ಕೋಲ್ಕತಾ: ಇದೊಂದು ಹೊಸ ರೋಗ ಶುರುವಾಗಿದೆ ಈಗ! ಸಿಂಗಲ್ ಬಟ್ಟೆಯಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಶೋ ಕೊಡೋದು, ಅದೂ ಹುಡ್ಗೀರು! ಇದರಲ್ಲಿ ಕೋಲ್ಕತಾ ಮಾಡೆಲ್ಗಳದ್ದೇ ಎತ್ತಿದ ಕೈ. ಮೊನ್ನೆ ತಾನೆ ಒಬ್ಬ ಮಾಡೆಲ್ ದಿಲ್ಲಿಯ ಇಂಡಿಯಾ ಗೇಟ್ ಮುಂದೆ ತನ್ನ ಮೈಗೆ ಸಿಂಗಲ್ ಟವಲ್ ಸುತ್ತಿಕೊಂಡು ರೀಲ್ಸ್ ಮಾಡಿ ಅದು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಅದರ ಬೆನ್ನಲ್ಲೇ ಇದೀಗ ಕೋಲ್ಕತಾದ ಇನ್ನಿಬ್ಬರು ಮಾಡೆಲ್ಗಳು ಜತೆಯಾಗಿ ಟವಲ್ ಸುತ್ತಿಕೊಂಡು ಪಬ್ಲಿಕ್ ಪ್ಲೇಸ್ನಲ್ಲಿ ಹಾಡಿಗೆ ಡ್ಯಾನ್ಸ್ ಮಾಡಿಕೊಂಡು ಮಾಡಿರುವ ರೀಲ್ ಇದೀಗ ಸಿಕ್ಕಾಪಟ್ಟೆ ವೈರಲ್ (Viral Video) ಆಗುತ್ತಿದೆ.
ಮೊನ್ನೆ ತಾನೆ ಕೋಲ್ಕತಾದಲ್ಲಿ ದುರ್ಗಾ ಪೆಂಡಾಲ್ಗೆ ಅಸಭ್ಯ ರೀತಿಯಲ್ಲಿ ಬಟ್ಟೆ ಧರಿಸಿ ಹೋಗುವ ಮೂಲಕ ಇಬ್ಬರು ಮಿಸ್ ಕೋಲ್ಕತಾ ವಿಜೇತ ಮಾಡೆಲ್ಗಳು ಸುದ್ದಿಯಾಗಿದ್ದರು. ಇವರಲ್ಲಿ ಒಬ್ಬಾಕೆ ಇಂಡಿಯಾ ಗೇಟ್ (India Gate) ಎದುರು ಟವಲ್ ಡ್ಯಾನ್ಸ್ ಮಾಡಿದ ವಿಡಿಯೋ ಅಪ್ಲೋಡ್ ಮಾಡಿ ಸಿಕ್ಕಾಪಟ್ಟೆ ಟೀಕೆಯನ್ನು ಎದುರಿಸಿದ್ದಳು. ಇದೇ ರೀತಿ ಇನ್ನಿಬ್ಬರು ಕೋಲ್ಕತಾದ ಮಾಡೆಲ್ಗಳು ಸಾರ್ವಜನಿಕ ಸ್ಥಳದಲ್ಲಿ ಟಾಪ್ಲೆಸ್ ಆಗಿ ಕಾಣಿಸಿಕೊಳ್ಳುವ ಮೂಲಕ ಹೊಸ ವಿವಾದದ ಕಿಡಿಯನ್ನು ಹೊತ್ತಿಸಿದ್ದಾರೆ.
ಮಿಸ್ ಕೋಲ್ಕತಾ 2016 ಹೇಮೋಶ್ರೀ ಭದ್ರ ಹಾಗೂ ಮಿಸ್ಟರ್ ಕೋಲ್ಕತಾ 2019 ಸೌರವ್ ಮಂಡಲ್ ಎಂಬಿಬ್ಬರು ಮಾಡೆಲ್ಗಳು ರೀಲ್ಸ್ಗಾಗಿ ಈ ರೀತಿ ಸಾರ್ವನಿಕ ಸ್ಥಳದಲ್ಲಿ ಟಾಪ್ಲೆಸ್ ಆಗಿ ಕಾಣಿಸಿಕೊಂಡವರು. ಇನ್ ಸ್ಟಾಗ್ರಾಂನಲ್ಲಿ ಅಪ್ಲೋಡ್ ಆಗಿರುವ ಈ ವಿಡಿಯೊವನ್ನು ಇದೀಗ ಕೆಲವೊಂದು ಕಾರಣಗಳಿಗಾಗಿ ಏಜ್ ರಿಸ್ಟ್ರಿಕ್ಟ್ ಮಾಡಿಡಲಾಗಿದೆ.
ಈ ವಿಡಿಯೋದಲ್ಲಿರುವಂತೆ ಹೇಮೋಶ್ರೀ ತನ್ನ ಮೈಯನ್ನು ಕೇವಲ ಒಂದು ಟವಲ್ನಿಂದ ಕವರ್ ಮಾಡಿಕೊಂಡಿದ್ದರೆ, ಸೌರವ್ ತನ್ನ ಸೊಂಟದ ಭಾಗಕ್ಕೆ ಮಾತ್ರವೇ ಟವಲ್ ಒಂದನ್ನು ಕಟ್ಟಿಕೊಂಡು ಅರೆ-ನಗ್ನ ಅವತಾರದಲ್ಲಿ ಕಾಣಿಸಿಕೊಂಡಿದ್ದಾನೆ.
ಸೌರವ್ ಸುಮ್ಮನೆ ನಿಂತುಕೊಂಡಿದ್ದರೆ, ಹೇಮೋಶ್ರೀ ಟವಲ್ ಸುತ್ತಿಕೊಂಡು ನಿಧಾನಕ್ಕೆ ಹಾಡಿಗೆ ಹೆಜ್ಜೆ ಹಾಕುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ. ಈ ಇಬ್ಬರೂ ಮಾಡೆಲ್ಗಳು ಈ ವಿಡಿಯೊವನ್ನು ತಮ್ಮ ತಮ್ಮ ಇನ್ಸ್ಟಾಗ್ರಾಂ ಖಾತೆಗಳಲ್ಲಿ ಅಪ್ಲೋಡ್ ಮಾಡಿದ್ದಾರೆ. ಸೋಮವಾರ ಈ ವಿಡಿಯೋಗಳು ಅಪ್ಲೋಡ್ ಆಗಿದ್ದು, ಈಗಾಗಲೇ ಇದು ಏಳು ಲಕ್ಷ ವೀಕ್ಷಣೆಯನ್ನು ಪಡೆದುಕೊಂಡಿದೆ.
ಇದನ್ನೂ ಓದಿ: Road Accident: ಬೆಂಗಳೂರಿನಲ್ಲಿ 4 ವರ್ಷದಲ್ಲಿ ರಸ್ತೆ ಅಪಘಾತ, ಸಾವಿನ ಸಂಖ್ಯೆ ದುಪ್ಪಟ್ಟು; ರಾಜ್ಯಕ್ಕೇ ಪ್ರಥಮ
ಹೇಮೋಶ್ರೀ ಮತ್ತು ಸೌರವ್ ಅವರು ಈ ಟವಲ್ ಡ್ಯಾನ್ಸ್ ವಿಡಿಯೋವನ್ನು ಮಾಡಿರುವ ಸ್ಥಳ ಎಲ್ಲಿ ಎಂದು ಗೊತ್ತಾಗಿಲ್ಲ. ಸನ್ನತಿ ಮಿತ್ರ ಎಂಬ ಇನ್ನೊಬ್ಬ ಕೋಲ್ಕೊತಾದ ಮಾಡೆಲ್ ದಿಲ್ಲಿಯ ಇಂಡಿಯಾ ಗೇಟ್ ಮುಂಭಾಗದಲ್ಲಿ ಟವಲ್ ಡ್ಯಾನ್ಸ್ ಮಾಡಿದ್ದಳು. ಆದರೆ ಐತಿಹಾಸಿಕ ಸ್ಮಾರಕದ ಮುಂದೆ ಈ ರೀತಿ ಅಸಭ್ಯವಾಗಿ ವರ್ತಿಸಿದ್ದಕ್ಕೆ ಸನ್ನತಿಯನ್ನು ನೆಟ್ಟಿಗರು ಸಖತ್ತಾಗಿ ತರಾಟೆಗೆ ತೆಗದುಕೊಂಡಿದ್ದರು. ಒಟ್ಟಿನಲ್ಲಿ ಈ ಟವಲ್ ಡ್ಯಾನ್ಸ್ ಎಂಬುದು ಇದೀಗ ಒಂದು ಸಮೂಹ ಸನ್ನಿಯಂತೆ ಅಲ್ಲಲ್ಲಿ ನಡೆಯುತ್ತಿದ್ದು, ರೀಲ್ಸ್ ಮೂಲಕ ಲೈಕ್ಸ್ ಮತ್ತು ವೀಕ್ಷಣೆಯ ಹುಚ್ಚಿಗೆ ಬಿದ್ದು ಇಂತಹ ಅಸಂಬದ್ಧಗಳನ್ನು ಮಾಡುತ್ತಿರುವುದು ಖೇದಕರ ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.