ಕೆಲವರಿಗೆ ಐಷಾರಾಮಿ ಮನೆಗಳನ್ನು ಕಟ್ಟಿಸುವ ಕನಸಿರುತ್ತದೆ, ಆದರೆ ಈ ಕನಸನ್ನು ನನಸು ಮಾಡಿಕೊಳ್ಳಲು ಎಲ್ಲರಿಗೂ ಸಾಧ್ಯವಾಗುವುದಿಲ್ಲ. ಆದರೆ ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳ ಪ್ರಭಾವದಿಂದಾಗಿ ವಿ ಲಾಗರ್ ಗಳು ಇಂತಹ ಐಷಾರಾಮಿ ಮನೆಗಳ ಟೂರ್ (HomeTour) ಮಾಡಿ ಗೃಹ ನಿರ್ಮಾಣದಲ್ಲಿ ಆಸಕ್ತಿ ಇರುವವರಿಗೆ ಇಂತಹ ಐಷಾರಾಮಿ ಮನೆಗಳ ನಿರ್ಮಾಣ ವಿಧಾನಗಳನ್ನು ಡಿ-ಕೋಡ್ ಮಾಡುತ್ತಿರುತ್ತಾರೆ. ಅಂತಹ ಒಂದು ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ (Viral Video) ಆಗುತ್ತಿದೆ.
ಭಾರತದ ಅತ್ಯಂತ ದುಬಾರಿ ರೆಸಿಡೆನ್ಷಿಯಲ್ ಸೊಸೈಟಿಗಳಲ್ಲಿ ಒಂದಾಗಿರುವ, ಗುರ್ಗಾಂವ್ ನಲ್ಲಿರುವ ಡಿ.ಎಲ್.ಎಫ್. ಕೆಮಿಲ್ಲಿಯಾಸ್ ನಲ್ಲಿರುವ ಅಲ್ಟ್ರಾ ಲಕ್ಷುರಿ ಅಪಾರ್ಟ್ಮೆಂಟ್ ಒಂದನ್ನು ಕಂಟೆಟ್ ಕ್ರಿಯೇಟರ್ ಆಗಿರುವ ಪ್ರಿಯಮ್ ಸಾರಸ್ವತ್ ನೆಟ್ ಲೋಕದಲ್ಲಿ ಅನಾವರಣಗೊಳಿಸಿದ್ದಾರೆ. ದೆಹಲಿ ಎನ್.ಸಿ.ಆರ್. ಭಾಗದ ಪ್ರತಿಷ್ಠಿತ ಬ್ಯುಸಿನೆಸ್ ಮ್ಯಾನ್ ಗಳು, ದೊಡ್ಡ ದೊಡ್ಡ ಕಂಪೆನಿಗಳ ಸಿಇಒಗಳು ಮತ್ತು ಅತ್ಯಂತ ಶ್ರೀಮಂತ ವ್ಯಕ್ತಿಗಳು ವಾಸವಾಗಿರುವ ಈ ಅಪಾರ್ಟ್ಮೆಂಟ್ ದೇಶದ ಪ್ರತಿಷ್ಠಿತ ಅಪಾರ್ಟ್ಮೆಂಟ್ ಗಳಲ್ಲಿ ಒಂದಾಗಿದೆ.
ಡಿ.ಎಲ್.ಎಫ್. ಕೆಮೆಲ್ಲಿಯಾಸ್ ಒಳಗೆ ಏನೇನಿದೆ?
ಈ ವಿಡಿಯೋದಲ್ಲಿರುವಂತೆ, ವೃತ್ತಿಯಲ್ಲಿ ಆರ್ಕಿಟೆಕ್ಟ್ ಆಗಿರುವ ಆ ಲಕ್ಷುರಿ ಮನೆಯೊಡತಿ ಪ್ರಿಯಮ್ ಅವರಿಗೆ ಮನೆಯ ವಿಶೇಷತೆಗಳನ್ನು ವಿವರಿಸುತ್ತಾರೆ. ಆಕೆಯ ಪತಿ ಉದ್ಯಮಿಯಾಗಿದ್ದು, ಆಕೆಯ ಪುತ್ರ ನ್ಯೂಯಾರ್ಕ್ ನಲ್ಲಿ ಕಲಿಯುತ್ತಿದ್ದಾರೆ.
ಮನೆಯ ಎದುರು ಭಾಗದಲ್ಲಿರುವ ಡಬಲ್ ಡೋರ್ ಓಪನ್ ಆಗುವ ಮೂಲಕ ಅತಿಥಿಗಳು ಮನೆಯ ಒಳಗೆ ಪ್ರವೇಶಿಸುತ್ತಾರೆ. ಮನೆಯ ಒಳಗೆ ಬಂದ ಕೂಡಲೇ ಅಲ್ಲಿ ಗೋಡೆಯಲ್ಲಿರುವ ಆಕರ್ಷಕ ಮಿರರ್ ಆರ್ಟ್ ವರ್ಕ್ ಗಮನ ಸೆಳೆಯುತ್ತದೆ. ಬಂಗಾರದ ಬಣ್ಣದ ಗಿಡಗಳು ಮನೆಯ ಒಳಾಂಗಣಕ್ಕೆ ಚಿನ್ನದ ಮೆರುಗನ್ನು ನೀಡಿದೆ.
ಈ ಅಪಾರ್ಟ್ಮೆಂಟ್ ʼಪಬ್ಲಿಕ್ ಪಾರ್ಟ್ʼ ಹಾಗೂ ʼಪ್ರೈವಟ್ ಪಾರ್ಟ್ʼ ಎಂದು ಎರಡು ವಿಭಾಗಗಳನ್ನು ಹೊಂದಿದ್ದು, ಪಬ್ಲಿಕ್ ಪಾರ್ಟ್ ನಲ್ಲಿ ಅತಿಥಿಗಳ ಮನರಂಜನೆಗಾಗಿ ವ್ಯವಸ್ಥೆ ಇದ್ದರೆ, ಪ್ರೈವೇಟ್ ಪಾರ್ಟ್ ನಲ್ಲಿ ಮಲಗುವ ಕೋಣೆಗಳಿವೆ.
ಇದನ್ನೂ ಓದಿ: Viral Video: ಹೊಸ ಕಾರು ಖರೀದಿ ವೇಳೆ ಗಾಳಿಯಲ್ಲಿ ಗುಂಡು ಹಾರಿಸಿ ಸಂಭ್ರಮಿಸಿದ! ಬೀಳಲಿದೆ ಕೇಸ್
ಇನ್ನು ಮನೆಯ ಅತಿ ದೊಡ್ಡ ಭಾಗವೆಂದರೆ, 72 ಅಡಿಗಳ ಗ್ಲಾಸ್ ಫ್ರಂಟ್ ಬಾಲ್ಕನಿ. ಇಲ್ಲಿಯೇ ಕುಟುಂಬ ಸದಸ್ಯರು ಒಟ್ಟಾಗಿ ಆರಾಮದಾಯಕವಾಗಿ ಕಾಲ ಕಳೆಯಲು ಅನುಕೂಲವಾಗುವಂತೆ ಇದನ್ನು ನಿರ್ಮಾಣ ಮಾಡಲಾಗಿದೆ. ಇನ್ನು ಪಕ್ಕದಲ್ಲಿರು ದೊಡ್ಡ ಕೋಣೆಯಲ್ಲಿ ಡೈನಿಂಗ್ ಟೇಬಲ್, ಆರಾಮದಾಯಕವಾಗಿ ಕುಳಿತುಕೊಳ್ಳುವ ಸ್ಥಳ ಮತ್ತು ಕುಟುಂಬ ಸದಸ್ಯರು ಆರಾಮದಾಯಕವಾಗಿ ಟೈಂ ಪಾಸ್ ಮಾಡಿಕೊಳ್ಳುವ ಜಾಗವಿದೆ.
ಈ ಒಟ್ಟು ಇಂಟೀರಿಯರ್ ವ್ಯವಸ್ಥೆಯನ್ನು ಆರ್ಕಿಟೆಕ್ಟ್ ಅವರು, ʼಹೆಚ್ಚು ಸುಧಾರಿತ, ಕಡಿಮೆ ಪ್ರಮಾಣದಲ್ಲಿರುವ, ಮತ್ತು ಆಹ್ಲಾದಯಕ ಬಣ್ಣಗಳನ್ನು ಹೊಂದಿರುವಂತದ್ದು..ʼ ಎಂದು ಬಣ್ಣಿಸಿದ್ದಾರೆ.
72 ಅಡಿಯ ಬಾಲ್ಕನಿಯಲ್ಲಿ ಸರಿಸುಮಾರು ೫೦ ಜನರು ಸೇರುವಷ್ಟು ಸ್ಥಳಾವಕಾಶವಿದ್ದು, ಇಲ್ಲಿಂದ ಕುಳಿತು ನೋಡಿದರೆ ಸ್ವಿಮ್ಮಿಂಗ್ ಪೂಲ್, ಹಸಿರು ಗಿಡಗಳು ಮತ್ತು ಗುರ್ಗಾಂವ್ ನ ಕಾಡು ಪ್ರದೇಶ ನಮ್ಮ ಕಣ್ಣಿಗೆ ತಂಪನ್ನು ನೀಡುತ್ತದೆ.
ಈ ಐಷಾರಾಮಿ ಅಪಾರ್ಟ್ಮೆಂಟ್ ನಲ್ಲಿ ಒಂದು ಮಾಸ್ಟರ್ ಬೆಡ್ ರೂಂ, ಸೆಕೆಂಡ್ ಬೆಡ್ ರೂಂ, ಒಂದು ಬಾರ್ ಏರಿಯಾ, ಒಂದು ವರ್ಕಿಂಗ್ ಸ್ಪೇಸ್ ಇದ್ದು ಇವೆಲ್ಲವನ್ನೂ ತುಂಬಾ ಯೋಜಿತ ರೀತಿಯಲ್ಲಿ ನಿರ್ಮಿಸಲಾಗಿದೆ. ಡಿ.ಎಲ್.ಎಫ್.ನ ದಿ ಕೆಮೆಲ್ಲಿಯಾಸ್ ಅಪಾರ್ಟ್ಮೇಂಟ್ ಗಳು 100 ಕೋಟಿ ರೂ. ವರೆಗೆ ಬೆಲೆಗೆ ಮಾರಾಟವಾದದ್ದೂ ಇದೆ. ಇದು ದೆಹಲಿ ಎನ್.ಆರ್.ಸಿ. ಪ್ರದೇಶಲ್ಲೇ ಅತೀ ಹೆಚ್ಚಿನ ಬೆಲೆಯನ್ನು ಹೊಂದಿರುವ ಅಪಾರ್ಟ್ಮೆಂಟ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.