ನವದೆಹಲಿ: ಇತ್ತೀಚೆಗೆ ಜನಪ್ರಿಯ ಇ-ಕಾಮರ್ಸ್ ವೆಬ್ಸೈಟ್ ಸ್ವಿಗ್ಗಿ ಇನ್ಸ್‌ಟಾಮಾರ್ಟ್‌ನ ಹಗರಣವೊಂದು ಬೆಳಕಿಗೆ ಬಂದಿದೆ. ವ್ಯಕ್ತಿಯೊಬ್ಬರು ಸೋಶಿಯಲ್ ಮೀಡಿಯಾ ಪ್ಲಾಟ್‍ಫಾರ್ಮ್‍ನಲ್ಲಿ ಸ್ವಿಗ್ಗಿ ಇನ್ಸ್‌ಟಾಮಾರ್ಟ್‌ನಿಂದ ಮೋಸ ಹೋಗಿರುವುದಾಗಿ ತಿಳಿಸಿದ್ದಾರೆ. ಇದು ಸಿಕ್ಕಾಪಟ್ಟೆ ವೈರಲ್(Viral Video) ಆಗಿದೆ.
ಆನ್‍ಲೈನ್‍ನಲ್ಲಿ ಖರೀದಿಸಿದ ತರಕಾರಿಗಳ ತೂಕದಲ್ಲಿ ಬಹಳಷ್ಟು ವ್ಯತ್ಯಾಸವಿದೆ ಎಂದು ಅವರು ತಿಳಿಸಿದ್ದಾರೆ. ಹೂಕೋಸು ಸುಮಾರು ಅರ್ಧ ಕೆಜಿ ತೂಕದ ಬದಲು ಕೇವಲ 145 ಗ್ರಾಂ ತೂಕ ಇದೆ ಅಂತೆಯೇ ಅವರು 250 ಗ್ರಾಂ ಕ್ಯಾಪ್ಸಿಕಂಗೆ ಹಣ ಪಾವತಿಸಿದರೆ ಅದು ಮನೆಗೆ ಬಂದಾಗ ಕೇವಲ 170 ಗ್ರಾಂ ಇತ್ತು. ಈ ಹಗರಣವನ್ನು ರೆಕಾರ್ಡ್ ಮಾಡಿ ಅದಕ್ಕೆ ಪುರಾವೆಗಳನ್ನು ಒದಗಿಸಿ ರೆಡ್ಡಿಟ್‍ನಲ್ಲಿ ವರದಿ ಮಾಡಿದ್ದಾರೆ. ಸ್ವಿಗ್ಗಿ ಇನ್ಸ್‌ಟಾಮಾರ್ಟ್ ಬಳಕೆದಾರರನ್ನು ಎಚ್ಚರಿಸಲು, ಈ ಪೋಸ್ಟ್‌ಗೆ “ಸ್ಕ್ಯಾಮ್ ಅಲರ್ಟ್: ಇನ್ಸ್‌ಟಾಮಾರ್ಟ್‌ನಿಂದ ಕಡಿಮೆ ತೂಕದ ತರಕಾರಿಗಳು” ಎಂದು ಶೀರ್ಷಿಕೆ ನೀಡಿದ್ದಾರೆ.
Scam Alert: Underweight vegetables from Instamart
byu/PsyHil89 inswiggy
“ಒಂದು ತಿಂಗಳ ಹಿಂದೆ ಶ್ರಾದ್ಧದ ಸಮಯದಲ್ಲಿ, ತರಕಾರಿಗಳು ಸ್ಥಳೀಯ ಮಾರಾಟಗಾರರ ಬಳಿ ಸ್ಟಾಕ್ ಇರದ ಕಾರಣ ನಾನು ಇನ್ಸ್‌ಟಾಮಾರ್ಟ್‌ನಿಂದ ಆರ್ಡರ್ ಮಾಡಿದೆ. ಸ್ಥಳೀಯ ಮಾರುಕಟ್ಟೆಗೆ ಹೋಲಿಸಿದರೆ ಇದರಲ್ಲಿ ತರಕಾರಿಗಳ ಬೆಲೆಗಳು ಸ್ವಲ್ಪ ದುಬಾರಿಯಾಗಿದ್ದವು ಆದರೆ ಅಗತ್ಯವಾಗಿದ್ದರಿಂದ ಅದಕ್ಕಾಗಿ ಹಣ ನೀಡಿದೆ” ಎಂದು ಅವರು ಬರೆದಿದ್ದಾರೆ.
ಅವರು ಇನ್ಸ್‌ಟಾಮಾರ್ಟ್‌ನಿಂದ ಖರೀದಿಸಿದ ಪ್ರತಿ ತರಕಾರಿಯನ್ನು ಡಿಜಿಟಲ್ ಮಾನಿಟರ್‌ನಿಂದ ಅಳೆದು ತಾವು ಮೋಸ ಹೋಗಿರುವ ಬಗ್ಗೆ ಅರಿತುಕೊಂಡಿದ್ದಾರೆ. ಹಾಗೇ ಯಾರು ತನ್ನಂತೆ ಮೋಸ ಹೋಗಬಾರದೆಂದು ಇದನ್ನು ಪೋಟೊ ತೆಗೆದು ಸೋಶಿಯಲ್ ಮಿಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.
ಇದನ್ನೂ ಓದಿ:ಮಗುವಿನ ಅಳು…ಮಹಿಳೆಯ ಕಿರುಚಾಟ ಕೇಳಿ ಹೊರಬಂದ್ರೆ ಅಷ್ಟೇ…ಒಂಟಿ ಮನೆಗಳೇ ಈ ಕುರುವಾ ಗ್ಯಾಂಗ್‌ನ ಟಾರ್ಗೆಟ್!
ಹಾಗೇ ಉತ್ಪನ್ನಗಳ ಮೇಲೆ ಹಾಕಿದ ಸ್ಟಿಕ್ಕರ್‌ಗಳಲ್ಲಿ ತೂಕ ಹಾಕಿದ್ದಾರೆ ಎಂದು ಅದನ್ನು ನಂಬಲು ಹೋಗಬೇಡಿ. ವಾಸ್ತವವಾಗಿ ಅವುಗಳನ್ನು ಪರಿಶೀಲಿಸಿ ಮತ್ತು ಮೋಸ ಕಂಡುಬಂದಾಗ ದೂರು ನೀಡಿ ಎಂದು ಅವರು ಬರೆದಿದ್ದಾರೆ. “ಸ್ವಿಗ್ಗಿ ಮಾಡಿದ್ದು ನಾಚಿಕೆಗೇಡಿನ ಕೆಲಸ” ಎಂದು ಅವರು ಈ ಘಟನೆಯನ್ನು ಸರ್ಕಾರದ ಇನ್‌ಗ್ರಾಂ ಗ್ರಾಹಕ ಸಹಾಯವಾಣಿಗೆ ದೂರು ಮಾಡಿದ್ದಾರೆ ಮತ್ತು ಮೊತ್ತವನ್ನು ರಿವರ್ಸ್ ಕ್ರೆಡಿಟ್ ಮಾಡಲು ಬ್ಯಾಂಕಿಗೆ ಮೇಲ್ ಮಾಡಿದ್ದಾರೆ ಎಂದು ಉಲ್ಲೇಖಿಸಿದ್ದಾರೆ. ಆದರೆ ಇಲ್ಲಿಯವರೆಗೆ, ಸ್ವಿಗ್ಗಿ ಇನ್ಸ್‌ಟಾಮಾರ್ಟ್ ಈ ಪೋಸ್ಟ್‌ಗೆ ಪ್ರತಿಕ್ರಿಯಿಸಿಲ್ಲ ಎನ್ನಲಾಗಿದೆ.