Sunday, 24th November 2024

Viral Video: ಇದೀಗ ಬಂದಿದೆ ಕೆಂಪು ಇರುವೆಯ ಪಾನಿಪುರಿ!

Viral Video

ಚಾಟ್‌ಗಳಲ್ಲಿ ಪಾನಿಪುರಿ (Pani puri) ಬಹುತೇಕ ಎಲ್ಲರೂ ಇಷ್ಟ ಮಾಡುವ ಖಾದ್ಯ. ಆದರೆ ಇದರಲ್ಲಿ ಇನ್ನು ಇರುವೆ ಸಿಕ್ಕರೆ ಚೀ ಎಂದು ಬಿಸಾಡುವ ಮೊದಲು ಒಮ್ಮೆ ಯೋಚಿಸಿ. ಯಾಕೆಂದರೆ ಇತ್ತೀಚೆಗೆ ಇರುವೆ ಪಾನಿಪುರಿ ಹೆಚ್ಚು ಪ್ರಚಾರದಲ್ಲಿದೆ. ಇದರ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ (Viral Video) ಆಗಿದೆ.

ಪಾನಿಪುರಿಯಲ್ಲಿ ಹೊಸಹೊಸ ಪ್ರಯೋಗಗಳು ಹೊಸದೇನಲ್ಲ. ಚಾಕೊಲೇಟ್, ಮಾವಿನ ಹಣ್ಣಿನ ರಸ, ಮೊಟ್ಟೆ ಸೇರಿಸಿ ಮಾಡುವ ಪಾನಿಪುರಿಯ ಬಗ್ಗೆ ಈಗಾಗಲೇ ನಾವು ಸಾಕಷ್ಟು ಕೇಳಿದ್ದೇವೆ. ಇದೀಗ ಥಾಯ್ ಬಾಣಸಿಗರು ಸಿದ್ಧ ಮಾಡಿಸಿರುವ ಹೊಸ ವಿಧಾನದ ಪಾನಿಪುರಿಯೊಂದು ಆಘಾತ ಉಂಟು ಮಾಡಬಹುದು. ಥಾಯ್- ಭಾರತೀಯ ಸಮ್ಮಿಲನದ ಈ ಖಾದ್ಯ (Thai-Indian fusion) ಅತ್ಯಂತ ವಿಲಕ್ಷಣವಾದ ಖಾದ್ಯಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.

ಸಾಮಾನ್ಯವಾಗಿ ಕೂದಲು, ಕೀಟ, ಇರುವೆ ತಿನ್ನುವ ಖಾದ್ಯದಲ್ಲಿ ಕಂಡರೆ ವಿಶೇಷವಾಗಿ ಭಾರತೀಯರು ತಮ್ಮ ಊಟವನ್ನು ತಿರಸ್ಕರಿಸುವುದು ಸಾಮಾನ್ಯ. ಅದರೆ ಈಗ ವೈರಲ್ ಆಗಿರುವ ವಿಡಿಯೋ ಮಾತ್ರ ನಮ್ಮನ್ನು ಯೋಚಿಸುವಂತೆ ಮಾಡುತ್ತದೆ. ವಿಲಕ್ಷಣವಾದ ಖಾದ್ಯಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಈ ಪಾನಿಪುರಿ ಈಗ ಭಾರತದಲ್ಲೇ ಸಿಗುತ್ತಿದೆ. ಛತ್ತೀಸ್‌ಗಢದಲ್ಲಿ ಹುರಿದ ಇರುವೆ ಪಾನಿಪುರಿ ಹೆಚ್ಚು ಪ್ರಚಾರಲ್ಲಿದೆ.

ವರುಣ್ ಟೋಟ್ಲಾನಿ, ಥಿಟಿಡ್ ತಸ್ಸನಾಕಾಜಾನ್ ಮತ್ತು ದೇಜ್ ಕೆವ್ಕಾಚಾ ಸೇರಿದಂತೆ ಪಾಕಶಾಲೆಯ ತಜ್ಞರ ತಂಡವು ಈ ಖಾದ್ಯವನ್ನು ಸಿದ್ಧಪಡಿಸಿದೆ. ಇನ್‌ಸ್ಟಾಗ್ರಾಮ್‌ನಲ್ಲಿ ಈ ಬಗ್ಗೆ ಮಾತನಾಡಿರುವ ಟೋಟ್ಲಾನಿ, ಫ್ಯೂಷನ್ ಡಿಶ್‌ನ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ನಾವು ಈ ಪಾನಿಪುರಿಗೆ ಎರಡೂ ಪ್ರಪಂಚದ ಅತ್ಯುತ್ತಮವಾದದ್ದನ್ನು ಸೇರಿಸಿದ್ದೇವೆ. ಪುರಿ ಭಾರತದಿಂದ ಬಂದಿದೆ, ಪುರಿಯ ಒಳಗೆ ಸೇರಿಸುವ ಖಾದ್ಯಗಳು ಥಾಯ್‌ನದ್ದು. ಟೊಮೆಟೊ, ಹುದುಗಿಸಿದ ಹುರುಳಿ, ಪಾನಿಗೆ ಬೇಕಾದ ತೆಂಗಿನ ಹಾಲು ಭಾರತದ್ದು. ಅದರ ಮೇಲೆ ಹಾಕುವ ಹುರಿದ ಕೆಂಪು ಇರುವೆ ಮಾತ್ರ ಥೈಲ್ಯಾಂಡ್‌ನದ್ದು ಎಂದಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಅನೇಕ ನೆಟ್ಟಿಗರು ಈ ಖಾದ್ಯವನ್ನು ತಿರಸ್ಕರಿಸಿದ್ದಾರೆ. ಅನೇಕರು ಕಮೆಂಟ್ ವಿಭಾಗದಲ್ಲಿ ಭಾರತೀಯ ಚಾಟ್ ಐಟಂಗೆ ನ್ಯಾಯ ನೀಡುವಂತೆ ಹೇಳಿದ್ದಾರೆ. ಒಬ್ಬರು ಕಾಮೆಂಟ್ ವಿಭಾಗದಲ್ಲಿ ಪಾನಿಪುರಿ ಭಾರತೀಯರ ಒಂದು ಭಾವನೆಯಾಗಿದೆ. ಅದನ್ನು ಹಾಳು ಮಾಡಬೇಡಿ ಎಂದಿದ್ದಾರೆ. ಫಿಟ್‌ನೆಸ್ ನ್ಯೂಟ್ರಿಷನ್ ಸ್ಪೆಷಲಿಸ್ಟ್ ಎಂದು ಹೇಳಿಕೊಂಡಿರುವ ಎನ್‌ಬೈರ್ ಇದಕ್ಕೆ ಪ್ರತಿಕ್ರಿಯಿಸಿ “ದಿ ಬೆಸ್ಟ್” ಎಂದು ಹೇಳಿದ್ದಾರೆ.

Radha Yadav: ಹಕ್ಕಿಯಂತೆ ಹಾರಿ 2 ಅದ್ಭುತ ಕ್ಯಾಚ್‌ ಹಿಡಿದ ರಾಧಾ ಯಾದವ್‌; ಇಲ್ಲಿದೆ ವಿಡಿಯೊ

ಟ್ಯಾಟ್ಲರ್ ಏಷ್ಯಾದ ಸಹ-ಅಧ್ಯಕ್ಷರಾದ ಜೂಲಿಯಾ ಲೀ ಅವರು ಪ್ರತಿಕ್ರಿಯಿಸಿ ಪಾಕಶಾಲೆಯ ಪ್ರಯೋಗವನ್ನು ಮೆಚ್ಚಿ ಹೃದಯ ಮತ್ತು ಬೆಂಕಿಯ ಎಮೋಜಿಗಳನ್ನು ಹಾಕಿದ್ದಾರೆ.