ತಾಯಿಯೊಂದಿಗೆ ಎಂಟು ತಿಂಗಳ ಮಗುವೊಂದು (eight months old baby) ಶ್ರೀ ಕೃಷ್ಣ ದಾಮೋದರಾಷ್ಟಕಂ (Shri Krishna Damodarastakam) ಪಠಣ ಮಾಡುವ ವಿಡಿಯೋವೊಂದು (Viral Video) ಸಾಮಾಜಿಕ ಜಾಲತಾಣದಲ್ಲಿ ಎಲ್ಲರ ಗಮನ ಸೆಳೆದಿದೆ. ಸಾಕಷ್ಟು ವೈರಲ್ ಆಗಿರುವ ಈ ವಿಡಿಯೋವನ್ನು ಲಕ್ಷಾಂತರ ಮಂದಿ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಅರ್ಜುನನ ಪುತ್ರ ಅಭಿಮನ್ಯು ತಾಯಿಯ ಗರ್ಭದಲ್ಲಿರುವಾಗಲೇ ಚಕ್ರವ್ಯೂಹವನ್ನು ಭೇದಿಸುವ ಕಲೆಯನ್ನು ತಂದೆಯಿಂದ ಕಲಿತಿರುತ್ತಾನೆ. ಅಂತೆಯೇ ಈ ಮಗು ತಾಯಿಯಿಂದ ಶ್ರೀ ಕೃಷ್ಣ ದಾಮೋದರಾಷ್ಟಕಂ ಅನ್ನು ಕಲಿತಿದೆ ಎನ್ನುವ ಸಾಲುಗಳೊಂದಿಗೆ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ.
ಇನ್ನೂ ಸರಿಯಾಗಿ ಕುಳಿತುಕೊಳ್ಳುವುದನ್ನು, ನಡೆಯುವುದನ್ನು ಕಲಿಯದ ಮಗುವಿನ ಈ ವಿಡಿಯೋ ಎಲ್ಲರನ್ನೂ ಮೋಡಿ ಮಾಡುವಂತಿದೆ. ಹಳೆಯ ವೈರಲ್ ವಿಡಿಯೋ ಇದಾಗಿದ್ದು, ಮತ್ತೊಮ್ಮೆ ಸಾಮಾಜಿಕ ಜಾಲತಾಣದಲ್ಲಿ ಎಲ್ಲರ ಗಮನ ಸೆಳೆಯುತ್ತಿದೆ. ವೈದಿಕ್ ಗ್ಯಾನ್ ಎಂಬ ಪುಟದಲ್ಲಿ ಹಂಚಿಕೊಂಡಿರುವ ಈ ವಿಡಿಯೋದಲ್ಲಿ ತಾಯಿ ಪಕ್ಕದಲ್ಲಿ ಮಲಗಿರುವ ಮಗು ತಾಯಿಯೊಂದಿಗೆ ಶ್ರೀ ಕೃಷ್ಣ ದಾಮೋದರಾಷ್ಟಕಂ ಅನ್ನು ಪಠಿಸುತ್ತಿದೆ.
ಶ್ರೀ ಕೃಷ್ಣ ದಾಮೋದರಾಷ್ಟಕಂನ ಕೊನೆಯ ಪದ್ಯವನ್ನು ಮಗು ಪೂರ್ಣಗೊಳಿಸವುದನ್ನು ಈ ವಿಡಿಯೋದಲ್ಲಿ ಕಾಣಬಹುದು. ಶ್ರೀ ಕೃಷ್ಣ ದಾಮೋದರಾಷ್ಟಕಂನ ಪ್ರತಿ ಸಾಲಿನ ಕೊನೆಯ ಪದವನ್ನು ಮಗುವು ಮುದ್ದಾಗಿ ಅಷ್ಟೇ ಸಲೀಸಾಗಿ ಉಚ್ಚರಿಸಿರುವುದನ್ನು ಕೇಳಬಹುದು.
महाभारत में अभिमन्यु ने चक्रव्यूह तोड़ने की कला अपने मां के पेट में सीखी थी।
— Vaidik Gyaan (@VaidikGyaan) October 2, 2024
इस बात पर शायद आपको विश्वास नही होता है ना!
तो यह वीडियो देखिए 8 महीने के बच्चे का।
अद्भुत अलौकिक सनातन संस्कृति🚩 pic.twitter.com/wzGZPqbEr6
ಇದು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಮಂದಿಯ ಗಮನ ಸೆಳೆದಿದೆ. ಎಂಟು ತಿಂಗಳ ಮಗುವಿನ ಈ ಆಧ್ಯಾತ್ಮಕ ಸಾಧನೆಗೆ ಸಾಕಷ್ಟು ಮೆಚ್ಚುಗೆಯೂ ವ್ಯಕ್ತವಾಗಿದೆ.
Jaya Bachchan: ಧರ್ಮೇಂದ್ರ ಅವರನ್ನು ಪ್ರೀತಿಸುತ್ತಿದ್ದೆ ಎಂದ ಜಯಾ; ಹೇಮಾ ಪ್ರತಿಕ್ರಿಯೆ ಹೇಗಿತ್ತು ನೋಡಿ
ಎರಡು ವರ್ಷಗಳ ಹಿಂದೊಮ್ಮೆ ಇದೇ ವಿಡಿಯೋ ವೈರಲ್ ಆಗಿ ಸಾಕಷ್ಟು ಮಂದಿಯ ಗಮನ ಸೆಳೆದಿತ್ತು. ಶ್ರೀ ಕೃಷ್ಣ ದಾಮೋದರಾಷ್ಟಕಂ ಒಂದು ಜನಪ್ರಿಯ ಸ್ತುತಿಯಾಗಿದ್ದು, ಭಗವಾನ್ ಕೃಷ್ಣನನ್ನು ದಾಮೋದರ ಎಂದು ಇದರಲ್ಲಿ ಕರೆಯಲಾಗುತ್ತದೆ ಮತ್ತು ಪೂಜಿಸಲಾಗುತ್ತದೆ. ಈ ಪ್ರಾರ್ಥನೆಯು ಮಹಾನ್ ಋಷಿ ಸತ್ಯವ್ರತರಿಂದ ರಚಿಸಲ್ಪಟ್ಟಿದೆ ಎನ್ನಲಾಗಿದೆ.