Thursday, 12th December 2024

Viral Video: 10 ರೂಪಾಯಿ ನೋಟಿನಲ್ಲಿ 82 ಕೆ.ಜಿ ತೂಗುವ ಮಗನ ತುಲಾಭಾರ ನಡೆಸಿದ ಅಪ್ಪ

Viral Video

ಮಧ್ಯಪ್ರದೇಶ: ತಂದೆಯೊಬ್ಬ ಮಗನ ತುಲಾಭಾರವನ್ನು ತಲಾ 10 ರೂಪಾಯಿಯ ನೋಟುಗಳಿಂದ ಮಾಡಿರುವ ಅತ್ಯಂತ ಅಪರೂಪದ ಘಟನೆ ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ (Ujjain in Madhya Pradesh) ನಡೆದಿದೆ. ಹಣವನ್ನು ಸಂಪೂರ್ಣವಾಗಿ ಅವರು ದೇವಾಲಯಕ್ಕೆ ನೀಡಿದ್ದು ಇದರ ವಿಡಿಯೋ ವೈರಲ್ (Viral Video) ಆಗಿದೆ. ಉಜ್ಜಯಿನಿ ಜಿಲ್ಲೆಯ ಬದ್‌ನಗರದಲ್ಲಿ ತೇಜ ದಶಮಿ ಹಬ್ಬದಂದು ತಂದೆಯೊಬ್ಬರು ತಮ್ಮ ಆಸೆ ಈಡೇರಿದ್ದರಿಂದ 30 ವರ್ಷದ ಮಗನ 82 ಕೆ.ಜಿ. ತೂಕಕ್ಕೆ ಸಮನವಾದ ಹಣದಿಂದ ತುಲಾಭಾರ ಸೇವೆ ನಡೆಸಿದ್ದಾರೆ. ಇದರಿಂದ ಬಂದ ಒಟ್ಟು 10.7 ಲಕ್ಷ ರೂಪಾಯಿಯನ್ನು ದೇವಸ್ಥಾನಕ್ಕೆ ದೇಣಿಗೆ ನೀಡಿದ್ದಾರೆ.

ಮಂಗಳನಾಥ ಪಥ್ ಪ್ರದೇಶದ ನಿವಾಸಿ, ರೈತರಾದ ಚತುರ್ಭುಜ್ ಜಾಟ್‌ ಅವರು ತಮ್ಮ ಮಗ ವೀರೇಂದ್ರನನ್ನು 10 ರೂಪಾಯಿ ನೋಟುಗಳಿಂದ ತುಲಾಭಾರ ನಡೆಸಿದ್ದಾರೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಚತುರ್ಭುಜ್ ಜಾಟ್ ತಮ್ಮ ಮಗನನ್ನು ಒಂದು ಬದಿಯ ತಕ್ಕಡಿಯಲ್ಲಿ ಕೂರಿಸಿದರು. ಇನ್ನೊಂದು ಬದಿಯಲ್ಲಿ ನೋಟುಗಳ ಕಟ್ಟುಗಳನ್ನು ಇಟ್ಟರು. ನೋಟುಗಳ ಕಂತೆಗಳು ಮಗನಿಗೆ ಸರಿಸಮಾನವಾದಾಗ ಒಟ್ಟು 10.7 ಲಕ್ಷ ರೂ. ಆಗಿದ್ದು, ಅದನ್ನು ಅವರು ದೇವಸ್ಥಾನ ಅಭಿವೃದ್ಧಿಗೆಂದು ದೇಣಿಗೆ ನೀಡಿದ್ದಾರೆ.

ಚತುರ್ಭುಜ್ ಜಾಟ್ ಅವರು 4 ವರ್ಷಗಳ ಹಿಂದೆ ತಮ್ಮ ಇಚ್ಛೆ ಈಡೇರಿದರೆ ಮಗನ ತೂಕಕ್ಕೆ ಸಮನಾದ ಮೊತ್ತವನ್ನು ತೇಜಾಜಿ ಮಹಾರಾಜ ದೇವಸ್ಥಾನಕ್ಕೆ ದಾನ ಮಾಡುವುದಾಗಿ ಹರಕೆ ಹೇಳಿಕೊಂಡಿದ್ದರು.

Neeraj Chopra: ನೀರಜ್‌ ಚೋಪ್ರಾ ಬಳಿ ಫೋನ್‌ ನಂಬರ್‌ ಕೇಳಿದ ವಿದೇಶಿ ಯುವತಿ; ವಿಡಿಯೊ ವೈರಲ್‌

ದೇವಸ್ಥಾನ ಆವರಣದಲ್ಲಿ ಸಾಕಷ್ಟು ಹಣದ ಬಂಡಲ್ ಕಾಣಿಕೊಂಡಿದ್ದರಿಂದ ಈ ಸೇವೆಯನ್ನು ನೋಡಲು ಹಲವಾರು ಮಂದಿ ಸೇರಿದ್ದರು. ಚತುರ್ಭುಜ್ ಜಾಟ್ ಅವರ ಈ ವಿಶೇಷ ಸೇವೆಗೆ ಸಾಕಷ್ಟು ಮಂದಿ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.