ಹೊಂದಿವೆ. ಹಾಗಾಗಿ ತಮ್ಮ ತಲೆಗಿಂತ ದೊಡ್ಡದಾದ ಬೇಟೆಯನ್ನು ನುಂಗಲು ಸಾಧ್ಯವಾಗುವಂತೆ ಅದರ ದವಡೆಗಳನ್ನು ಅಗಲವಾಗಿ ಚಾಚಲು ಅನುವು ಮಾಡಿಕೊಡುತ್ತದೆ. ಕ್ರಮೇಣ ಅದನ್ನು ಸಂಪೂರ್ಣವಾಗಿ ನುಂಗುತ್ತದೆ. ಒಳಗೆ ಪ್ರವೇಶಿಸಿದ ನಂತರ, ಹಾವಿನ ದೇಹದಲ್ಲಿನ ವಿಶೇಷ ಸ್ನಾಯುಗಳು ಮೊಟ್ಟೆಯ ಚಿಪ್ಪನ್ನು ಪುಡಿ ಮಾಡುವ ಕೆಲಸ ಮಾಡುತ್ತವೆ, ನಂತರ ಮೊಟ್ಟೆ ಜೀರ್ಣವಾಗುತ್ತದೆಯಂತೆ.
ಇದನ್ನೂ ಓದಿ: ಎಣ್ಣೆ ಹೊಡೆಯುವಂತೆ ಪತಿಗೆ ಚಿತ್ರಹಿಂಸೆ ಕೊಟ್ಟ ಮಹಿಳೆ! ಪೊಲೀಸ್ ಠಾಣೆ ಮೆಟ್ಟಿಲೇರಿದ ಕೇಸ್
ಬ್ರಿಟಾನಿಕಾ ಪ್ರಕಾರ, ಮೊಟ್ಟೆ ತಿನ್ನುವ ಹಾವುಗಳು ಓವಿಪರಸ್‍ಗಳಾಗಿವೆ(oviparous) ಮತ್ತು ಇವು ಸಬ್-ಸಹಾರನ್ ಆಫ್ರಿಕಾದ ದಸಿಪೆಲ್ಟಿಸ್ ಮತ್ತು ಈಶಾನ್ಯ ಭಾರತದ ಎಲಾಚಿಸ್ಟೊಡಾನ್ ವೆಸ್ಟರ್ಮನ್ನಿ ಕುಲಕ್ಕೆ ಸೇರಿವೆ. ಅವುಗಳಲ್ಲಿ ಹೆಚ್ಚಿನವು ತೆಳ್ಳಗಿರುತ್ತವೆ ಮತ್ತು ಸುಮಾರು 76 ಸೆಂ.ಮೀ (30 ಇಂಚುಗಳು) ಉದ್ದ ಇರುತ್ತವೆ!