Saturday, 14th December 2024

Viral Video: ಕೆಫೆ ಕ್ಯಾಬಿನ್‌ಗಳಲ್ಲಿ ವಿದ್ಯಾರ್ಥಿ-ವಿದ್ಯಾರ್ಥಿನಿಯರ ಸರಸ! ಆತಂಕಕಾರಿ ವಿಡಿಯೊ

Viral Video

ಕಾಲೇಜು ವಿದ್ಯಾರ್ಥಿಗಳು (College students) ಅಶ್ಲೀಲ ಕೃತ್ಯಗಳಲ್ಲಿ ತೊಡಗಿರುವ ಘಟನೆ ಮಧ್ಯಪ್ರದೇಶದ ಇಂದೋರ್‌ನ ಕೆಫೆಯೊಂದರಲ್ಲಿ (Indore Cafe) ನಡೆದಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ (Social Media) ವೈರಲ್ (Viral Video) ಆಗಿದೆ. ಕೆಫೆಯ ಖಾಸಗಿ ಕ್ಯಾಬಿನ್‌ಗಳಲ್ಲಿ ಕಾಲೇಜು ವಿದ್ಯಾರ್ಥಿಗಳು ಅಶ್ಲೀಲ ಕೃತ್ಯಗಳಲ್ಲಿ ತೊಡಗಿಕೊಂಡಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಈ ಕುರಿತು ಸಾರ್ವಜನಿಕರು ದಿಗ್ಭ್ರಮೆ ವ್ಯಕ್ತಪಡಿಸಿದ ಬಳಿಕ ಪೊಲೀಸರು ತನಿಖೆಯನ್ನು ಪ್ರಾರಂಭಿಸಿದರು.

ಮಲ್ಹಾರ್‌ಗಂಜ್ ಪೊಲೀಸ್ ಠಾಣಾ ವ್ಯಾಪ್ತಿಯ ಕೆಫೆಯಲ್ಲಿನ ವಿಡಿಯೋ ಇದಾಗಿದೆ ಎನ್ನಲಾಗಿದೆ. ಕೆಫೆಯ ಪ್ರತಿಯೊಂದು ಕ್ಯಾಬಿನ್‌ಗೂ ಗೌಪ್ಯತೆಗಾಗಿ ಪರದೆಗಳನ್ನು ಹಾಕಲಾಗಿತ್ತು. ಕಾಲೇಜು ವಿದ್ಯಾರ್ಥಿಗಳು ಜೋಡಿಯಾಗಿ ಇದರಲ್ಲಿ ಇರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಕೆಲವು ಹುಡುಗ ಮತ್ತು ಹುಡುಗಿಯರು ಅಪ್ರಾಪ್ತ ವಯಸ್ಕರಾಗಿದ್ದಾರೆ. 50 ಸೆಕೆಂಡುಗಳ ಈ ಕ್ಲಿಪ್ ಸಾಮಾಜಿಕ ಜಾಲತಾಣದಲ್ಲಿ ಭಾರಿ ಆಕ್ರೋಶವನ್ನು ಹುಟ್ಟುಹಾಕಿದೆ.

ಈ ಕುರಿತು ಪೊಲೀಸರು ತನಿಖೆ ಪ್ರಾರಂಭಿಸಿದ್ದಾರೆ ಎಂದು ತಿಳಿಸಿದ ಡಿಸಿಪಿ ವಿನೋದ್ ಮೀನಾ, ಮಲ್ಹಾರಗಂಜ್ ಪ್ರದೇಶದ ಕೆಫೆಯಿಂದ ಈ ವಿಡಿಯೋ ವೈರಲ್ ಆಗಿದೆ. ಈ ವಿಷಯವು ಅತ್ಯಂತ ಅಶ್ಲೀಲವಾಗಿದೆ ಮತ್ತು ತನಿಖೆ ನಡೆಯುತ್ತಿದೆ. ಸಂದರ್ಶಕರ ಸರಿಯಾದ ದಾಖಲೆಗಳನ್ನು ನಿರ್ವಹಿಸಲಾಗಿದೆಯೇ ಎಂದು ಪರಿಶೀಲಿಸಲು ಶೀಘ್ರದಲ್ಲೇ ಕೆಫೆಯಲ್ಲಿ ಪರಿಶೀಲನೆ ನಡೆಸಲಾಗುತ್ತದೆ. ಕಾನೂನು ಬಾಹಿರ ಚಟುವಟಿಕೆಗಳು ಕಂಡು ಬಂದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಬಡಾ ಗಣಪತಿ ಮತ್ತು ಆಖಿರಿ ಚೌರಾಹಾ ನಡುವಿನ ಪ್ರದೇಶದ ಅನೇಕ ಕೆಫೆಗಳು ಇದೇ ಮಾದರಿಯ ಕೆಲಸಗಳು ನಡೆಯುತ್ತಿವೆ ಎನ್ನುವ ಆರೋಪಗಳು ಕೇಳಿ ಬಂದಿವೆ. ಈ ಕೆಫೆಗಳ ಬಳಿ ವಾಸಿಸುವ ನಿವಾಸಿಗಳು ಅನೈತಿಕ ಚಟುವಟಿಕೆಗಳ ಬಗ್ಗೆ ಶಂಕೆ ವ್ಯಕ್ತಪಡಿಸಿದ್ದಾರೆ. ಹೆಚ್ಚಾಗಿ ಸಮೀಪದ ಶಾಲೆ ಮತ್ತು ಕೋಚಿಂಗ್ ಸೆಂಟರ್‌ಗಳ ವಿದ್ಯಾರ್ಥಿಗಳು ಈ ಕೆಫೆಗಳಿಗೆ ಆಗಾಗ್ಗೆ ಬರುತ್ತಾರೆ ಮತ್ತು ಅನುಚಿತ ವರ್ತನೆಯಲ್ಲಿ ತೊಡಗುತ್ತಾರೆ ಎಂದು ಅವರು ದೂರಿದ್ದಾರೆ. ಕೆಲವು ಹಿಂದೂ ಸಂಘಟನೆಗಳು ಕೆಫೆಗಳು “ಲವ್ ಜಿಹಾದ್” ನಂತಹ ಚಟುವಟಿಕೆಗಳನ್ನು ಪ್ರೋತ್ಸಾಹಿಸುತ್ತಿವೆ ಎಂದು ಆರೋಪಿಸಿದ್ದಾರೆ.

Viral News: ಮಗಳ ಲವ್‌ಗೆ ಬೇಸತ್ತು ಕೊಲೆಗೆ ಸುಫಾರಿ ಕೊಟ್ಟ ಅಮ್ಮನೇ ಹತ್ಯೆಯಾದಳು! ಪ್ಲ್ಯಾನ್‌ಗೆ ಟ್ವಿಸ್ಟ್‌ ಸಿಕ್ಕಿದ್ದು ಎಲ್ಲಿ?

ಈ ಬಗ್ಗೆ ತನಿಖೆ ನಡೆಸಲಾಗುತ್ತಿದ್ದು ಆರೋಪ ಸಾಬೀತಾದರೆ ಕೆಫೆ ನಿರ್ವಾಹಕರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.