ಝೆರೋಧಾ ಸಹ-ಸಂಸ್ಥಾಪಕ (Zerodha co-founder) ನಿಖಿಲ್ ಕಾಮತ್ (Nikhil Kamath) ಇತ್ತೀಚೆಗೆ ಬೆಂಗಳೂರಿನಲ್ಲಿ (Bengaluru) ಖರೀದಿ ಮಾಡಿರುವ ಅಪಾರ್ಟ್ಮೆಂಟ್‌ನ ಚಿತ್ರವನ್ನು ಎಕ್ಸ್ ನಲ್ಲಿ ಹಂಚಿಕೊಂಡಿದ್ದು, ಭಾರಿ ವೈರಲ್ (Viral Video) ಆದರೂ ವ್ಯಾಪಕ ಟೀಕೆಗೆ ಗುರಿಯಾಗಿದೆ. ಕೋಟ್ಯಧಿಪತಿ ಆಗಿರುವ ಝೆರೋಧಾ ಸಹ-ಸಂಸ್ಥಾಪಕ ನಿಖಿಲ್ ಕಾಮತ್ ಅವರು ಈ ಹಿಂದೆ ಬಾಡಿಗೆ ಮನೆಯಲ್ಲಿದ್ದು, ಇದೀಗ ಬೆಂಗಳೂರಿನಲ್ಲಿ ತಮ್ಮ ಮೊದಲ ಅಪಾರ್ಟ್ಮೆಂಟ್ ಅನ್ನು ಖರೀದಿಸಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಚರ್ಚೆ ಉಂಟು ಮಾಡಿದೆ.
ನಿಖಿಲ್ ಕಾಮತ್ ಅವರು ಖರೀದಿ ಮಾಡಿರುವ ಹೊಸ ಮತ್ತು ಹಳೆಯ ಮನೆಯ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಂಡಿದೆ. ಬೆಂಗಳೂರಿನ ಕಿಂಗ್‌ಫಿಶರ್ ಟವರ್‌ನಲ್ಲಿರುವ ಕಾಮತ್ ಅವರು ಖರೀದಿ ಮಾಡಿರುವ ಅಪಾರ್ಟ್ಮೆಂಟ್ 7,000 ಚದರ ಅಡಿ ವಿಸ್ತಾರವಾಗಿದ್ದು, ವಾಸ್ತುಶಿಲ್ಪ ಅದ್ಭುತವಾಗಿದ್ದರೂ ಒಳಾಂಗಣ ವಿನ್ಯಾಸ ವ್ಯಾಪಕ ಟೀಕೆಗೆ ಗುರಿಯಾಗಿದೆ.
In all of this Nikhil Kamath house debate – what is being lost sight of is the absolute travesty that are its interiors.
— Rahul Gonsalves (@gonsalves_r) October 23, 2024
Ser. You can afford far better interior designers/architects.
Source (https://t.co/HZu2zNRXH1) pic.twitter.com/FG1ou21Q27
ಫೋನ್ ಪೇನ ವಿನ್ಯಾಸ ಮುಖ್ಯಸ್ಥ ರಾಹುಲ್ ಗೊನ್ಸಾಲ್ವೆಸ್ ಅವರು ಕಾಮತ್ ಅವರ ಮನೆಯ ಒಳಾಂಗಣದ ಚಿತ್ರವನ್ನು ಹಂಚಿಕೊಂಡು, ನೀವು ಉತ್ತಮ ವಿನ್ಯಾಸಗಾರರನ್ನು ಆಯ್ಕೆ ಮಾಡಬಹುದಿತ್ತು ಎಂದು ಹೇಳಿದ್ದಾರೆ. ಇದನ್ನು ನೂರಾರು ಎಕ್ಸ್ ಬಳಕೆದಾರರು ಒಪ್ಪಿಕೊಂಡಿದ್ದಾರೆ. ಇದು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಚರ್ಚೆಯನ್ನು ಹುಟ್ಟು ಹಾಕಿದೆ. ಸಾಕಷ್ಟು ಮಂದಿ ಸರ್, ನೀವು ಉತ್ತಮ ಇಂಟೀರಿಯರ್ ಡಿಸೈನರ್‌ಗಳು, ವಾಸ್ತುಶಿಲ್ಪಿಗಳನ್ನು ಗೊತ್ತುಪಡಿಸಬಹುದಿತ್ತು ಎಂದು ಹೇಳಿದ್ದಾರೆ. ಕೆಲವರು 38 ವರ್ಷ ವಯಸ್ಸಿನ ಕೋಟ್ಯಧಿಪತಿಯ ಅಭಿರುಚಿ ಚೆನ್ನಾಗಿಲ್ಲ ಎಂದು ಹೇಳಿದ್ದರೆ, ಇನ್ನು ಕೆಲವರು, ಹಣವು ಅಭಿರುಚಿಯನ್ನು ಹುಟ್ಟಿಸುವುದಿಲ್ಲ ಎಂದು ಗೇಲಿ ಮಾಡಿದ್ದಾರೆ.
ಆದರೂ ಕೆಲವರು ಈ ಒಳಾಂಗಣವನ್ನು ಸಮರ್ಥಿಸಿಕೊಂಡರು, ನಿಖಿಲ್ ಕಾಮತ್ ಅವರು ಅಪಾರ್ಟ್ಮೆಂಟ್ ಖರೀದಿಸಿದ್ದಾರೆ. ಬಹುಶಃ ಅದರ ಒಳಾಂಗಣವನ್ನು ಬದಲಾಯಿಸಲು ಸಾಧ್ಯವಿಲ್ಲವೇನೋ ಎಂದು ಹೇಳಿದ್ದಾರೆ.