Sunday, 15th December 2024

Viral Video: ಅಬ್ಬಾ..ಎಂಥಾ ಭೀಕರ ದೃಶ್ಯ! ಹೊತ್ತಿ ಉರಿಯುತ್ತಾ ಚಾಲಕನಿಲ್ಲದೆಯೇ ಬಹುದೂರ ಚಲಿಸಿದ ಕಾರು-ವಿಡಿಯೋ ಇದೆ

viral video

ಜೈಪುರ: ಸಾಮಾಜಿಕ ಜಾಲತಾಣದಲ್ಲಿ ಕೆಲವೊಮ್ಮೆ ಹೀಗೂ ನಡೆಯುತ್ತಾ ಎಂದು ಅಚ್ಚರಿಯಿಂದ ನೋಡುವಂತಹದ ವಿಡಿಯೋಗಳು ವೈರಲ್‌ ಆಗುತ್ತಿರುತ್ತವೆ. ಇದೀಗ ಅಂತಹದ್ದೇ ಒಂದು ವಿಡಿಯೋ ಭಾರೀ ಸದ್ದು ಮಾಡುತ್ತಿದೆ. ರಾಜಸ್ಥಾನದ ಜೈಪುರದಲ್ಲಿ ಚಾಲಕನಿಲ್ಲದೆಯೇ ಕಾರೊಂದು ಧಗ ಧಗುರಿಯುತ್ತಾ ನಡುರಸ್ತೆಯಲ್ಲಿ ಬಹುದೂರ ಚಲಿಸಿದ ಘಟನೆ(Viral Video) ನಡೆದಿದೆ. ಇನ್ನು ಹೊತ್ತಿ ಉರಿಯುತ್ತಿದ್ದ ಕಾರನ್ನು ಕಂಡು ಜನ ದಿಕ್ಕಾಪಾಲಾಗಿ ಓಡಿದ್ದಾರೆ.

ಶುಕ್ರವಾರ ಸಂಜೆ ಜೈಪುರದ ಸೋಡಾಲಾ ಸಬ್ಜಿ ಮಂಡಿ ಪ್ರದೇಶದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಶಾರ್ಟ್‌ ಸರ್ಕ್ಯೂಟ್‌ನಿಂದಾಗಿ ಕಾರಿನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ. ಇನ್ನು ಬೆಂಕಿ ಮತ್ತು ಹೊಗೆಯನ್ನು ಗಮನಿಸಿದ ತಕ್ಷಣ ಕಾರು ಚಾಲಕ ಕಾರನ್ನು ಬಿಟ್ಟು ಪ್ರಾಣ ರಕ್ಷಿಸಿಕೊಂಡಿದ್ದಾನೆ. ಆದರೆ ಕಾರು ಮಾತ್ರ ಹೊತ್ತಿ ಉರಿಯುತ್ತಾ ರಸ್ತೆಯಲ್ಲಿ ಚಲಿಸುತ್ತಲೇ ಇತ್ತು. ಡಿವೈಡರ್‌ಗೆ ಡಿಕ್ಕಿ ಹೊಡೆಯುವ ಮೊದಲು ಕಾರ್ ಡ್ರೈವರ್ ಇಲ್ಲದೆ ಚಲಿಸುತ್ತಲೇ ಇತ್ತು. ಈ ಭೀಕರ ದುರ್ಘಟನೆಯಲ್ಲಿ ಅದೃಷ್ಟವಶಾತ್‌ ಯಾವುದೇ ಸಾವು ನೋವು ಸಂಭವಿಸಿಲ್ಲ. ಸ್ಥಳದಲ್ಲಿ ನೆರೆದಿದ್ದ ವ್ಯಕ್ತಿಯೊಬ್ಬರು ಈ ಘಟನೆಯಲ್ಲಿ ದೃಶ್ಯಾವಳಿಯನ್ನು ಸೆರೆ ಹಿಡಿದಿದ್ದು, ಘಟನೆಗೆ ಸೂಕ್ತ ಕಾರಣ ಏನೆಂಬುದು ತಿಳಿದುಬಂದಿಲ್ಲ.

ಇನ್ನು ಕಾರು ರಸ್ತೆಯಲ್ಲಿ ಚಲಿಸುತ್ತಿರುವುದನ್ನು ಕಂಡ ದ್ವಚಕ್ರ ವಾಹನ ಸವಾರರು ವಾಹನಗಳನ್ನು ಸ್ಥಳದಲ್ಲೇ ಬಿಟ್ಟು ಓಡುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ. ಇನ್ನು ಕಾರು ಚಾಲಕ ಜಿತೇಂದ್ರ ಎಲಿವೇಟೆಡ್ ರಸ್ತೆಯಲ್ಲಿ ಇಳಿಯುತ್ತಿದ್ದಾಗ ವಾಹನದ ಹವಾನಿಯಂತ್ರಣ ಘಟಕದಿಂದ ಹೊಗೆ ಬರುತ್ತಿರುವುದನ್ನು ಗಮನಿಸಿದನು ತಕ್ಷಣ ಬಾನೆಟ್ ಎತ್ತಿ ನೋಡಿದಾಗ ಇಂಜಿನ್ ಹೊತ್ತಿ ಉರಿಯುತ್ತಿರುವುದು ಕಂಡು ಬಂತು.

ದೆಹಲಿಯಲ್ಲೂ ಇಂತಹದ್ದೇ ಘಟನೆ

ಇಂತಹದ್ದೇ ಒಂದು ಘಟನೆ ದೆಹಲಿಯಲ್ಲೂ ನಡೆದಿದೆ. ಕಳೆದ ಸೋಮವಾರ ದೆಹಲಿಯ ದ್ವಾರಕಾ ಅಂಡರ್‌ಪಾಸ್ ಬಳಿ ಕಾರೊಂದು ಭಾರಿ ಬೆಂಕಿಗೆ ಆಹುತಿಯಾಗಿದೆ. ಇದರಿಂದ ಈ ಮಾರ್ಗದಲ್ಲಿ ವಾಹನ ಸಂಚಾರಕ್ಕೆ ಅಡ್ಡಿ ಉಂಟಾಯಿತು. ಕೆಂಪು ಬಣ್ಣದ ಕಾರು ಬೆಂಕಿ ಕೆನ್ನಾಲೆಗೆ ಸಿಲುಕಿ ಧಗ ಧಗಿಸಿದ ಘಟನೆ ವರದಿಯಾಗಿತ್ತು. ಘಟನೆಯಲ್ಲಿ ಯಾವುದೇ ಗಾಯ ಅಥವಾ ಪ್ರಾಣಹಾನಿಯಾಗಿರುವ ಬಗ್ಗೆ ತಕ್ಷಣದ ವರದಿಯಾಗಿಲ್ಲ.

ಈ ಸುದ್ದಿಯನ್ನೂ ಓದಿ: Viral Video: ಕಾರಿನಲ್ಲಿ ಹೋಗುತ್ತಿದ್ದ ದಂಪತಿಯನ್ನು ಮಾರಕಾಸ್ತ್ರ ಹಿಡಿದುಕೊಂಡು ಬೆನ್ನಟ್ಟಿದ ದರೋಡೆಕೋರರು; ವಿಡಿಯೊ ವೈರಲ್‌