Wednesday, 11th December 2024

Viral Video: ಗಣಪತಿ ವಿಸರ್ಜನೆಗೆ ಅನುಮತಿ ಸಿಕ್ಕಿಲ್ಲ…ಸುಮ್ಮನೆ ಕೂರುವ ಜಾಯಮಾನ ನಮ್ದಲ್ಲ ಎಂದ ಯುವಕರು ಮಾಡಿದ್ದೇನು ಗೊತ್ತಾ?

Viral video

ಹೈದರಾಬಾದ್‌: ಗಣೇಶ ಹಬ್ಬ ಬಂತಂದ್ರೆ ಸಾಕು ಎಲ್ಲರಿಗೂ ಸಂ‍ಭ್ರಮವೋ ಸಂ‍ಭ್ರಮ. ಅದರಲ್ಲೂ ಯುವಕರ ಪಾಲಿಗಂತೂ ಇದು ಉತ್ಸವ. ಅಲ್ಲಲ್ಲಿ ಗಣೇಶನನ್ನು ಕೂರಿಸಿ , ಪೂಜೆ ಪುನಸ್ಕಾರ ಮಾಡಿ, ಕೊನೆಗೆ ಅದ್ದೂರಿ ಮೆರವಣಿಗೆಯಲ್ಲಿ ಗಣಪತಿಯನ್ನು ವಿಸರ್ಜನೆ ಮಾಡುತ್ತಾರೆ. ಅದೇ ರೀತಿಯಲ್ಲಿ ಆ ಊರಿನಲ್ಲೂ ಯುವಕರು ಗಣಪತಿಯನ್ನು ಕೂರಿಸಿದ್ದರು. ಭವ್ಯ ಮೆರವಣಿಗೆ ಸಾಗಿ ವಿಸರ್ಜನೆಗೆ ಸಜ್ಜು ಮಾಡಿಕೊಂಡಿದ್ದರು. ಆದರೆ ಕೊನೇ ಕ್ಷಣದಲ್ಲಿ ‍ಸ್ಥಳೀಯಾಡಳಿತ ಗಣಪತಿ ವಿಸರ್ಜನೆಗೆ ಅನುಮತಿ ನೀಡಲಿಲ್ಲ. ಹಾಗಂತ ಸುಮ್ಮನೆ ಕೂರು ಜಾಯಮಾನ ಯುವಕರದ್ದಾಗಿರಲಿಲ್ಲ. ಅದಕ್ಕೆ ಪರ್ಯಾಯ ಮಾರ್ಗ ಏನಿದು ಅಂತ ಹುಡುಕೋಕೆ ಶುರುಮಾಡಿ ಯುವಕರಿಗೆ ಸಿಕ್ಕ ಉಪಾಯ ಮಾತ್ರ ಇದೀಗ ಎಲ್ಲರ ಗಮನ ಸೆಳೆದಿದೆ(Viral Video).

ಏನಿದು ಘಟನೆ?

ಆಂ‍ಧ್ರಪ್ರದೇಶದ ಗೋದಾವರಿಯಲ್ಲಿ ಈ ಘಟನೆ ನಡೆದಿದ್ದು, ಇಲ್ಲಿ ಕಡಿಯಮ್‌ ಮಂಡಲದಲ್ಲಿ ಯುವಕರು ಸೇರಿ ಗಣಪತಿಯನನು ಕೂರಿಸಿದ್ದರು. ಇನ್ನೇ ವಿಸರ್ಜನೆ ಮಾಡಬೇಕೆನ್ನುವ ಹೊತ್ತಿಗೆ ಸ್ಥಳೀಯಾಡಳಿ ಅನುಮತಿ ನಿರಾಕರಿಸಿದೆ. ಪರ್ಯಾಯ ದಾರಿ ಹುಡುಕಿದ ಯುವಕರಿಗೆ ಸಿಕ್ಕ ದಾರಿ ಮಾತ್ರ ಎಲ್ಲರ ಗಮನ ಸೆಳೆದಿದೆ. ಯುವಕರು ಡ್ರೋನ್‌ ಮೂಲಕ ಗಣಪತಿಯನ್ನು ವಿಸರ್ಜನೆ ಮಾಡಿದ್ದಾರೆ. ಯುವಕರ ಈ ಕ್ರಿಯಾತ್ಮಕ ಐಡಿಯಾದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್‌ ಆಗುತ್ತಿದೆ.

ಒಂಬತ್ತು ದಿನಗಳ ಕಾಲ ಗ್ರಾಮಸ್ಥರು ಗಣೇಶ ಚತುರ್ಥಿಯನ್ನು ಆಚರಿಸಿದರು, ಗಣೇಶನ ಸಣ್ಣ ವಿಗ್ರಹವನ್ನು ಇಟ್ಟು ಬಹಳ ಭಕ್ತಿ ಭಾವದಿಂದ ಪೂಜಿಸಿದರು. ಸ್ಥಳೀಯಾಡಳಿಯ ಅನುಮತಿ ನಿರಾಕರಿಸುತ್ತಿದ್ದಂತೆ ಯುವಕರು ಗಣೇಶ ಮೂರ್ತಿಯನ್ನು ಡ್ರೋನ್‌ಗೆ ಜೋಡಿಸಿದರು. ಡ್ರೋನ್ ತಜ್ಞ ವಿವೇಕ್ ನೇತೃತ್ವದಲ್ಲಿ ಗಣಪತಿಯನ್ನು ವಿಸರ್ಜನೆಗೆಂದು ನದಿಯತ್ತ ಸಾಗಿಸಿದರು. ಮಕ್ಕಳು ಉತ್ಸಾಹದಿಂದ ನೋಡುತ್ತಿದ್ದಂತೆ ಡ್ರೋನ್ ಅನ್ನು ಯಶಸ್ವಿಯಾಗಿ ನ್ಯಾವಿಗೇಟ್ ಮಾಡಿದರು. ಭಾರಿ ಗಾತ್ರದ ವಿಗ್ರಹವನ್ನು ಡ್ರೋನ್‌ನಿಂದ ಮುಳುಗಿಸಿದ ದೃಶ್ಯ ಸ್ಥಳೀಯ ಭಕ್ತರನ್ನು ಬೆರಗುಗೊಳಿಸಿದೆ

ಗಣೇಶನ ವಿಗ್ರಹವನ್ನು ನದಿ ನೀರಿನಲ್ಲಿ ಮುಳುಗಿಸಲು, ಡ್ರೋನ್ ಅನ್ನು ಬಳಸಲಾಯಿತು. ಇದಕ್ಕೆ ಡ್ರೋಣ್​ ನಿಪುಣ ವಿವೇಕ್​​ ನೆರವಾಗಿದ್ದಾನೆ. ಡ್ರೋನ್ ಮೂಲಕ ವಿನಾಯಕ ಮೂರ್ತಿಯನ್ನು ನದಿಯ ಮಧ್ಯಕ್ಕೆ ಕೊಂಡೊಯ್ದು ಅಲ್ಲಿ ಮುಳುಗಿಸಿದಾಗ ಮಕ್ಕಳು ಪುಳಕಿತರಾದರು. ಗಣೇಶನ ಮೂರ್ತಿಯನ್ನು ಡ್ರೋನ್ ಮೂಲಕ ನೀರಿನಲ್ಲಿ ಮುಳುಗಿಸುತ್ತಿರುವುದನ್ನು ಕಂಡು ಸ್ಥಳೀಯ ಭಕ್ತರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಇನ್ನು ಈ ವಿಡಿಯೋ ಬಹಳ ವೈರಲ್‌ ಆಗುತ್ತಿದ್ದು, ನೆಟ್ಟಿಗರು ಸಂತಸ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: Viral Video: ಬೆಂಗಳೂರಿನಲ್ಲಿ ಮಹಿಳೆಯರು ಶಾರ್ಟ್ಸ್‌ ಧರಿಸುವಂತಿಲ್ವಾ? ಭಾರೀ ವೈರಲ್‌ ಆಗ್ತಿದೆ ಈ ವಿಡಿಯೋ