ಮುಂಬೈ: ಮಹಾರಾಷ್ಟ್ರದ ಜಲ್ಗಾಂವ್‌ನ ಜಿಲ್ಲೆಯಲ್ಲಿ ಅಂಬ್ಯುಲೆನ್ಸ್‌ಗೆ ಬೆಂಕಿ ತಗುಲಿದ ಪರಿಣಾಮ ಕೆಲವೇ ನಿಮಿಷಗಳಲ್ಲಿ ಅಂಬ್ಯುಲೆನ್ಸ್ ಸ್ಫೋಟಗೊಂಡಿದ್ದು, ಅದರಲ್ಲಿದ್ದ ಗರ್ಭಿಣಿ ಮತ್ತು ಅವರ ಕುಟುಂಬ ಭಾರೀ ದುರಂತದಿಂದ ಪವಾಡ ಸದೃಶ್ಯ ರೀತಿಯಲ್ಲಿ ಪಾರಾಗಿದ್ದಾರೆ. ಸ್ಫೋಟದ ಪರಿಣಾಮದಿಂದಾಗಿ ಹತ್ತಿರದ ಮನೆಗಳ ಕಿಟಕಿಗಳು ಸಹ ಛಿದ್ರಗೊಂಡಿದ್ದು, ಅದೃಷ್ಟವಶಾತ್ ಈ ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ , ಪ್ರಾಣಹಾನಿ ಸಂಭವಿಸಿಲ್ಲ ಎಂಬುದಾಗಿ ತಿಳಿದುಬಂದಿದೆ. ಈ ಸ್ಫೋಟದ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ.
ಜಲ್ಗಾಂವ್‌ನ ದಾದಾವಾಡಿ ಪ್ರದೇಶದ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಘಟನೆ ನಡೆದಿದೆ. ಅಂಬ್ಯುಲೆನ್ಸ್‌ನಲ್ಲಿ ಗರ್ಭಿಣಿ ಮತ್ತು ಅವರ ಕುಟುಂಬವನ್ನು ಎರಾಂಡೋಲ್ ಸರ್ಕಾರಿ ಆಸ್ಪತ್ರೆಯಿಂದ ಜಲ್ಗಾಂವ್‌ನ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ ವೇಳೆ, ಅಂಬ್ಯುಲೆನ್ಸ್ ಚಾಲಕ ತನ್ನ ವಾಹನದ ಎಂಜಿನ್‍ನಿಂದ ಹೊಗೆ ಬರುತ್ತಿರುವುದನ್ನು ಕಂಡು ತಕ್ಷಣ ಕೆಳಗಿಳಿದು ಪ್ರಯಾಣಿಕರನ್ನು ಕೆಳಗಿಳಿಯುವಂತೆ ತಿಳಿಸಿದ್ದಾನೆ. ಹಾಗೇ ವಾಹನದಿಂದ ದೂರವಿರುವಂತೆ ಹತ್ತಿರದಲ್ಲಿದ್ದ ಜನರಿಗೆ ಎಚ್ಚರಿಸಿದ್ದಾನೆ. ಆಗ ಇಡೀ ವಾಹನಕ್ಕೆ ಬೆಂಕಿ ಹೊತ್ತಿಕೊಂಡು ಕೆಲವೇ ನಿಮಿಷಗಳಲ್ಲಿ, ಅದು ಅಂಬ್ಯುಲೆನ್ಸ್‌ನ ಆಮ್ಲಜನಕ ಟ್ಯಾಂಕ್‍ಗೆ ಹರಡಿ ದೊಡ್ಡ ಸ್ಫೋಟಕ್ಕೆ ಕಾರಣವಾಯಿತು.
#Breaking | Ambulance carrying pregnant woman blasts after catching fire in Maharashtra's #Jalgaon
— Abdul khabir jamily (@JamilKhabir396) November 13, 2024
Notably, no one was reported hurt as the driver's alertness made him notice the smoke coming out from vehicle, leading to quick evacuation of those on board.
More details awaited.… pic.twitter.com/sh0YMA59tn
ಕಳೆದ ತಿಂಗಳು ಉತ್ತರ ಪ್ರದೇಶದ ಪ್ರತಾಪ್‍ಗ್ರಹ ಜಿಲ್ಲೆಯಲ್ಲಿ ಇದೇ ರೀತಿಯ ಘಟನೆ ವರದಿಯಾಗಿತ್ತು. ಪೆಟ್ರೋಲ್ ಪಂಪ್ ಬಳಿ ನಿಲ್ಲಿಸಿದ್ದ ಅಂಬ್ಯುಲೆನ್ಸ್‌ಗೆ ಬೆಂಕಿ ಹೊತ್ತಿಕೊಂಡಿದ್ದು, ಕೆಲವೇ ನಿಮಿಷಗಳಲ್ಲಿ ಸ್ಫೋಟಗೊಂಡಿತ್ತು. ಚಾಲಕ ವಿವೇಕ್ ಗುಪ್ತಾ ಎನ್ನುವವರು ತನ್ನ ವಾಹನದಿಂದ ಹೊಗೆ ಬರುವುದನ್ನು ಕಂಡು ಹೊಗೆ ಬರಲು ಕಾರಣವೇನು ಎಂಬುದನ್ನು ಕಂಡುಹಿಡಿಯಲು ಸಾಧ್ಯವಾಗದ ಕಾರಣ ಹಿಂದಿನ ಬಾಗಿಲಿನ ಮೂಲಕ ಅಂಬ್ಯುಲೆನ್ಸ್‌ನಿಂದ ಹೊರಗೆ ಬಂದಿದ್ದಾರೆ.
ಇದನ್ನೂ ಓದಿ: ಅಪ್ಪನ ಜತೆ ನಡ್ಕೊಂಡು ಹೋಗ್ತಿದ್ದ ಬಾಲಕನ ಕಿಡ್ನಾಪ್‌ಗೆ ಯತ್ನ; ಭೀಕರ ದೃಶ್ಯ ಕ್ಯಾಮರಾದಲ್ಲಿ ಸೆರೆ-ವಿಡಿಯೊ ಇದೆ
ಗುಪ್ತಾ ಪೆಟ್ರೋಲ್ ಪಂಪ್ ಉದ್ಯೋಗಿಗಳ ಸಹಾಯದಿಂದ ಬೆಂಕಿಯನ್ನು ನಂದಿಸಲು ಪ್ರಯತ್ನಿಸಿದರು. ಆದರೆ ಯಶಸ್ವಿಯಾಗಲಿಲ್ಲ. ಬೆಂಕಿ ಬೇಗನೆ ಅಂಬ್ಯುಲೆನ್ಸ್‌ನಲ್ಲಿದ್ದ ಆಮ್ಲಜನಕ ಟ್ಯಾಂಕ್‍ಗೆ ಹರಡಿ ದೊಡ್ಡದಾಗಿ ಸ್ಫೋಟಗೊಂಡಿದೆ. ಈ ಘಟನೆಯಲ್ಲಿ ದಾರಿಹೋಕ ಅಮರ್ ಜೈಸ್ವಾಲ್ (20) ಎಂಬುವವರು ಗಾಯಗೊಂಡಿದ್ದು, ಅವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಅಂಬ್ಯುಲೆನ್ಸ್ ಯಾವುದೇ ಆಸ್ಪತ್ರೆಗೆ ಸಂಬಂಧಿಸಿದ ವಾಹನ ಆಗಿರಲಿಲ್ಲ, ಬದಲಾಗಿ ಅದೊಂದು ಖಾಸಗಿ ಸೇವೆಯ ವಾಹನವಾಗಿದ್ದು, ಅದನ್ನು ದೆಹಲಿಯಿಂದ ತರಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.