ಚಿರತೆಯನ್ನು ಬಾ ಬಾ ಎಂದು ಕರೆದು ವಿಡಿಯೋ ಮಾಡುತ್ತಿದ್ದವರ ಮೇಲೆ ಚಿರತೆ ದಾಳಿ (Leopard attack) ನಡೆಸಿದ ಘಟನೆ ಮಧ್ಯಪ್ರದೇಶದ (Madhya Pradesh) ಶಾಹದೋಲ್ (Shahdol range) ಪ್ರದೇಶದ ದಕ್ಷಿಣ ಅರಣ್ಯ ವಿಭಾಗದ ವ್ಯಾಪ್ತಿಯಲ್ಲಿ ನಡೆದಿದೆ. ಈ ಘಟನೆಯಲ್ಲಿ ಮೂವರು ಗಾಯಗೊಂಡಿದ್ದಾರೆ. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ (Viral Video) ಆಗಿದೆ.
ಪಿಕ್ನಿಕ್‌ಗೆಂದು ಶಾಹದೋಲ್ ವ್ಯಾಪ್ತಿಯ ಖಿತೌಲಿ ಬೀಟ್‌ನಲ್ಲಿರುವ ಸೋನ್ ನದಿಯ ಬಳಿ ಚಿರತೆಯ ವಿಡಿಯೋ ಮಾಡುತ್ತಿದ್ದವರ ಮೇಲೆ ಚಿರತೆ ದಾಳಿ ನಡೆಸಿದೆ. ಗಾಯಗೊಂಡ ಮೂವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಚಿರತೆ ದಾಳಿಗೆ ಒಳಗಾದ ಒಬ್ಬರು 30 ಸೆಕೆಂಡುಗಳ ಕಾಲ ಚಿತ್ರಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಡಿಯೋದ ಆರಂಭದಲ್ಲಿ ಪಿಕ್ನಿಕ್‌ಗೆ ಬಂದವರು ಚಿರತೆಯನ್ನು ಹತ್ತಿರ ಬರುವಂತೆ ಪ್ರಚೋದಿಸುತ್ತಿರುವುದನ್ನು ಕಾಣಬಹುದು.
ಪೊದೆಗಳಲ್ಲಿ ಅವಿತುಕೊಂಡಿದ್ದ ಚಿರತೆಯನ್ನು “ಆಜಾ ಆಜಾ” (ಬಾ ಬಾ) ಎಂದು ಕೆಲವರು ಕರೆಯುತ್ತಿರುವುದು ವಿಡಿಯೋದಲ್ಲಿ ರೆಕಾರ್ಡ್ ಆಗಿದೆ. ಬಳಿಕ ಚಿರತೆಯು ಏಕಾಏಕಿ ಇವರ ದಾಳಿ ನಡೆಸಿದೆ.
Leopard attack in Shahdol range of Madhya Pradesh pic.twitter.com/iXYnxnkXSD
— Dilshad (@dilshad_akhtar1) October 21, 2024
ಮೊದಲು ಇಬ್ಬರ ಮೇಲೆ ದಾಳಿ ನಡೆಸಿದ ಚಿರತೆ ಬಳಿಕ ಇನ್ನೊಬ್ಬನನ್ನು ನೆಲಕ್ಕೆ ಬೀಳಿಸಿ ದಾಳಿ ಮಾಡಿದೆ. ಅಷ್ಟರಲ್ಲಿ ಅಲ್ಲಿದ್ದವರು ಕಿರುಚಿಕೊಂಡು ಚಿರತೆಯನ್ನು ಓಡಿಸಲು ಪ್ರಯತ್ನಿಸಿದಾಗ ಅದು ಗಾಯಾಳುವನ್ನು ಬಿಟ್ಟು ಓಡಿ ಹೋಗಿದೆ. ಕೆಲವೇ ಸೆಕೆಂಡ್ ಗಳ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.
Viral News: ಎಣ್ಣೆ ಹೊಡೆಯುವಂತೆ ಪತಿಗೆ ಚಿತ್ರಹಿಂಸೆ ಕೊಟ್ಟ ಮಹಿಳೆ! ಪೊಲೀಸ್ ಠಾಣೆ ಮೆಟ್ಟಿಲೇರಿದ ಕೇಸ್
ಈ ಕುರಿತು ಪ್ರತಿಕ್ರಿಯಿಸಿರುವ ಶಹದೋಲ್ ನ ಉಪವಿಭಾಗೀಯ ಅರಣ್ಯಾಧಿಕಾರಿ ಬಾದಶಾ ರಾವತ್, ಕೆಲವು ದಿನಗಳ ಹಿಂದೆ ಈ ಪ್ರದೇಶದಲ್ಲಿ ಹುಲಿ ದಾಳಿ ನಡೆದಿತ್ತು. ಬಳಿಕ ಅರಣ್ಯಕ್ಕೆ ಹೋಗದಂತೆ ಜನರಿಗೆ ಎಚ್ಚರಿಕೆ ನೀಡಲಾಗಿದೆ. ಇಂತಹ ಘಟನೆಗಳ ವೇಳೆ ಜನರಿಗೆ ಸಹಾಯ ಮಾಡಲು ನಿಯಂತ್ರಣ ಕೊಠಡಿಯನ್ನು ಸಹ ಸ್ಥಾಪಿಸಲಾಗಿದೆ ಎಂದು ತಿಳಿಸಿದರು.