Thursday, 19th September 2024

Viral Video: ಐಎಎಸ್ ಅಧಿಕಾರಿ ಮುಂದೆಯೇ ನಿರರ್ಗಳ ಇಂಗ್ಲಿಷ್‌ ಮಾತನಾಡಿದ ಹಳ್ಳಿಯ ಮಹಿಳೆ ; ವಿಡಿಯೊ ಇದೆ

Viral Video

ರಾಜಸ್ಥಾನದ ಹಳ್ಳಿಯ ಮಹಿಳೆಯೊಬ್ಬಳು ( village women) ನಿರರ್ಗಳವಾಗಿ ಐಎಎಸ್ ಅಧಿಕಾರಿ (IAS officer) ಇದ್ದ ಕಾರ್ಯಕ್ರಮದಲ್ಲಿ ನಿರರ್ಗಳ ಇಂಗ್ಲಿಷ್ ಮಾತನಾಡಿ ಎಲ್ಲರ ಮೆಚ್ಚುಗೆಗೆ ಪಾತ್ರವಾದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ (Viral Video) ಆಗಿದೆ. ರಾಜಸ್ಥಾನಿ ಸಾಂಪ್ರದಾಯಿಕ ಉಡುಗೆ ತೊಟ್ಟ ಗ್ರಾಮದ ಮುಖ್ಯಸ್ಥ ಮಹಿಳೆ ಜಿಲ್ಲಾಧಿಕಾರಿ (Collector of Barmer) ಟೀನಾ ದಾಬಿ ಸೇರಿದಂತೆ ಗಣ್ಯರನ್ನು ಕಾರ್ಯಕ್ರಮಕ್ಕೆ ಸ್ವಾಗತಿಸುತ್ತಿರುವ ವಿಡಿಯೋ ಇದಾಗಿದೆ.

ಐಎಎಸ್ ಅಧಿಕಾರಿ ಟೀನಾ ದಾಬಿ ಅವರನ್ನು ಗ್ರಾಮದ ಮುಖ್ಯಸ್ಥ ಮಹಿಳೆ ಸೋನು ಕನ್ವರ್ ಇಂಗ್ಲಿಷ್ ನಲ್ಲಿ ಮಾತನಾಡುತ್ತಾ ಸ್ವಾಗತಿಸಿದ್ದಾರೆ. ಸೋನು ಕನ್ವರ್ ಅವರ ಸ್ವಾಗತ ಭಾಷಣಕ್ಕೆ ವೇದಿಕೆಯಲ್ಲಿದ್ದ ಗಣ್ಯರು ಮಾತ್ರವಲ್ಲ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಮಂದಿ ನೆಟ್ಟಿಗರು ಕೂಡ ಶಹಬ್ಬಾಸ್ ಎಂದಿದ್ದಾರೆ.

ರಾಜಸ್ಥಾನದ ಬಾರ್ಮರ್‌ನಲ್ಲಿ ನಡೆದ ಸಮಾರಂಭದಲ್ಲಿ ಗ್ರಾಮದ ಮುಖ್ಯಸ್ಥರಾದ ಸೋನು ಕನ್ವರ್ ನಿರರ್ಗಳವಾಗಿ ಇಂಗ್ಲಿಷ್ ನಲಿ ಮಾತನಾಡುತ್ತ ಜಿಲ್ಲಾಧಿಕಾರಿಯನ್ನೇ ಆಶ್ಚರ್ಯಚಕಿತರಾಗುವಂತೆ ಮಾಡಿದರು. ಟೀನಾ ದಾಬಿ ಅವರು ಇತ್ತೀಚೆಗೆ ಬಾರ್ಮರ್‌ನ ಜಿಲ್ಲಾಧಿಕಾರಿಯಾಗಿ ನಿಯುಕ್ತರಾಗಿದ್ದಾರೆ.

ರಾಜಸ್ಥಾನಿ ಸಾಂಪ್ರದಾಯಿಕ ಉಡುಗೆ ತೊಟ್ಟು ಕಾರ್ಯಕ್ರಮದ ವೇದಿಕೆಗೆ ಬಂದ ಸೋನು ಕನ್ವರ್ ಮಾತನಾಡುತ್ತಾ, ಈ ದಿನದ ಭಾಗವಾಗಿರುವುದಕ್ಕೆ ನನಗೆ ಸಂತೋಷವಾಗಿದೆ. ಮೊದಲನೆಯದಾಗಿ ನಮ್ಮ ಕಲೆಕ್ಟರ್ ಟೀನಾ ಮೇಡಮ್ ಅವರನ್ನು ನಾನು ಸ್ವಾಗತಿಸುತ್ತೇನೆ. ಮಹಿಳೆಯಾಗಿ ಟೀನಾ ಮೇಡಮ್ ಅವರನ್ನು ಸ್ವಾಗತಿಸುವುದು ಗೌರವ ಎಂದು ಅವರು ಸಮಾರಂಭದಲ್ಲಿ ಹೇಳಿದರು.

ಬಳಿಕ ಜಲ ಸಂರಕ್ಷಣೆಯ ಕುರಿತು ಮಾತನಾಡಿದ ಸೋನು ಕನ್ವರ್ ಅವರು ಟೀನಾ ದಾಬಿ ಸೇರಿದಂತೆ ನೆರೆದವರೆಲ್ಲರನ್ನೂ ಬೆರಗುಗೊಳ್ಳುವಂತೆ ಮಾಡಿದರು.

2015ರಲ್ಲಿ ಯೂನಿಯನ್ ಪಬ್ಲಿಕ್ ಸರ್ವಿಸಸ್ ಕಮಿಷನ್ (UPSC) ಪರೀಕ್ಷೆಯಲ್ಲಿ ಮೊದಲ ಪ್ರಯತ್ನದಲ್ಲೇ ಅಗ್ರಸ್ಥಾನ ಗಳಿಸಿದ ಟೀನಾ ದಾಬಿ ಅಜ್ಮೀರ್‌ನಲ್ಲಿ ತಮ್ಮ ಆಡಳಿತ ಸೇವೆಯನ್ನು ನೀಡಿದರು. ಅಲ್ಲಿ ಅವರನ್ನು ಸಹಾಯಕ ಕಲೆಕ್ಟರ್ ಆಗಿ ನೇಮಿಸಲಾಯಿತು. ಅವರ ತಂಗಿ ರಿಯಾ ದಾಬಿ ಕೂಡ 2020 ರಲ್ಲಿ ಯುಪಿಎಸ್‌ಸಿ ಅನ್ನು 15 ನೇ ಅಖಿಲ ಭಾರತ ಶ್ರೇಣಿಯೊಂದಿಗೆ ತೇರ್ಗಡೆ ಹೊಂದಿದ್ದರು.

Viral Video: ಹಾವಿಗೆ ಮುತ್ತು ಕೊಡಲು ಹೋದವನಿಗೆ ಏನಾಯ್ತು ನೋಡಿ!

ಸೆಪ್ಟೆಂಬರ್ ತಿಂಗಳ ಆರಂಭದಲ್ಲಿ ಬಾರ್ಮರ್‌ಗೆ ಜಿಲ್ಲಾಧಿಕಾರಿಯಾಗಿ ವರ್ಗಾವಣೆಯಾಗುವ ಮೊದಲು ಟೀನಾ ದಾಬಿ ಜೈಪುರದಲ್ಲಿ ಉದ್ಯೋಗ ಖಾತರಿ ಯೋಜನೆಯ (ಇಜಿಎಸ್) ಆಯುಕ್ತರಾಗಿದ್ದರು. ಅವರು ಈ ಹಿಂದೆ ಜೈಸಲ್ಮೇರ್ ಜಿಲ್ಲಾಧಿಕಾರಿಯಾಗಿಯೂ ಸೇವೆ ಸಲ್ಲಿಸಿದ್ದರು. ಅವರ ಪತಿ ಬಿಕಾನೇರ್‌ನಲ್ಲಿ ನೇಮಕಗೊಂಡಿದ್ದ ಪ್ರದೀಪ್ ಗವಾಂಡೆ ಅವರನ್ನು ಇತ್ತೀಚೆಗೆ ಜಲೋರ್‌ಗೆ ವರ್ಗಾವಣೆಗೊಳಿಸಲಾಗಿದೆ.

Leave a Reply

Your email address will not be published. Required fields are marked *