Friday, 22nd November 2024

Viral Video: ನಲಿಯುತ್ತಾ ಕಲಿಕೆ, ವೈರಲ್ ವಿಡಿಯೋಗೆ ಸಾಕಷ್ಟು ಮೆಚ್ಚುಗೆ

Viral Video

ಸಣ್ಣ ಮಕ್ಕಳಿಗೆ ಕಥೆ, ಕವನಗಳನ್ನು (poem, story) ಅರ್ಥ ಮಾಡಿಸುವುದು ತುಂಬಾ ಕಷ್ಟ. ಆದರೆ ಕೆಲವೊಂದು ಹೊಸ ಪ್ರಯೋಗಗಳ (New experiment) ಮೂಲಕ ಅವರಿಗೆ ಅದನ್ನು ಸುಲಭವಾಗಿ ಅರ್ಥ ಮಾಡಿಸಬಹುದು. ಮಕ್ಕಳಿಗೆ ಆಟ, ನೃತ್ಯ, ಸಂಗೀತ ಹೆಚ್ಚು ಖುಷಿ ಕೊಡುತ್ತದೆ. ಹೀಗಾಗಿ ಪಾಠಗಳನ್ನು (lesson) ಈ ಮೂಲಕ ಹೇಳಿಕೊಟ್ಟರೆ ಅದು ಅವರಿಗೆ ಸುಲಭವಾಗಿ ಅರ್ಥವಾಗುತ್ತದೆ. ಇದೇ ರೀತಿಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ (Viral Video) ಆಗಿದ್ದು, ಸಾಕಷ್ಟು ಮಂದಿಯ ಮನ ಗೆದ್ದಿದೆ.

ಯುವ ಶಿಕ್ಷಕಿಯೊಬ್ಬರು ನೃತ್ಯ ಮಾಡುತ್ತಾ ಮಕ್ಕಳಿಗೆ ಪಾಠ ಹೇಳಿಕೊಡುತ್ತಿರುವ ವಿಡಿಯೋ ಇದಾಗಿದೆ.

ವಿದ್ಯಾರ್ಥಿಗಳು ಖುಷಿಯಿಂದ ಶಿಕ್ಷಕಿಯ ಹೆಜ್ಜೆಗಳನ್ನು ಅನುಸರಿಸುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಇದು ಆನ್ಲೈನ್ ನಲ್ಲಿ ಸಾಕಷ್ಟು ಮಂದಿಯ ಮನ ಗೆದ್ದಿದೆ.

ವಿಡಿಯೋದಲ್ಲಿ ಶಿಕ್ಷಕಿಯು ಮಕ್ಕಳಿಗೆ ನೃತ್ಯ ಮಾಡುವುದನ್ನು ಕಲಿಸುವಂತೆ ಭಾಸವಾದರೂ ಇಲ್ಲಿ ಕಲಿಕೆಯೊಂದಿಗೆ ನೃತ್ಯವನ್ನು ಸಂಯೋಜಿಸಿ ಚಿಕ್ಕ ಮಕ್ಕಳಿಗೆ ವಿಭಿನ್ನ ಕವಿತೆಗಳನ್ನು ಶಿಕ್ಷಕಿ ಕಲಿಸುತ್ತಿದ್ದಾರೆ.

ವಿದ್ಯಾರ್ಥಿಗಳು ಶಿಕ್ಷಕಿಯ ಹೆಜ್ಜೆಗಳನ್ನು ಉತ್ಸಾಹದಿಂದ ಅನುಕರಿಸುವುದನ್ನು ವಿಡಿಯೋದಲ್ಲಿ ನೋಡಬಹುದು. ಶಿಕ್ಷಕರು ನೃತ್ಯದ ಹೆಜ್ಜೆಗಳನ್ನು ಪ್ರದರ್ಶಿಸುವುದು ಮಾತ್ರವಲ್ಲದೆ ವಿದ್ಯಾರ್ಥಿಗಳನ್ನು ನಗುವಂತೆ ಮಾಡುವ ಮುದ್ದಾದ ಅಭಿವ್ಯಕ್ತಿಗಳನ್ನು ಕೂಡ ಪ್ರದರ್ಶಿಸಿದ್ದಾರೆ.

ಇನ್‌ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿರುವ ಈ ವಿಡಿಯೋ ಸಾಕಷ್ಟು ಮಂದಿಯ ಮನ ಗೆದ್ದಿದೆ. ಇದಕ್ಕೆ ಹಲವು ಕಾಮೆಂಟ್ ಗಳು ಬಂದಿವೆ. ಒಬ್ಬರು ಕಾಮೆಂಟ್ ವಿಭಾಗದಲ್ಲಿ, ನನ್ನ ಶಾಲೆಯಲ್ಲಿ ಈ ರೀತಿಯ ಶಿಕ್ಷಕಿ ಇದ್ದರೆ ನಾನು ಕಲಿಯ ಬಯಸುತ್ತೇನೆ, ಇದು ಒಂದು ಮೋಜಿನ ಕಲಿಕೆಯ ಅನುಭವದಂತೆ ತೋರುತ್ತಿದೆ ಎಂದು ಹೇಳಿದ್ದಾರೆ.
ಇನ್ನೊಬ್ಬರು, ಇಂತಹ ಶಾಲೆಗೆ ನನ್ನನ್ನು ಸೇರಿಸಿಕೊಳ್ಳಬಹುದು ಮತ್ತು ಮತ್ತೆ ನಾನು ಮಗುವಾಗಬೇಕೆಂದು ಬಯಸುತ್ತೇನೆ ಎಂದು ಹೇಳಿದ್ದಾರೆ.

ಇದಲ್ಲದೆ ಕೆಲವರು, ತುಂಬಾ ಮುದ್ದಾಗಿದೆ ಎಂದು ಹೇಳಿದ್ದಾರೆ.

Viral Video: ಸ್ವಾಮಿ ವಿವೇಕಾನಂದರ ಚಿತ್ರದ ಮುಂದೆ ಬಾಲಿವುಡ್ ಹಾಡಿನ ಡ್ಯಾನ್ಸ್! ತಕ್ಷಣ ಪ್ರಾಂಶುಪಾಲರು ಏನು ಮಾಡಿದರು ನೋಡಿ!

ಮತ್ತೊಬ್ಬರು, ಇಂತಹ ಸೃಜನಾತ್ಮಕ ಬೋಧನಾ ವಿಧಾನಗಳನ್ನು ಬಳಸುವುದರಿಂದ ಶಾಲೆಯು ಆಸಕ್ತಿಕರವಾಗಿರುತ್ತದೆ ಮತ್ತು ವಿದ್ಯಾರ್ಥಿಗಳನ್ನು ತೊಡಗಿಸಿಕೊಳ್ಳುವಂತೆ ಮಾಡುತ್ತದೆ ಎಂದು ತಿಳಿಸಿದ್ದಾರೆ.