Thursday, 12th December 2024

Viral Video: ತಿಂದದ್ದನ್ನು ಬಿಡೋದ್ರಲ್ಲಿ ಐಸ್ ಕ್ರೀಂ ಕೊಡ್ತಾರಲ್ಲಾ..!? – ಹೀಗ್‌ ತಿಂದ್ರೆ ಹೊಟ್ಟೆಗೆ ಸೇರುತ್ತಾ..?

ಈ ವಿಚಿತ್ರ ಸುದ್ದಿ ಮತ್ತು ವಿಡಿಯೋವನ್ನು ನೋಡಿದ ಮೇಲೆ ಒಂದೋ ನೀವು ಐಸ್ ಕ್ರೀಂ (Ice Cream) ತಿನ್ನೋದು ಬಿಡ್ತೀರ ಅಥವಾ ಐಸ್ ಕ್ರೀಂ ತಿನ್ನೋವಾಗ ‘ವ್ಯಾಕ್.. ವ್ಯಾಕ್..’ ಅಂತೀರಾ..! ಒಟ್ಟಿನಲ್ಲಿ ಈ ಸುದ್ದಿ ಓದೋಕೂ ಹೇಸಿಗೆ, ವಿಡಿಯೋ ನೋಡೋಕೂ ನಿಮ್ಗೆ ಹೇಸಿಗೆಯಾಗ್ಬಹುದು. ಒಟ್ಟಿನಲ್ಲಿ ಇಂತದ್ದೊಂದು ವಿಚಿತ್ರ ಫುಡ್ ಎಕ್ಸ್ ಪರಿಮೆಂಟ್ ಇದೀಗ ಸೋಶಿಯಲ್ ಮೀಡಿಯಾದಲ್ಲಿ (Social Media) ಟ್ರೆಂಡಿಂಗ್ ಆಗಿದ್ದು, ಈ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್ (Viral Video) ಆಗಿದೆ.

ಐಸ್‌ಕ್ರೀಂ ಅಂದ್ರೆ ಸಣ್ಣ ಮಕ್ಕಳಿಂದ ಹಿಡಿದು ಪ್ರಾಯದ ಮುದುವರೆಗೂ ಬಾಯಲ್ಲಿ ನೀರೂರುತ್ತೆ. ಮತ್ತೆ ಐಸ್ ಕ್ರೀಂ ತಿನ್ನಲು ಯಾವುದೇ ಸಮಯದ ಹಾಗೂ ಕಾಲದ ಹಂಗಿರುವುದಿಲ್ಲ. ಆದರೆ ನೀವು ತಿನ್ನುವ ಐಸ್ ‍ಕ್ರೀಂ ಅನ್ನು ನಮಗೆ ಸರ್ವ್ ಮಾಡುವ ವಿಧಾನವೂ ಮುಖ್ಯವಾಗಿರುತ್ತದೆ. ಐಸ್ ಕ್ರೀಂನ್ನು ಹೇಗೇಗೋ ಸರ್ವ್ ಮಾಡಿದ್ರೆ ನೀವು ತಿಂತೀರಾ..? ಆದ್ರೆ ಇಲ್ಲೊಂದು ಕಡೆ ಡೆಲಿಷಿಯಸ್ ಐಸ್ ಕ್ರೀಂನ್ನು ವೆಸ್ಟರ್ನ್ ಕಮೋಡ್ ನಲ್ಲಿ ಸರ್ವ್ ಮಾಡುತ್ತಿರುವ ವಿಡಿಯೋ ಒಂದು ಇದೀಗ ನೆಟ್ ಲೋಕವನ್ನು ‘ವ್ಯಾಕ್.. ವ್ಯಾಕ್..’ ಅನ್ನುವಂತೆ ಮಾಡಿದೆ.

ಈ ರೀತಿಯಾಗಿ ವೆಸ್ಟರ್ನ್ ಕಮೋಡ್ ನಲ್ಲಿ ಸರ್ವ್ ಮಾಡಿದ ಐಸ್ ಕ್ರೀಂನ್ನು ಅಲ್ಲಿದ್ದವರು ತಮ್ಮ ಕೈಯಲ್ಲಿದ್ದ ಸ್ಪೂನನ್ನು ಕಮೋಡ್ ನೊಳಗೆ ಹಾಕಿ ಅದರಲ್ಲಿದ್ದ ಐಸ್ ಕ್ರೀಂ ಸ್ಕೂಪ್ ಗಳನ್ನು ತೆಗೆದು ತಿನ್ನೋದು ನೋಡ್ತಿದ್ರೆ ಹೆಂಗೆಂಗೋ ಆಗ್ತದಪ್ಪಾ..!

ಇದೊಂದು ಹಳೆಯ ವಿಡಿಯೋ ಆಗಿದ್ದು, ರೆಸ್ಟೋರೆಂಟ್ ಒಂದರಲ್ಲಿ ಗ್ರಾಹಕರು ಈ ರೀತಿಯಾಗಿ ವಿಚಿತ್ರ ರೀತಿಯಲ್ಲಿ ಐಸ್ ಕ್ರೀಂ ಸವಿಯುತ್ತಿರುವ ಈ ವಿಡಿಯೋ ಬಹಳ ಸಮಯದಿಂದ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ ಮತ್ತು ಇದೀಗ ಈ ವಿಡಿಯೋ ವೈರಲ್ ಆಗಿದೆ. ಇದು ಇಸ್ರೇಲ್ ನ (Israel) ಟೆಲ್ ಅವಿವಾದಲ್ಲಿನ (Tel Aviv) ಒಂದು ರೆಸ್ಟೋರೆಂಟ್ ನಲ್ಲಿ ಶೂಟ್ ಮಾಡಲಾದ ವಿಡಿಯೋ ಎಂದು ತಿಳಿದುಬಂದಿದೆ.

ಈ ವಿಡಿಯೋದಲ್ಲಿರುವಂತೆ, ರೆಸ್ಟೋರೆಂಟ್ ಒಂದರಲ್ಲಿ ವೆಯ್ಟರ್ ವೆಸ್ಟರ್ನ್ ಕಮೋಡ್ ಮಾದರಿಯ ಪಾತ್ರೆಯಲ್ಲಿ ಚಾಕೊಲೇಟ್ ಐಸ್ ಕ್ರೀಂ ತುಂಬಿಸಿ ಅದನ್ನು ಗ್ರಾಹಕರ ಟೇಬಲ್ ಮೇಲೆ ಇರಿಸುತ್ತಾನೆ. ಅಲ್ಲಿದ್ದವರು ನಗುತ್ತಾ ಈ ಕಮೋಡ್ ನೊಳಗೆ ಸ್ಪೂನ್ ಹಾಕಿ ಐಸ್ ಕ್ರೀಂ ತಿನ್ನುತ್ತಾ ಎಂಜಾಯ್ ಮಾಡುತ್ತಿದ್ದಾರೆ. ಈ ಕಮೋಡ್ ನೊಳಗಿರುವ ಚಾಕೊಲೇಟ್ ಐಸ್ ಕ್ರೀಂ ಸಹ ‘ಅದೇ’ ಕಲರ್ ನಲ್ಲಿದೆ ಅನ್ನಿ..!

ಈ ಕಮೋಡ್ ಮಾದರಿಯೊಳಗೆ ಐಸ್ ಕ್ರೀಂ ಹೇಗೆ ಹಾಕಲಾಗಿದೆ ಎಂದರೆ, ಕಮೋಡ್ ನ ಸುತ್ತವೂ ಈ ಐಸ್ ಕ್ರೀಂ ಅಲ್ಲಲ್ಲಿ ಹರಡಿದ ರೀತಿಯಲ್ಲಿದ್ದು, ಯಾರೋ ವಿಸರ್ಜನೆ ಮಾಡಿದ ರೀತಿಯಲ್ಲೇ ತೋರುತ್ತಿದೆ. ಅದಕ್ಕೇ ನಾವಾಗ್ಲೆ ಹೇಳಿದ್ದು, ಇದನ್ನ ತಿಂದ್ರೆ ಹೊಟ್ಟೆಗೆ ಸೇರುತ್ತಾ ಅಂತ..!? ಈ ವಿಚಿತ್ರ ವಿಡಿಯೋ ನೋಡಿದ ನೆಟ್ಟಿಗರು ಇದಕ್ಕೆ ವಿಧವಿಧವಾಗಿ ಕಮೆಂಟ್ ಮಾಡ್ತಿದ್ದಾರೆ. ‘ಅನ್ ಸ್ಟಂಬಲ್ಡ್’ ಎಂಬ ಇನ್ ಸ್ಟಾ ಪೇಜ್ ನಲ್ಲಿ ಅಪ್ಲೋಡ್ ಮಾಡಿರುವ ಈ ವಿಡಿಯೋ ಈಗಾಗಲೇ 36 ಸಾವಿರ ವಿಕ್ಷಣೆಯನ್ನು ಪಡೆದುಕೊಂಡಿದೆ.

ಈ ಸುದ್ದಿಯನ್ನೂ ಓದಿ: Viral News: ಈ ವಿವಾಹ ಆಮಂತ್ರಣ ಪತ್ರಿಕೆ ನೋಡಿದ್ರೆ ಹೊಟ್ಟೆ ಹುಣ್ಣಾಗುವ ಹಾಗೇ ನಗುತ್ತೀರಿ; ಅಂಥದ್ದೇನಿದೆ ಇದರಲ್ಲಿ?

ನೆಟ್ಟಿಗರು ಈ ವಿಡಿಯೋಗೆ ‘ವಾಂತಿ ಮಾಡುತ್ತಿರುವ’ ಇಮೋಜಿಯೊಂದಿಗೆ ಪ್ರತಿಕ್ರಿಯಿಸುತ್ತಿದ್ದಾರೆ. ‘ನಾನು ಈಗಷ್ಟೇ ಐಸ್ ಕ್ರೀಂ ತಿಂದು ಬಂದೆ.., ಆದ್ರೆ ಈ ವಿಡಿಯೋ ನೋಡಿದ ಮೇಲೆ ನಾನು ಕೆಲವು ದಿನ ಐಸ್ ಕ್ರೀಂ ತಿನ್ನೋದನ್ನೇ ಬಿಡೋದು ಒಳ್ಳೇದು ಅನ್ನಿಸ್ತಿದೆ’ ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ. ‘ಇನ್ನೊಂದು ವಾರ ಐಸ್ ಕ್ರೀಂ ತಿನ್ನೋ ಹಾಗಿಲ್ಲ’ ಎಂದು ಇನ್ನೊಬ್ಬರು ಕಮೆಂಟ್ ಮಾಡಿದ್ದಾರೆ.

ಒಟ್ಟಿನಲ್ಲಿ ಏನೇನೋ ವಿಚಿತ್ರಗಳನ್ನು ಟ್ರೈ ಮಾಡೋ ಭರದಲ್ಲಿ ‘ಬಿಡೋದ್ರಲ್ಲಿ, ತಿನ್ನೋಕೆ ಕೊಡೋದು ಎಷ್ಟು ಸರಿ ಅಲ್ವಾ..? ನೀವೇನಂತೀರಾ..!?