ಬೆಂಗಳೂರು : ಬೀದಿ ಬದಿಯ ಮಾರಾಟಗಾರರು ಹೊಸ ರೀತಿಯ ವಿಶಿಷ್ಟವಾದ ಫುಡ್‍ಗಳನ್ನು ತಯಾರಿಸುವಂತಹ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಆಗಾಗ ಹರಿದಾಡುತ್ತಿರುತ್ತವೆ. ಗ್ರಾಹಕರನ್ನು ಸೆಳೆಯಲು ಕ್ಲಾಸಿಕ್ ಭಕ್ಷ್ಯಗಳನ್ನು ತಮ್ಮದೇ ಆದ ರೀತಿಯಲ್ಲಿ ವಿಶೇಷವಾಗಿ ತಯಾರಿಸಿ ಕೊಡುತ್ತದೆ. ಇಂತಹ ಫುಡ್‍ಗಳು ಕೆಲವೊಮ್ಮೆ ಅವುಗಳ ಅಸಾಮಾನ್ಯ ರುಚಿಯಿಂದ ಫೇಮಸ್ ಆಗುತ್ತವೆ. ಆದರೆ ಕೆಲವೊಬ್ಬರು ತಿಂದು ಜನರು ಮುಖ ಕಿವುಚಿಕೊಳ್ಳುತ್ತಾರೆ. ಇದೀಗ ಬೆಂಗಳೂರಿನ ಬೀದಿಗಳಲ್ಲಿ ಮಾರಾಟವಾಗುತ್ತಿರುವ ಚಾಕೊಲೇಟ್ ತುಂಬಿದ ಇಡ್ಲಿ ಕೂಡ ತನ್ನ ವಿಚಿತ್ರವಾದ ರುಚಿಯ ಕಾರಣದಿಂದ ಸುದ್ದಿಯಾಗಿದೆ. ಇದರ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ (Viral Video) ಆಗಿದೆ.
ಇನ್ಸ್ಟಾಗ್ರಾಮ್ ಫುಡ್ ಬ್ಲಾಗರ್ ಅಮರ್ ಸೋಧಿ ಈ ಚಾಕೋಲೆಟ್ ಇಡ್ಲಿಯ ವಿಡಿಯೊ ಹಂಚಿಕೊಂಡಿದ್ದಾರೆ. ಈ ವೈರಲ್ ವಿಡಿಯೊದಲ್ಲಿ, @foodie_incarnate ಎಂದು ಕರೆಯಲ್ಪಡುವ ಬೀದಿ ವ್ಯಾಪಾರಿಯೊಬ್ಬರು 100 ರೂಪಾಯಿಗೆ ಒಂದು ಪ್ಲೇಟ್ ಚಾಕೊಲೇಟ್ ತುಂಬಿದ ಇಡ್ಲಿಗಳನ್ನು ಮಾರಾಟ ಮಾಡುತ್ತಾರಂತೆ. ಜೊತೆಗೆ ಈಗಾಗಲೇ ವಿಚಿತ್ರವಾಗಿದ್ದ ಈ ಖಾದ್ಯ ಮತ್ತಷ್ಟು ವಿಚಿತ್ರವಾಗಿಸಲು , ಈ ಇಡ್ಲಿಗಳ ಮೇಲೆ ಸ್ಟ್ರಾಬೆರಿ ಜಾಮ್, ಮಾವಿನ ಸಿರಪ್ ಮತ್ತು ಲಿಚಿ ಸ್ಪ್ರೆಡ್ ಅನ್ನು ಹಾಕಿದ್ದಾರೆ. ನಂತರ ಅವರು ಅದಕ್ಕೆ ಒಂದು ಕಪ್ ಸ್ಟ್ರಾಬೆರಿ ಐಸ್ ಕ್ರೀಮ್ ಜೊತೆಗೆ ಅದರ ಮೇಲೆ ಸಾಂಪ್ರದಾಯಿಕ ಪೊಡಿ ಮಸಾಲಾ ಅಥವಾ ಚಟ್ನಿ ಬದಲಿಗೆ ಚಾಕೊಲೇಟ್ ಹಾಕಿ ಅದನ್ನು ಅಲಂಕರಿಸಿ ಗ್ರಾಹಕರಿಗೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಇದಕ್ಕಿಂತ ಕೆಟ್ಟದ್ದನ್ನು ನಾನು ತಿಂದಿಲ್ಲ. ಇದು ತುಂಬಾ ಕೆಟ್ಟದಾಗಿದೆ. ಇದು ಒಂದೇ ಸಮಯದಲ್ಲಿ ಉಪ್ಪು, ಹುಳಿ ಮತ್ತು ಸಿಹಿ ರುಚಿ ನೀಡುತ್ತಿದೆ” ಎಂದು ಬ್ಲಾಗರ್ ವಿಡಿಯೊದಲ್ಲಿ ಹೇಳಿದ್ದಾರೆ.
ಇದನ್ನೂ ಓದಿ: ಪ್ರಿಯಕರನನ್ನು ಪೆಟ್ಟಿಗೆಯಲ್ಲಿ ಅಡಗಿಸಿಟ್ಟ ಪ್ರಿಯತಮೆ; ಮುಂದೇನಾಯ್ತು ನೋಡಿ!
ಇನ್‌ಸ್ಟಾಗ್ರಾಮ್ ಪೋಸ್ಟ್ ಮಾಡಿದ ಈ ವಿಡಿಯೊಗೆ 2.3 ದಶಲಕ್ಷಕ್ಕೂ ಹೆಚ್ಚು ವೀವ್ಸ್ ಬಂದಿದೆ. ಈ ವಿಡಿಯೊಗೆ ಅನೇಕರು “ಜಸ್ಟಿಸ್ ಫಾರ್ ಇಡ್ಲಿ” ಎಂದು ಕಾಮೆಂಟ್ ಮಾಡಿ ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ.