ಮುಂಬೈ: ಬಾಲಿವುಡ್ ನಟಿ ಅನನ್ಯಾ ಪಾಂಡೆ ಅವರ ಸೋದರ ಸಂಬಂಧಿ ಅಲಾನಾ ಪಾಂಡೆ ಇತ್ತೀಚೆಗೆ ರಿಯಾಲಿಟಿ ಶೋ ‘ದಿ ಟ್ರೈಬ್’ನಲ್ಲಿ ಕಾಣಿಸಿಕೊಂಡಿದ್ದಾರೆ. ಇದು ಈಗ ಅಮೆಜಾನ್ ಪ್ರೈಮ್ ವಿಡಿಯೊದಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ. ಇತ್ತೀಚೆಗೆ ಅಲಾನಾ ಪಾಂಡೆ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಶೋಗೆ ಸಂಬಂಧಿಸಿದ ವಿಡಿಯೊವನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೊದಲ್ಲಿ ಅಲಾನಾ ಅವರ ತಂದೆ ಚಿಕ್ಕಿ ಪಾಂಡೆ, ಮಗಳು ಧರಿಸಿದ್ದ ಡ್ರೆಸ್ನ ಬಗ್ಗೆ ಅಸಮಾಧಾನ ಹೊರಹಾಕಿದ್ದು, ಇದು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ (Viral Video) ಆಗುತ್ತಿದೆ.
ವೈರಲ್ ವಿಡಿಯೊದಲ್ಲಿ ಅಲಾನಾ ಪಾಂಡೆ ಮತ್ತು ಐವರ್ ಮ್ಯಾಕ್ರಿ ಅವರೊಂದಿಗಿನ ಮದುವೆಗಾಗಿ ಅಲಾನಾ ಅತ್ತೆ ಮಾವನನ್ನು ಲಾಸ್ ಏಂಜಲೀಸ್ನಿಂದ ಭಾರತಕ್ಕೆ ಸ್ವಾಗತಿಸಲಾಗಿತ್ತು. ಆ ವೇಳೆ ಲೈಟ್ ಹಸಿರು ಬಣ್ಣದ ಬ್ರಾಲೆಟ್ ಟಾಪ್ ಮತ್ತು ಬಿಳಿ ಬಣ್ಣದ ಪ್ಯಾಂಟ್ ಧರಿಸಿದ್ದ ಅಲಾನಾ ಕುಟುಂಬದವರ ಮಧ್ಯೆ ಬಂದು ಕುಳಿತರು. ಕುಟುಂಬದವರೆಲ್ಲಾ ಒಟ್ಟಿಗೆ ಇದ್ದಾಗ ಮಗಳ ಡ್ರೆಸ್ ನೋಡಿ ಅಸಮಾಧಾನಗೊಂಡ ಅಲಾನಾ ತಂದೆ ಚಿಕ್ಕಿ ಪಾಂಡೆ “ನೀನು ಟಾಪ್ ಧರಿಸಲು ಮರೆತಿದ್ದೀಯಾ? ಏನಿದು ಡ್ರೆಸ್ ಈ ರೀತಿ ಇದೆ” ಎಂದು ಕೇಳಿದ್ದಾರೆ. ಅವರ ಮಾತಿನಿಂದ ಶಾಕ್ ಆದ ಅಲಾನಾ, “ನಿಮಗೆ ಈ ಡ್ರೆಸ್ನಲ್ಲಿ ಏನು ತಪ್ಪಾಗಿ ಕಾಣಿಸಿದೆ? ನೀವು ಯಾಕೆ ತುಂಬಾ ಸಿರಿಯಸ್ ಆಗಿದ್ದೀರಿ. ಇದು ನನ್ನ ಟಾಪ್” ಎಂದು ಹೇಳಿದ್ದಾಳೆ.
ಆಗ ಚಿಕ್ಕಿ “ಇದರ ಮೇಲೆ ಒಂದು ಶರ್ಟ್ ಧರಿಸಬೇಕು ಎಂದು ನಿನಗೆ ಅನಿಸುವುದಿಲ್ಲವೇ? ಎಂದು ಕೇಳುತ್ತಾರೆ. ಆಗ ಅಲಾನಾ “ಇದೇ ನನ್ನ ಶರ್ಟ್” ಎಂದಿದ್ದಾಳೆ. ಇದರಿಂದ ಕೋಪಗೊಂಡ ಚಿಕ್ಕಿ “ಇದು ಲಾಸ್ ಏಂಜಲಿಸ್ ಅಲ್ಲ. ಇದು ಬಾಂದ್ರಾ, ನೀನು ಈಗ ಇರೋದು ಬಾಂದ್ರಾದಲ್ಲಿ. ನಿನಗೆ ಬ್ರಾದ ಮೇಲೆ ಶರ್ಟ್ ಅಥವಾ ಟಾಪ್ ಧರಿಸಬೇಕು ಎಂದು ತಿಳಿದಿಲ್ಲವೇ?” ಎಂದು ಹೇಳುತ್ತಾರೆ. ಆದರೆ ತಾನು ಧರಿಸಿರುವುದು ಬ್ರಾಲೆಟ್ ಟಾಪ್ ಎಂದು ವಾದ ಮಾಡಿ ಅಲಾನಾ ಅಲ್ಲೇ ಸುಮ್ಮನೆ ಕುಳಿತುಕೊಳ್ಳುತ್ತಾಳೆ.
ಇದನ್ನೂ ಓದಿ:ಪ್ರೀ ವೆಡ್ಡಿಂಗ್ ಫೋಟೊಶೂಟ್ನಲ್ಲಿ ಲಿಪ್ ಲಾಕ್! ನೋಡುಗರಿಗೆ ಫುಲ್ ಟೆನ್ಶನ್!
ದಿ ಟ್ರೈಬ್ ಅನ್ನು ಓಂಕಾರ್ ಪೊದ್ದಾರ್ (Omkar Potdar )ನಿರ್ದೇಶಿಸಿದ್ದಾರೆ ಮತ್ತು ಧರ್ಮಾಟಿಕ್ ಎಂಟರ್ಟೈನ್ಮೆಂಟ್ ಅಡಿಯಲ್ಲಿ ನಿರ್ಮಿಸಲಾಗಿದೆ. ಅಲಾನಾ ಪಾಂಡೆ ಮಾರ್ಚ್ 2023ರಲ್ಲಿ ಮುಂಬೈನಲ್ಲಿ ಐವರ್ ಮ್ಯಾಕ್ರಿ ಅವರನ್ನು ವಿವಾಹವಾಗಿದ್ದಾರೆ. ಈ ದಂಪತಿ ಜುಲೈ 2024ರಲ್ಲಿ ಗಂಡು ಮಗುವಿನ ಪೋಷಕರಾಗಿದ್ದಾರೆ.