Sunday, 17th November 2024

Viral Video: ಕೆಫೆಯಲ್ಲಿ ಯುವತಿಯೊಂದಿಗೆ ಸಿಕ್ಕಿಬಿದ್ದ ಗೆಳೆಯನಿಗೆ ಗೆಳತಿ ಮಾಡಿದ್ದೇನು ನೋಡಿ!

Viral Video

ಬೆಂಗಳೂರು: ಪ್ರೀತಿಸಿ ಮೋಸ ಮಾಡುವುದು ಇತ್ತೀಚಿನ ದಿನಗಳಲ್ಲಿ ಸರ್ವೇ ಸಾಮಾನ್ಯವಾಗಿದೆ. ಇಂತಹ ಘಟನೆಗಳು ನಮ್ಮ ಸುತ್ತಮುತ್ತಲು ನಡೆಯುತ್ತಲೆ ಇರುತ್ತವೆ. ಅಂತಹದೇ ಒಂದು ಘಟನೆ ಇತ್ತೀಚೆಗೆ  ಕೆಫೆಯೊಂದರಲ್ಲಿ ನಡೆದಿದೆ.  ಗೆಳತಿಯೊಬ್ಬಳು ತನ್ನ ಗೆಳೆಯನನ್ನು ಇನ್ನೊಬ್ಬ ಯುವತಿಯೊಂದಿಗೆ ಕೆಫೆಯಲ್ಲಿರುವುದನ್ನು ಪತ್ತೆ ಮಾಡಿ ಅಲ್ಲಿಗೆ ಬಂದು  ಗಲಾಟೆ ಮಾಡಿದ್ದಾಳೆ. ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ.

ವೈರಲ್ ವಿಡಿಯೊದಲ್ಲಿ ಗೆಳತಿ  ಕೆಫೆಗೆ ಹೋಗಿ ಬೇರೊಬ್ಬ ಯುವತಿಯ ಜೊತೆ ಕುಳಿತಿದ್ದ ಗೆಳೆಯನನ್ನು ತರಾಟೆಗೆ ತೆಗೆದುಕೊಂಡಿದ್ದಾಳೆ. ಆಗ ಆ ಗೆಳತಿಯ ಮುಖದಲ್ಲಿ ಬೇಸರ ಮತ್ತು ಆಘಾತ ಎರಡೂ ಮನೆಮಾಡಿತ್ತು. ತಕ್ಷಣ ಅವಳು ಅವನಿಗೆ ಬೈಯುತ್ತಾ ಜೋರಾಗಿ ಕೂಗಲು ಪ್ರಾರಂಭಿಸಿದ್ದಾಳೆ. ಅವನು ಮಾಡಿದ ಕೆಲಸಕ್ಕೆ ಸ್ಪಷ್ಟನೆ ನೀಡುವಂತೆ ಕೇಳಿದ್ದಾಳೆ. ಜೊತೆಗೆ ಆಕೆ ಬೇಸರದಿಂದ ಅಳುತ್ತಾ ಕೋಪದಿಂದ ತನ್ನ ಗೆಳೆಯನಿಗೆ ಕಪಾಳಮೋಕ್ಷ ಮಾಡಿದ್ದಾಳೆ.

ಘರ್ ಕಾ ಕಾಲೇಶ್‍ ಅಕೌಂಟ್‌ನಲ್ಲಿ ಪೋಸ್ಟ್ ಮಾಡಲಾದ ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಕೋಲಾಹಲವನ್ನು ಉಂಟುಮಾಡಿದೆ. ಹೆಚ್ಚಿನ ವೀಕ್ಷಕರು ಮೋಸಕ್ಕೊಳಗಾದ ಯುವತಿಯ ಮೇಲೆ ಸಹಾನುಭೂತಿ ತೋರಿದ್ದಾರೆ.  ಕೆಲವರು ಸಾರ್ವಜನಿಕ ಸ್ಥಳದಲ್ಲಿ ಈ ರೀತಿ ವರ್ತಿಸಿದ್ದನ್ನು ಟೀಕಿಸಿದ್ದಾರೆ. ಮತ್ತು ಕೆಲವರು ಯುವಕ ಮಾಡಿದ ಕೆಲಸಕ್ಕೆ ಛೀಮಾರಿ ಹಾಕಿದ್ದಾರೆ.

ಇದನ್ನೂ ಓದಿ:ಬಿಗ್‍ಬಾಸ್ ನಿರೂಪಣೆಗೆ ಸಲ್ಮಾನ್ ಖಾನ್ ಸಂಭಾವನೆ ಬಾಹುಬಲಿ, ಜೈಲರ್‌ ಬಜೆಟ್‌ಗಿಂತ ಹೆಚ್ಚು!

ಈ ವಿಡಿಯೊ ಸಂಬಂಧಗಳು ಮತ್ತು ನಂಬಿಕೆಯ ಬಗ್ಗೆ ಹೆಚ್ಚಿನ ಚರ್ಚೆಯನ್ನು ಹುಟ್ಟುಹಾಕಿದೆ. ಅಲ್ಲದೇ ಈ ವಿಡಿಯೊ ಪ್ರಸಾರವಾಗುತ್ತಲೇ ಡಿಜಿಟಲ್ ಯುಗದಲ್ಲಿ ವೈಯಕ್ತಿಕ ಕ್ಷಣಗಳು ಹೇಗೆ ತ್ವರಿತವಾಗಿ ಸಾರ್ವಜನಿಕವಾಗಿ ಬಹಿರಂಗಗೊಳ್ಳುತ್ತವೆ ಎಂಬುದನ್ನು ಇದು ತೋರಿಸುತ್ತದೆ. ಸಾವಿರಾರು ವೀಕ್ಷಕರು ಕಾಮೆಂಟ್‍ಗಳ ಮೂಲಕ  ಅಂತಹ ಭಾವನಾತ್ಮಕ ಸಂದರ್ಭಗಳನ್ನು ಸಾರ್ವಜನಿಕವಾಗಿ ಹೇಗೆ ನಿರ್ವಹಿಸಬೇಕು ಎಂಬುದರ ಬಗ್ಗೆ ತಿಳಿಸಿದ್ದಾರೆ.