Thursday, 12th December 2024

Viral Video: ಮೊಬೈಲ್ ಕಸಿದುಕೊಂಡ ತಾಯಿಯ ತಲೆಗೆ ಬ್ಯಾಟ್‌ನಿಂದ ಬಾರಿಸಿದ ಬಾಲಕ!

Viral Video

ಇಂದಿನ ದಿನಗಳಲ್ಲಿ ಹೆಚ್ಚಿನ ಮಕ್ಕಳು ಮೊಬೈಲ್ ವ್ಯಸನಿಗಳಾಗಿದ್ದಾರೆ.  ಮೊಬೈಲ್ ನೋಡದೆ  ಮಕ್ಕಳು ಯಾವುದೇ ಕೆಲಸವನ್ನೂ ಮಾಡುವುದಿಲ್ಲ. ಎಷ್ಟರ ಮಟ್ಟಿಗೆ ಅವರಿಗೆ ಮೊಬೈಲ್ ಗೀಳಿದೆ ಎಂದರೆ ಒಂದು ವೇಳೆ ಮೊಬೈಲ್ ಅವರಿಗೆ ಸಿಗದಿದ್ದರೆ ಮೊಬೈಲ್ ಪಡೆದುಕೊಳ್ಳಲು ಅವರು ಯಾವ ಕೆಲಸಕ್ಕೂ ಕೂಡ ಮುಂದಾಗುತ್ತಾರೆ. ಅಂತಹದೊಂದು ಘಟನೆ ಇತ್ತೀಚೆಗೆ ನಡೆದಿದ್ದು, ತಾಯಿ ತನ್ನ ಕೈಯಲ್ಲಿದ್ದ ಮೊಬೈಲ್ ಕಸಿದುಕೊಂಡಿದ್ದಕ್ಕೆ ಕೋಪಗೊಂಡ ಬಾಲಕ ಆಕೆಯ ತಲೆಗೆ ಬ್ಯಾಟ್‍ನಿಂದ ಹೊಡೆದಿದ್ದಾನೆ. ಸದ್ಯ ಈ ಘಟನೆಗೆ ಸಂಬಂಧಪಟ್ಟ  ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video)ಆಗಿದೆ. ಇದನ್ನು ನೋಡಿ ಅನೇಕರು ಬೆಚ್ಚಿಬಿದ್ದಿದ್ದಾರೆ. ಆದರೆ ಇದು ಮೊಬೈಲ್‌ ವ್ಯಸನದ ವಿರುದ್ಧ ಸಂದೇಶ ನೀಡುವ ವಿಡಿಯೊ ಆಗಿದೆ.

ಈ ವೈರಲ್ ವಿಡಿಯೊದಲ್ಲಿ ಶಾಲಾ ಸಮವಸ್ತ್ರದಲ್ಲಿರುವ ಬಾಲಕ ಹಾಸಿಗೆಯ ಮೇಲೆ ಕುಳಿತು ಮೊಬೈಲ್ ನೋಡುತ್ತಿದ್ದ. ಆಗ ಬಾಲಕನ ಬಳಿಗೆ ಬಂದ ತಾಯಿ ಆತನ ಕೈಯಿಂದ ಮೊಬೈಲ್ ಕಸಿದುಕೊಂಡು ಬೈದು ಓದಲು ಹೇಳಿದ್ದಾರೆ. ಇದರಿಂದ ಕೋಪಗೊಂಡ ಬಾಲಕ ತಾಯಿ ಮೊಬೈಲ್‍ನಲ್ಲಿ ಮಾತನಾಡುತ್ತಾ ಕುಳಿತಿದ್ದಾಗ ಅಲ್ಲಿದ್ದ ಬ್ಯಾಟ್‍ನ್ನು ತೆಗೆದುಕೊಂಡು ಹಿಂದಿನಿಂದ ತಾಯಿಯ ತಲೆಗೆ ಹೊಡೆದಿದ್ದಾನೆ.

ಇದರಿಂದ ತಾಯಿ ಪ್ರಜ್ಞೆ ತಪ್ಪಿ ಕೆಳಗೆ ಬಿದ್ದಿದ್ದಾಳೆ. ಆದರೆ ಆತ ತನ್ನ ತಾಯಿಯ ಮೇಲೆ ಕನಿಕರ ತೋರದೆ ಓಡಿ ಹೋಗಿ ಆಕೆಯ ಕೈಯಿಂದ ಮೊಬೈಲ್ ಕಸಿದುಕೊಂಡು ನೋಡಲು ಶುರುಮಾಡಿದ್ದಾನೆ.ಈ ವಿಡಿಯೊ ಸೋಶಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗಿದೆ.

ಇದನ್ನೂ ಓದಿ:ಕಾರಿನಲ್ಲಿ ಹೋಗುತ್ತಿದ್ದ ದಂಪತಿಯನ್ನು ಮಾರಕಾಸ್ತ್ರ ಹಿಡಿದುಕೊಂಡು ಬೆನ್ನಟ್ಟಿದ ದರೋಡೆಕೋರರು; ವಿಡಿಯೊ ವೈರಲ್‌

ಈ ವಿಡಿಯೊಕ್ಕೆ ಹಲವರು ಕಾಮೆಂಟ್ ಮಾಡಿದ್ದಾರೆ. ಕೆಲವರು ಈ ವಿಡಿಯೊವನ್ನು ತುಂಬಾ ಹಳೆಯದು ಎಂದು ಹೇಳುತ್ತಿದ್ದಾರೆ. ಅದೇ ಸಮಯದಲ್ಲಿ, ಕೆಲವರು ಈ ವಿಡಿಯೊವನ್ನು ಪೋಸ್ಟ್ ಮಾಡಿ ಇದು ನಿಜ ಜೀವನದ ಘಟನೆ ಎಂದು ಬಣ್ಣಿಸಿದ್ದಾರೆ. ಆದರೆ ಈ ಎಲ್ಲಾ ಚರ್ಚೆಗಳಲ್ಲಿ ಒಂದು ವಿಷಯ ಸಾಮಾನ್ಯವಾಗಿದೆ. ವಿಡಿಯೊ ಹಳೆಯದೋ, ನೈಜವೋ ಅಥವಾ ಸ್ಕ್ರಿಪ್ಟ್ ಆಗಿರಲಿ. ಆದರೆ ಈ ವಿಡಿಯೊದ ಮೂಲಕ, ಮೊಬೈಲ್ ಮಕ್ಕಳಿಗೆ ಎಷ್ಟು ಅಪಾಯಕಾರಿ ಎಂದು ಹೇಳುವ ಪ್ರಯತ್ನವನ್ನು ಮಾಡಲಾಗಿದೆ.