ಯುವ ಜನರಲ್ಲಿ ರೀಲ್ಸ್ ಕ್ರೇಜ್ (Reels craze) ಎಷ್ಟು ಹೆಚ್ಚಾಗಿದೆ ಎಂದರೆ ಕೆಲವರು ಅಪಾಯವನ್ನೂ ಲೆಕ್ಕಿಸುವುದಿಲ್ಲ. ಇಂತಹ ವೈರಲ್ ವಿಡಿಯೋಗಳು (Viral Video) ಸಾಮಾಜಿಕ ಜಾಲತಾಣದಲ್ಲಿ (social Media) ಸಾಕಷ್ಟು ನೋಡಲು ಸಿಗುತ್ತದೆ. ಬೆಟ್ಟ, ಗುಡ್ಡ, ನದಿ, ತೊರೆ ಸಮೀಪದಲ್ಲಿ ವಿಡಿಯೋ ಮಾಡದಂತೆ ಎಷ್ಟೇ ಎಚ್ಚರಿಕೆ ನೀಡಿದರು ಕೆಲವರು ಇದಕ್ಕೆ ಕ್ಯಾರೇ ಎನ್ನುತ್ತಿಲ್ಲ. ಸಾಮಾಜಿಕ ಜಾಲತಾಣವಾದ ಎಕ್ಸ್‌ನಲ್ಲಿ ವೈರಲ್ ಆಗಿರುವ ವಿಡಿಯೋವೊಂದರಲ್ಲಿ ಯುವತಿಯೊಬ್ಬಳು ಕಣಿವೆಯಲ್ಲಿ ರೀಲ್ಸ್ ಮಾಡುತ್ತಿದ್ದಾಗ ಕೆಳಗೆ ಜಾರಿ ಬಿದ್ದ ಘಟನೆ ನಡೆದಿದೆ.
ಹಿಮಾಚಲ ಪ್ರದೇಶದ ಚಂಬಾ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಪರ್ವತಗಳ ನಡುವಿನ ಕಣಿವೆಯಲ್ಲಿ ರೀಲ್ಸ್ ಮಾಡುತ್ತಿದ್ದಾಗ ಯುವತಿ ಕೆಳಗೆ ಜಾರಿ ಬಿದ್ದಿದ್ದಾಳೆ. ಬಹು ದೂರದವರೆಗೆ ಯುವತಿ ಹೊರಳಿಕೊಂಡು ಬೀಳುವುದನ್ನು ವಿಡಿಯೋದಲ್ಲಿ ತೋರಿಸಲಾಗಿದೆ. ಕೆಮರಾಮ್ಯಾನ್ ಅವಳನ್ನು ನೃತ್ಯ ಮಾಡಲು ಪ್ರಾರಂಭಿಸಲು ಸೂಚನೆ ನೀಡಿದಾಗ ಅವಳು “ಬೇಪನಾಹ್ ಪ್ಯಾರ್ ಹೈ, ತೇರಾ ಇಂತೇಜಾರ್ ಹೈ” ಎಂಬ ಪ್ರಣಯ ಗೀತೆಗೆ ಹೆಜ್ಜೆ ಹಾಕಲು ಪ್ರಾರಂಭಿಸಿದ್ದಾಳೆ. ದುರದೃಷ್ಟವಶಾತ್ ಅವಳು ಕಾಲು ಜಾರಿ ಕಣಿವೆಗೆ ಬಿದ್ದಿದ್ದಾಳೆ.
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಈ ವಿಡಿಯೋ ನೋಡಿರುವ ಒಬ್ಬ ವೀಕ್ಷಕರು ಈ ಘಟನೆಯನ್ನು “ಹಮ್ ಆಪ್ಕೆ ಹೈ ಕೌನ್” ನ ದೃಶ್ಯಕ್ಕೆ ಹೋಲಿಸಿದರು. ಆ ಚಿತ್ರದಲ್ಲಿ ರೇಣುಕಾ ಶಹಾನೆ ಮೆಟ್ಟಿಲುಗಳಿಂದ ಕೆಳಗೆ ಬಿದ್ದಿದ್ದರು. ಇದನ್ನು “ರೇಣುಕಾ ಶಹಾನೆ ರೀಲ್” ಎಂದು ಹೇಳಿದ್ದಾರೆ. ಅನೇಕರು ಈ ಅಜಾಗರೂಕತೆಯ ರೀಲ್ಸ್ ಬಗ್ಗೆ ಖಂಡನೆ ವ್ಯಕ್ತಪಡಿಸಿದ್ದಾರೆ.
Today's people are playing with their lives just to make a reel. The viral video is said to be from Chamba. pic.twitter.com/QnaGGAZ1rJ
— Baba Banaras™ (@RealBababanaras) September 15, 2024
ಎತ್ತರದಿಂದ ಕೆಳಗೆ ಬಿದ್ದರೂ ಯುವತಿಗೆ ಏನೂ ಆಗಿಲ್ಲ ಸುರಕ್ಷಿತವಾಗಿದ್ದಾರೆ ಎಂದು ತಿಳಿದು ಬಂದಿದೆ. ಪರ್ವತದ ಹುಲ್ಲುಗಾವಲಿನ ಮೇಲಿನ ಹುಲ್ಲಿನ ಹೊದಿಕೆಯು ಅವಳನ್ನು ಗಂಭೀರ ಗಾಯಗಳಿಂದ ರಕ್ಷಿಸಿದೆ. ಪರ್ವತದಿಂದ ಕೆಳಗೆ ಬಿದ್ದ ಯುವತಿಯನ್ನು ಅಮರ್ ಉಜಾಲಾ ಪೂಜಾ ಎಂದು ಗುರುತಿಸಲಾಗಿದೆ.
Viral Video: ಐಎಎಸ್ ಅಧಿಕಾರಿ ಮುಂದೆಯೇ ನಿರರ್ಗಳ ಇಂಗ್ಲಿಷ್ ಮಾತನಾಡಿದ ಹಳ್ಳಿಯ ಮಹಿಳೆ ; ವಿಡಿಯೊ ಇದೆ
ಈ ಬಗ್ಗೆ ಪೂಜಾ ಕೂಡ ಇನ್ನೊಂದು ವಿಡಿಯೋ ಬಿಡುಗಡೆ ಮಾಡಿ ತಾನು ಸುರಕ್ಷಿತವಾಗಿದ್ದೇನೆ ಎಂದು ತಿಳಿಸಿದ್ದಾರೆ. ಅಲ್ಲದೆ ಇದೊಂದು ಅಪಾಯಕಾರಿ ಯತ್ನ. ನನ್ನಿಂದ ತಪ್ಪಾಗಿದೆ ಎಂದು ಹೇಳಿಕೊಂಡಿದ್ದಾರೆ.