Thursday, 19th September 2024

Viral Video: ಸಮಾರಂಭದಲ್ಲಿ ಭಾಗಿಯಾಗಲು 5 ಲಕ್ಷ ರೂ. ಶುಲ್ಕ, ಸ್ಟಾರ್‌ ಹೋಟೆಲ್‌ ವಾಸ್ತವ್ಯ! ಇದು ಬೀದಿಬದಿಯ ಚಾಯ್‌ವಾಲಾನ ಡಿಮ್ಯಾಂಡ್‌!

Viral Video

ನಾಗ್ಪುರ: ನಾಗ್ಪುರದ “ವಿಶ್ವ ವಿಖ್ಯಾತʼ ಬೀದಿ ಚಹಾ ಮಾರಾಟಗಾರ ಡಾಲಿ ಚಾಯ್‌ವಾಲಾ ಈ ವರ್ಷದ ಆರಂಭದಲ್ಲಿ ಮೈಕ್ರೋಸಾಫ್ಟ್ ಸಹ-ಸಂಸ್ಥಾಪಕ ಬಿಲ್ ಗೇಟ್ಸ್ ಗೆ ಚಹಾ ನೀಡಿದ ನಂತರ ವ್ಯಾಪಕ ಗಮನ ಸೆಳೆದಿದ್ದಾರೆ. ಅವರ ಈ ಅನಿರೀಕ್ಷಿತ ಭೇಟಿ ಡಾಲಿಯನ್ನು ಸೋಶಿಯಲ್ ಮೀಡಿಯಾದ ಸೆನ್ಸೇಷನ್ ಆಗಿ ಪರಿವರ್ತಿಸಿದೆ. ಇದರಿಂದ ತಮ್ಮ ಕಾರ್ಯಕ್ರಮಗಳು ಮತ್ತು ಪಾರ್ಟಿಗಳಿಗೆ ಆಗಮಿಸುವಂತೆ ಅನೇಕರು ಬೇಡಿಕೆಗಳನ್ನು ಇಡುತ್ತಿದ್ದಾರೆ.   ಹಾಗಾಗಿ ಅವರು ಹೆಚ್ಚು ಜನಪ್ರಿಯತೆ ಗಳಿಸಿದ ಕಾರಣ ಈಗ ಅವರನ್ನು ಯಾವುದೇ ಪಾರ್ಟಿ, ಕಾರ್ಯಕ್ರಮಕ್ಕೆ ಆಹ್ವಾನಿಸಿದರೆ ಅವರು ದುಬಾರಿ ಶುಲ್ಕವನ್ನು ಕೇಳುತ್ತಿದ್ದಾರೆ ಎಂದು ಇತ್ತೀಚೆಗೆ ಫುಡ್ ಬ್ಲಾಗರ್ ಬಹಿರಂಗಪಡಿಸಿದ್ದಾರೆ. ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video) ಆಗಿದೆ.

ಇನ್ಸ್ಟಾಗ್ರಾಂನಲ್ಲಿ ಎಕೆ ಫುಡ್ ವ್ಲಾಗ್ ಎಂಬ ಹೆಸರಿನ ಫುಡ್ ಬ್ಲಾಗರ್, ಕುವೈಟ್‌ನಲ್ಲಿ ನಡೆದ ಕಾರ್ಯಕ್ರಮಕ್ಕೆ ಚಹಾ ಮಾರಾಟಗಾರ ಡಾಲಿ ಅವರನ್ನು ಆಹ್ವಾನಿಸಲು ಪ್ರಯತ್ನಿಸಿದ ಅನುಭವವನ್ನು ಹಂಚಿಕೊಂಡಿದ್ದಾರೆ. ಬ್ಲಾಗರ್ ಪ್ರಕಾರ, ಡಾಲಿಯ ಮ್ಯಾನೇಜರ್ ಒಂದು ದಿನದ ಪ್ರದರ್ಶನಕ್ಕೆ 5 ಲಕ್ಷ ರೂ.ಗಳ ಶುಲ್ಕವನ್ನು ನೀಡಬೇಕೆಂದು ತಿಳಿಸಿದ್ದಾರೆ. ಇದರಲ್ಲಿ ಡಾಲಿ ಮತ್ತು ಸಹಚರರಿಗೆ 4 ಅಥವಾ 5 ಸ್ಟಾರ್ ಹೋಟೆಲ್‍ನಲ್ಲಿ ವಸತಿ ಕೂಡ ಸೇರಿದೆ. ಅವರ ಬೇಡಿಕೆಯ ಬಗ್ಗೆ ಬ್ಲಾಗರ್ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ, ಇದು ಡಾಲಿಯು ಇತ್ತೀಚಿನ ದಿನಗಳಲ್ಲಿನ ಬೆಳವಣಿಗೆ ಮತ್ತು ಸಂಬಂಧಿತ ವೆಚ್ಚಗಳ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.

ಎಕೆ ಫುಡ್ ವ್ಲಾಗ್ ಡಾಲಿಯ ಬಗ್ಗೆ ಆರೋಪಗಳನ್ನು ಮಾಡುವ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಇನ್ಸ್ಟಾಗ್ರಾಂನಲ್ಲಿ 21 ಮಿಲಿಯನ್ ವೀಕ್ಷಣೆಗಳನ್ನು ಗಳಿಸಿದೆ. ಈ ವಿಡಿಯೊಗೆ ಹಲವರು ಕಾಮೆಂಟ್‍ಗಳ ಮೂಲಕ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಕೆಲವು ಬಳಕೆದಾರರು ಡಾಲಿಯ ಹೆಚ್ಚು ಫೇಮಸ್ ಆಗುತ್ತಿರುವುದರಿಂದ ಶುಲ್ಕ ವಿಧಿಸುವ ಹಕ್ಕನ್ನು ಹೊಂದಿದ್ದಾರೆ ಎಂದು ಡಾಲಿಗೆ ಬೆಂಬಲ ಸೂಚಿಸಿದ್ದಾರೆ. ಒಬ್ಬರು ಕಾಮೆಂಟ್‍ನಲ್ಲಿ “ಅವರು ಅದಕ್ಕೆ ಅರ್ಹರು. ಒಂದು ದಶಲಕ್ಷಕ್ಕೂ ಹೆಚ್ಚು ಅನುಯಾಯಿಗಳನ್ನು ಹೊಂದಿರುವ ಪ್ರಭಾವಶಾಲಿಗಳು ಲಕ್ಷಗಟ್ಟಲೆ ಶುಲ್ಕ ವಿಧಿಸಬಹುದಾದರೆ, ಅವರು ಏಕೆ ಮಾಡಬಾರದು ಎಂದು ತಿಳಿಸಿದ್ದಾರೆ. ಇನ್ನೊಬ್ಬ ಬಳಕೆದಾರರು “5 ಲಕ್ಷ ಹೆಚ್ಚಿಗೆ ಶುಲ್ಕ ಎಂದು ನಾನು ಭಾವಿಸುವುದಿಲ್ಲ ಮತ್ತು 5 ಸ್ಟಾರ್ ಹೋಟೆಲ್ ಸಹ ಸರಿ” ಎಂದು ಹೇಳಿದ್ದಾರೆ. ಡಾಲಿ ತಾನು ಕಷ್ಟಪಟ್ಟು ಸಂಪಾದಿಸಿದ ಖ್ಯಾತಿಯನ್ನು ಬಂಡವಾಳ ಮಾಡಿಕೊಳ್ಳುತ್ತಿದ್ದಾನೆ” ಎಂದು ಮತ್ತೊಬ್ಬ ಬಳಕೆದಾರರು ಹೇಳಿದ್ದಾರೆ.

ಫೆಬ್ರವರಿಯಲ್ಲಿ ಬಿಲ್ ಗೇಟ್ಸ್ ಭಾರತಕ್ಕೆ ಭೇಟಿ ನೀಡಿದಾಗ ಹೈದರಾಬಾದ್‍ನಲ್ಲಿ ಡಾಲಿ ತಯಾರಿಸಿದ ಚಹಾವನ್ನು ಕುಡಿಯುತ್ತಿರುವ ವಿಡಿಯೊವನ್ನು ಇನ್ಸ್ಟಾಗ್ರಾಂನಲ್ಲಿ ಹರಿದಾಡಿತ್ತು. ಇದರಿಂದ ಚಹಾ ಮಾರಾಟಗಾರ ಡಾಲಿ ಅವರ ಖ್ಯಾತಿ ಹೆಚ್ಚಾಗಲು ಪ್ರಾರಂಭವಾಯಿತು. ಡಾಲಿಯ ಚಹಾದಿಂದ ಪ್ರಭಾವಿತರಾದ ಗೇಟ್ಸ್, “ವಾವ್, ಡಾಲಿ ಕಿ ಚಾಯ್” ಎಂದು ಹೇಳಿದರು. ಆದರೆ ಡಾಲಿ ನಂತರದ ಸಂದರ್ಶನವೊಂದರಲ್ಲಿ ” ವಿಶ್ವದ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಿಗೆ ಸೇವೆ ಸಲ್ಲಿಸುವ ಭಾಗ್ಯ ನನಗೆ ಸಿಗುತ್ತದೆ ಎಂದು ಭಾವಿಸಿರಲಿಲ್ಲ ” ಎಂದು ಸಂಸತ ವ್ಯಕ್ತಪಡಿಸಿದ್ದರು.

ವಿಡಿಯೊಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ
https://www.instagram.com/reel/C_X64ZOoG7x/?utm_source=ig_web_copy_link