ಹೊಸ ಥಾರ್ ರಾಕ್ಸ್ (Thar ROXX) ಖರೀದಿ ಮಾಡಿದ ಬಳಿಕ ವ್ಯಕ್ತಿಯೊಬ್ಬ ಗಾಳಿಯಲ್ಲಿ ಗುಂಡು ಹಾರಿಸಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ (Viral Video) ಆಗಿದ್ದು, ಇದಕ್ಕೆ ಭಾರಿ ಆಕ್ರೋಶ ವ್ಯಕ್ತವಾಗಿದೆ. ವ್ಯಕ್ತಿಯ ವಿರುದ್ಧ ಕ್ರಮಕ್ಕೆ ಅನೇಕರು ಒತ್ತಾಯಿಸಿದ್ದಾರೆ. ಯಶ್ ಪಾಲ್ ಸಿಂಗ್ ಪನ್ವಾರ್ ಅವರ ಖಾತೆಯಿಂದ ಈ ವಿಡಿಯೋವನ್ನು ಇನ್ ಸ್ಟಾಗ್ರಾಮ್ ನಲ್ಲಿ ಹಂಚಿಕೊಳ್ಳಲಾಗಿದ್ದು, ಅವರು ತಮ್ಮ ಸಂಬಂಧಿಯೊಬ್ಬರಿಗೆ ಹೊಸ ಥಾರ್ ರಾಕ್ಸ್ ಖರೀದಿ ಮಾಡಿರುವುದಕ್ಕೆ ಅಭಿನಂದನೆ ಸಲ್ಲಿಸಿ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
ಮಹೀಂದ್ರಾ ಶೋರೂಂ ಎದುರು ಹೊಸ ಥಾರ್ ರಾಕ್ಸ್ ಖರೀದಿ ಮಾಡಿದ ಬಳಿಕ ತಮ್ಮ ಗನ್ ನಿಂದ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಇದರ ವಿಡಿಯೋದೊಂದಿಗೆ ಪನ್ವಾರ್ ಅವರು ಮಾಮಾ ಸಾಹೇಬ್ ಹೊಕಮ್ ಅವರಿಗೆ ಅನೇಕ ಅಭಿನಂದನೆಗಳು ಇನ್ನು ಶೀರ್ಷಿಕೆಯೊಂದಿಗೆ ಪೋಸ್ಟ್ ಮಾಡಿದ್ದಾರೆ.
ಈ ಘಟನೆಯ ಬಗ್ಗೆ ಅನೇಕರು ಆನಂದ್ ಮಹೀಂದ್ರಾ ಅವರ ಗಮನವನ್ನು ಸೆಳೆಯಲು ಪ್ರಯತ್ನಿಸಿದ್ದಾರೆ. ಮಧ್ಯಪ್ರದೇಶದ ವ್ಯಕ್ತಿಯೊಬ್ಬ 12.99 ರಿಂದ 22.49 ಲಕ್ಷ ರೂ. ಬೆಲೆ ಬಾಳುವ ಹೊಸ ಥಾರ್ ರಾಕ್ಸ್ ಕಾರು ಖರೀದಿ ಮಾಡಿ ಗಾಳಿಯಲ್ಲಿ ಗುಂಡು ಹಾರಿಸಿದ್ದಾನೆ. ಬಳಿಕ ಮಹೀಂದ್ರಾ ವಾಹನ ಶೋ ರೂಂ ಹೊರಗೆ ಅಬ್ಬರಿಸುತ್ತಾ ತನ್ನ ಗನ್ ನಿಂದ ಗಾಳಿಯಲ್ಲಿ ಗುಂಡು ಹಾರಿಸಿದ್ದಾನೆ. ಪನ್ವಾರ್ ಈ ದೃಶ್ಯವನ್ನು ಚಿತ್ರೀಕರಿಸಿ ತಮ್ಮ ಇನ್ ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ವಿಡಿಯೋದಲ್ಲಿ ವ್ಯಕ್ತಿ ಆರಂಭದಲ್ಲಿ ತನ್ನ ಗನ್ ಅನ್ನು ಮೇಲೆತ್ತಿ ಬಳಿಕ ಗಾಳಿಯಲ್ಲಿ ಕೆಲವು ಸುತ್ತಿನ ಗುಂಡು ಹಾರಿಸಿದ್ದಾನೆ. ಇನ್ನೊಂದು ವಿಡಿಯೋದಲ್ಲಿ ವ್ಯಕ್ತಿ ಮಹೀಂದ್ರಾ ಔಟ್‌ಲೆಟ್‌ನ ಹೊರಗೆ ತನ್ನ ಕಾರಿನೊಂದಿಗೆ ಪೋಸ್ ನೀಡುವುದನ್ನು ಕಾಣಬಹುದು. ಆತನ ಸಹಚರರು ಕೆಮರಾದಲ್ಲಿ ಪೋಸ್ ನೀಡಿದ್ದಾರೆ. ಮೊದಲು ಕಾರಿನ ಮೇಲಿರುವ ಬಟ್ಟೆಯ ಕವರ್ ಅನ್ನು ಎತ್ತುವ ಮೂಲಕ ಹೊಸ ಕಾರನ್ನು ಅನಾವರಣಗೊಳಿಸಿದರು.
ಇದರ ವಿಡಿಯೋವನ್ನು ಅನೇಕರು ಆನಂದ್ ಮಹೀಂದ್ರಾ ಅವರಿಗೆ ಟ್ಯಾಗ್ ಮಾಡಿ ಕ್ರಮಕ್ಕೆ ಒತ್ತಾಯಿಸಿದ್ದಾರೆ.
ಥಾರ್ ರಾಕ್ಸ್ ಖರೀದಿ ಮಾಡಿದ ವ್ಯಕ್ತಿಯೊಬ್ಬ ಬಂದೂಕಿನಿಂದ ಗುಂಡು ಹಾರಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸಾಕಷ್ಟು ಮಂದಿ ವ್ಯಕ್ತಿಯ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಒತ್ತಾಯಿಸಿದರು. ಶೋರೂಮ್ ಸಿಬ್ಬಂದಿ ಸುಮ್ಮನೆ ನಿಂತು ನೋಡುತ್ತಿರುವುದನ್ನು ಅನೇಕರು ಖಂಡಿಸಿದ್ದಾರೆ. ಮಹೀಂದ್ರಾ ಶೋರೂಂ ಮ್ಯಾನೇಜರ್ ಇದಕ್ಕೆ ಹೇಗೆ ಅನುಮತಿ ನೀಡಿದ್ದಾರೆ. ಅವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಹೇಳಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಲೀಸರ ಗಮನ ಸೆಳೆಯುವ ಪ್ರಯತ್ನವನ್ನು ಮಾಡಲಾಗಿದೆ. ಆದರೆ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ.
Bengal hospital: ಆಸ್ಪತ್ರೆಯಲ್ಲಿ ಬೀದಿನಾಯಿಗಳ ಪಾಲಾದ ಆರು ತಿಂಗಳ ಹಸುಗೂಸು!
ಒಬ್ಬ ಬಳಕೆದಾರನು ಮಹೀಂದ್ರಾ ಮತ್ತು ಮಹೀಂದ್ರಾ ಅಧ್ಯಕ್ಷರನ್ನು ಟ್ಯಾಗ್ ಮಾಡಿ, ಸರ್, ಶೋರೂಂ ಆವರಣದಲ್ಲೇ ಇದಕ್ಕೆ ಅವಕಾಶ ಮಾಡಿಕೊಟ್ಟಿರುವ ಶೋರೂಂನ ಮ್ಯಾನೇಜರ್ ವಿರುದ್ಧ ಕ್ರಮ ಕೈಗೊಳ್ಳಬೇಕು. ಆನಂದ್ ಮಹೀಂದ್ರಾ ಅವರೇ ದಯವಿಟ್ಟು ಇದನ್ನು ನೋಡಿ ಮತ್ತು ಭವಿಷ್ಯದಲ್ಲಿ ಇಂತಹ ಘಟನೆಗಳನ್ನು ನಿಲ್ಲಿಸಿ ಎಂದು ಹೇಳಿದ್ದಾರೆ.