ನೊಯ್ಡಾ: ಸಾರ್ವಜನಿಕ ಸ್ಥಳದಲ್ಲೇ ಯುವತಿಯ ಮೇಲೆ ವ್ಯಕ್ತಿಯೋರ್ವ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾದಲ್ಲಿ (Greater Noida) ನಡೆದಿದೆ. ನಿನ್ನೆ ಈ ಘಟನೆ ನಡೆದಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್(Viral Video) ಆಗುತ್ತಿದ್ದು, ಇದು ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ.
ಈ ವಿಡಿಯೋದಲ್ಲಿರುವಂತೆ, ಓಮ್ಯಾಕ್ಸ್ ಪಾಮ್ ಗ್ರೀನ್ ಸೊಸೈಟಿಯ (Omaxe Palm Green Society) ಪಾರ್ಕಿಂಗ್ ಆವರಣದಲ್ಲಿ ವ್ಯಕ್ತಿಯೊಬ್ಬ ಯುವತಿಯ ತಲೆಗೂಲದನ್ನು ಹಿಡಿದು ಎಳೆದಾಡುತ್ತಾ ಆಕೆಗೆ ಹೊಡೆಯುತ್ತಿರುವ ದೃಶ್ಯ ದಾಖಲಾಗಿದೆ. ಈ ಸಂದರ್ಭದಲ್ಲಿ ಅಲ್ಲಿದ್ದವರು ಮಧ್ಯಪ್ರವೇಶಿಸಿ ಯುವಕನ ದೌರ್ಜನ್ಯದಿಂದ ಮಹಿಳೆಯನ್ನು ಬಿಡಿಸಿದ್ದಾರೆ. ಬಳಿಕ, ಆ ವ್ಯಕ್ತಿ ಏನೂ ಆಗಿಲ್ಲವೆಂಬಂತೆ ಅಲ್ಲಿಂದ ತೆರಳಿದ್ದಾನೆ.
महिला सुरक्षा महिला सम्मान की बात सिर्फ दिखावे के लिए ही हैं, खासकर जब आप रसूख वाले हैं तो किसी भी महिला को पीट सकते हैं, वीडियो ग्रेटर नोएडा की ओमेक्स पाम ग्रीन सोसायटी का है जहां युवती को पीटा जा रहा है. शिकायत पर रसूख की धमकी दी गई है।@dgpup @Uppolice @noidapolice pic.twitter.com/ttBewkNcUm
— RASHTRAPATH NEWS (@NewsRashtrapath) November 2, 2024
ಯುವತಿಯ ಮೇಲೆ ಸಾರ್ವಜನಿಕವಾಗಿ ದೌರ್ಜನ್ಯವೆಸಗಿದ ಯುವಕನನ್ನು ಸೂರ್ಯ ಎಂದು ಗುರುತಿಸಲಾಗಿದ್ದು, ಈತ ಹಿಂಸಾತ್ಮಕ ಪ್ರವೃತ್ತಿಯ ವರ್ತನೆಯುಳ್ಳ ವ್ಯಕ್ತಿ ಎಂಬ ಮಾಹಿತಿ ಲಭ್ಯವಾಗಿದೆ. ವರದಿಗಳ ಪ್ರಕಾರ, ಸೂರ್ಯ ಈ ಹಿಂದೆಯೂ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದ್ದ ಮತ್ತು ಈ ಪ್ರಕರಣ ಪೊಲೀಸ್ ಠಾಣೆಯ ಮೆಟ್ಟಿಲನ್ನೂ ಏರಿತ್ತು. ಆದರೆ, ಈತನ ಸಾಮಾಜಿಕ ಸ್ಥಿತಿಗತಿ ಹಾಗೂ ಪ್ರಭಾವದ ಕಾರಣದಿಂದ ಈತ ಪ್ರತೀ ಬಾರಿಯೂ ಕಾನೂನಿನ ಕೈಗಳಿಂದ ತಪ್ಪಿಸಿಕೊಳ್ಳುತ್ತಿದ್ದ.
ಇದೀಗ, ಈತನ ಹಿಂಸಾತ್ಮಕ ವರ್ತನೆ ಕೆಮರಾದಲ್ಲಿ ಸೆರೆಯಾಗಿರುವ ಕಾರಣ ಮತ್ತೊಮ್ಮೆ ಈತನ ವರ್ತನೆ ಬಗ್ಗೆ ಸ್ಥಳಿಯ ಸಾರ್ವಜನಿಕರಲ್ಲಿ ಭೀತಿಯ ವಾತಾವರಣ ಸೃಷ್ಟಿಯಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ ಪ್ರಾರಂಭದಲ್ಲಿ ಯಾವುದೇ ಪೊಲೀಸ್ ದೂರು ದಾಖಲಾಗದಿದ್ದರೂ, ಎಕ್ಸ್ (X)ನಲ್ಲಿ ವೈರಲ್ ಆದ ಹಲ್ಲೆಯ ವಿಡಿಯೋದ ಆಧಾರದಲ್ಲಿ ಗೌತಮ್ ಬುದ್ಧ ನಗರ ಪೊಲೀಸ್ ಕಮಿಷನರೇಟ್ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ದಾದ್ರಿ ಪೊಲೀಸ್ ಠಾಣೆಯ (Dadri police station) ಅಧಿಕಾರಿಗಳು, ಈ ಘಟನೆಯ ಸಂತ್ರಸ್ತೆಯನ್ನು ಸಂಪರ್ಕಿಸಿ ಮುಂದಿನ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
ಈ ಸುದ್ದಿಯನ್ನೂ ಓದಿ: Viral Video: ಪತಿ ಪ್ರಾಣ ಬಿಟ್ಟಿದ್ದ ಹಾಸಿಗೆಯನ್ನು ಗರ್ಭಿಣಿ ಪತ್ನಿಯಿಂದ ಕ್ಲೀನ್ ಮಾಡಿಸಿದ ಆಸ್ಪತ್ರೆ ಸಿಬ್ಬಂದಿ; ಶಾಕಿಂಗ್ ವಿಡಿಯೋ ವೈರಲ್