ಲಖನೌ: ವರದಕ್ಷಿಣೆಯನ್ನು ಬಹಳ ಹಿಂದಿನ ಕಾಲದಲ್ಲಿ ನೀಡಲಾಗುತ್ತಿತ್ತು. ನಂತರ ಇದೊಂದು ಸಾಮಾಜಿಕ ಪಿಡುಗಾಗಿ ಪರಿಣಮಿಸಿತ್ತು. ಇದರಿಂದ ಎಷ್ಟೋ ಹೆಣ್ಣುಮಕ್ಕಳ ಜೀವನ ಹಾಳಾಗಿದೆ. ಹಾಗಾಗಿ ವರದಕ್ಷಿಣೆ ಪಡೆಯುವುದನ್ನು ಅಪರಾಧವೆಂದು ಪರಿಗಣಿಸಲಾಗಿದೆ. ಆದರೂ ಇಂದಿಗೂ ಜನರು ವರದಕ್ಷಿಣೆ ಕೇಳುತ್ತಿದ್ದಾರೆ, ಮತ್ತು ನೀಡುತ್ತಿದ್ದಾರೆ. ಇತ್ತೀಚೆಗೆ ಉತ್ತರಪ್ರದೇಶದ ಮೀರತ್‍ನಲ್ಲಿ ನಡೆದ ಮದುವೆಯ ವೈರಲ್ ವಿಡಿಯೊವೊಂದು ಸೋಶಿಯಲ್ ಮೀಡಿಯಾದಲ್ಲಿ ಬಿರುಗಾಳಿ ಎಬ್ಬಿಸಿದೆ. ಯಾಕೆಂದರೆ ಇದರಲ್ಲಿ ವಧುವಿನ ಕುಟುಂಬದವರು ವರನಿಗೆ ವರದಕ್ಷಿಣೆ ನೀಡುವುದು ಕಂಡುಬಂದಿದೆ. ಹಾಗಾಗಿ ಈ ವಿಡಿಯೊ ಸೋಶಿಯಲ್ ಮೀಡಿಯಾ ಬಳಕೆದಾರರ ಭಾರಿ ಗಮನವನ್ನು ಸೆಳೆದು ಸಿಕ್ಕಾಪಟ್ಟೆ ವೈರಲ್(Viral Video) ಆಗಿದೆ.
ವೈರಲ್ ಆಗಿರುವ ವಿಡಿಯೊದಲ್ಲಿ ಮುಸ್ಲಿಂ ಕುಟುಂಬದ ಮದುವೆಯ ಕೂಟದಲ್ಲಿ ವಧುವಿನ ಕುಟುಂಬವು 2.5 ಕೋಟಿ ರೂ.ಗಳನ್ನು ವರನ ಕಡೆಯವರಿಗೆ ಹಸ್ತಾಂತರಿಸಿದ್ದಾರೆ. ಅಲ್ಲದೇ ಭಾರತೀಯ ವಿವಾಹಗಳಲ್ಲಿ ಸಾಂಪ್ರದಾಯಿಕ ಅಭ್ಯಾಸವಾದ ವಧುವಿನ ಸಂಬಂಧಿಕರು ವರನ ಬೂಟುಗಳನ್ನು ತೆಗೆದುಕೊಳ್ಳುವಂತಹ ಜೂತಾ ಚುರೈ ಸಂಪ್ರದಾಯದ ಭಾಗವಾಗಿ ವರನ ಅತ್ತಿಗೆಗೆ 11 ಲಕ್ಷ ರೂ.ಗಳನ್ನು ಉಡುಗೊರೆಯಾಗಿ ನೀಡಲಾಯಿತು. ಅಂತೆಯೇ, ನಿಕಾಹ್ ಸಮಾರಂಭವನ್ನು ನಿರ್ವಹಿಸಿದ ಮೌಲಾನಾಗೆ 11 ಲಕ್ಷ ರೂ.ಗಳನ್ನು ಮತ್ತು ಸ್ಥಳೀಯ ಮಸೀದಿಗೆ 8 ಲಕ್ಷ ರೂ.ಗಳನ್ನು ಉಡುಗೊರೆಯಾಗಿ ನೀಡಲಾಗಿದೆ.
आज मुसलमान कहता हैं कि उनके हालात ऐसे क्यों है?
— Aarzoo (@aarzoo31054) December 2, 2024
Up:#मेरठ के NH रिसोर्ट में एक शाही निकाह संपन्न हुआ,जिसमें ₹2.56 करोड़ दूल्हे को, ₹11 लाख जूता चुराई,₹11 लाख निकाह पढ़ाई, ₹8 लाख मस्जिद को…
अफ़सोस ग़रीब बेटियां यही सब रिवाज कि वजह से बैठी रह जातीं हैं।😢#islam #muslim #nikaah pic.twitter.com/t5SepBcEM9
ಮೀರತ್‍ನ ಎನ್ಎಚ್ -58 ರ ರೆಸಾರ್ಟ್‍ನಲ್ಲಿ ನಡೆದ ಮದುವೆ ಸಮಾರಂಭದಲ್ಲಿ ರೆಕಾರ್ಡ್ ಮಾಡಲಾದ ಈ ವಿಡಿಯೊದಲ್ಲಿ ದೊಡ್ಡ ಜನಸಮೂಹದ ನಡುವೆ ನಗದು ತುಂಬಿದ ಸೂಟ್‌ಕೇಸ್‌ಗಳನ್ನು ಹಸ್ತಾಂತರಿಸಲಾಗಿದೆ. ನಗದು ಹಣವನ್ನು ಉಡುಗೊರೆಯಾಗಿ ನೀಡುವಾಗ ಅಲ್ಲಿ ಭಾಗವಹಿಸಿದ್ದ ಹಲವಾರು ಅತಿಥಿಗಳು ಅವರ ಸುತ್ತ ನೆರೆದಿದ್ದಾರೆ. ಇದು ಮದುವೆಯ ಭವ್ಯ ಸ್ವರೂಪವನ್ನು ಎತ್ತಿ ತೋರಿಸುತ್ತದೆ.
ವಿಡಿಯೊದಲ್ಲಿ, ವ್ಯಕ್ತಿಯೊಬ್ಬರು “ಕಾರು ಖರೀದಿಸಲು 75 ಲಕ್ಷ ರೂ.ಗಳನ್ನು ನಗದು ರೂಪದಲ್ಲಿ ನೀಡಲಾಗುತ್ತಿದೆ” ಎಂದು ಘೋಷಿಸುತ್ತಿರುವುದು ಕಂಡುಬರುತ್ತದೆ. ಇದರ ನಂತರ, ವಧುವಿನ ಕಡೆಯವರು ವರನ ಕಡೆಯವರಿಗೆ ಕೆಲವು ಸೂಟ್ ಕೇಸ್‍ಗಳನ್ನು ನೀಡುತ್ತಾರೆ. ಈ ಸೂಟ್ ಕೇಸ್‍ಗಳು ನೋಟುಗಳಿಂದ ತುಂಬಿವೆ ಎಂದು ನಂಬಲಾಗಿದೆ.
ವಿಡಿಯೊ ಮುಂದುವರಿದು 8 ಲಕ್ಷ ರೂ.ಗಳನ್ನು ಹೊರತೆಗೆದು ವಧುವಿನ ಕಡೆಯವರಿಗೆ ನೀಡಿದ್ದಾರೆ ಮತ್ತು ಈ 8 ಲಕ್ಷ ರೂ.ಗಳನ್ನು ಗಾಜಿಯಾಬಾದ್‌ನ ಮಸೀದಿಗೆ ದಾನ ಮಾಡಲಾಗಿದೆ ಎಂದು ಘೋಷಿಸಲಾಗಿದೆ. ಇದರ ನಂತರ, ವರನ ಕಡೆಯಿಂದ, ನಿಕಾಹ್ ಮಾಡುವ ವ್ಯಕ್ತಿಗೆ 11 ಲಕ್ಷ ರೂ., ಜೂತಾ ಚುರೈ ಆಚರಣೆಗೆ 11 ಲಕ್ಷ ರೂ. ನೀಡಲಾಗಿದೆ.
ಇದನ್ನೂ ಓದಿ:ಯೂಟ್ಯೂಬ್‍ನಲ್ಲಿ ಸಖತ್ ವೈರಲ್ ಆಯ್ತು ನಿರಾಹುವಾ & ಮಧು ಶರ್ಮಾ ‘ಪ್ಯಾಸ್ ತನ್ ಕಿ ಬುಜಾಜಾ’ ಹಾಡು
ಈ ಎಲ್ಲಾ ದೃಶ್ಯವನ್ನು ವಿಡಿಯೊಗ್ರಾಫರ್ ರೆಕಾರ್ಡ್ ಮಾಡಿದ್ದಾರೆ. ಆದರೆ ಈ ಸಮಾರಂಭದ ವೇಳೆ ವಿಡಿಯೊ ರೆಕಾರ್ಡ್ ಮಾಡುತ್ತಿದ್ದ ವ್ಯಕ್ತಿಯನ್ನು ತಡೆಹಿಡಿಯಲಾಗಿದೆ. ಆದರೆ ಒಬ್ಬ ವ್ಯಕ್ತಿಯು ಅದನ್ನು ಗಮನಿಸುತ್ತಾ ರಹಸ್ಯವಾಗಿ ರೆಕಾರ್ಡ್ ಮಾಡಿದ್ದಾನೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.