ಮುಂಬೈ: ಸಿಎಸ್ಎಂಟಿ-ಕಲ್ಯಾಣ್ ಫಾಸ್ಟ್ ಎಸಿ ಲೋಕಲ್ ರೈಲಿನಲ್ಲಿ ಇತ್ತೀಚೆಗೆ ಆಘಾತಕಾರಿ ಘಟನೆಯೊಂದು ನಡೆದಿದ್ದು, ಮಹಿಳಾ ಕಂಪಾರ್ಟ್ಮೆಂಟ್ಗೆ ವ್ಯಕ್ತಿಯೊಬ್ಬ ನಗ್ನನಾಗಿ ನುಗ್ಗಿದ್ದು ಮಹಿಳಾ ಪ್ರಯಾಣಿಕರಲ್ಲಿ ಆತಂಕ ಸೃಷ್ಟಿಸಿದ್ದಾನೆ. ಇದಕ್ಕೆ ಸಂಬಂಧಪಟ್ಟ ವಿಡಿಯೊವನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಲಾಗಿದ್ದು, ಇದು ಸಿಕ್ಕಾಪಟ್ಟೆ ವೈರಲ್(Viral Video) ಆಗಿದೆ.
32 ಸೆಕೆಂಡುಗಳ ಈ ವಿಡಿಯೊವನ್ನು ಪ್ರಯಾಣಿಕ ಲತಾ ಅರ್ಗಡೆ ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಇದು ಅನೇಕ ಜನರ ಗಮನ ಸೆಳೆದು ವೈರಲ್ ಆಗಿದೆ. ಇದು ಮಹಿಳಾ ಪ್ರಯಾಣಿಕರ ಸುರಕ್ಷತೆಯ ಬಗ್ಗೆ ಗಂಭೀರ ಕಳವಳವನ್ನು ಹುಟ್ಟುಹಾಕಿದೆ. ಸಿಎಸ್ಎಂಟಿ – ಕಲ್ಯಾಣ್ ಎಸಿ ಲೋಕಲ್ ರೈಲಿನಲ್ಲಿ ಸಂಜೆ 4:11 ಕ್ಕೆ ಈ ಘಟನೆ ಸಂಭವಿಸಿದೆ ಎಂದು ಹೇಳಲಾಗಿದೆ. ರೈಲು ಘಾಟ್ಕೋಪರ್ ನಿಲ್ದಾಣವನ್ನು ತಲುಪುತ್ತಿದ್ದಂತೆ ಆ ವ್ಯಕ್ತಿ ಮಹಿಳಾ ಬೋಗಿಯ ಬಾಗಿಲ ಬಳಿ ನಿಂತಿದ್ದಾನೆ. ಮಹಿಳಾ ಪ್ರಯಾಣಿಕರು ಭಯಭೀತರಾಗಿ ಸಹಾಯಕ್ಕಾಗಿ ಕೂಗಿದ್ದು, ಅವರ ಕೂಗನ್ನು ಪಕ್ಕದ ಬೋಗಿಯಲ್ಲಿದ್ದ ಟಿಸಿ ಗಮನಿಸಿ ತಕ್ಷಣ ಬಂದು ಮಹಿಳಾ ಕಂಪಾರ್ಟ್ಮೆಂಟ್ನಿಂದ ಆ ವ್ಯಕ್ತಿಯನ್ನು ಹೊರಗೆ ತಳ್ಳಿದ್ದಾರೆ.
Mumbai: Nude man spotted inside women's compartment in of CSMT-Kalyan Local train (VIDEO)#Mumbai #Naked #Nude #CSMT #Kalyan #Local #Train pic.twitter.com/Zr2iEBQDMS
— Donjuan (@santryal) December 17, 2024
ಈ ಘಟನೆಯ ಬಗ್ಗೆ ಮಹಿಳಾ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ರೈಲ್ವೆ ಪ್ರೊಟೆಕ್ಷನ್ ಫೋರ್ಸ್ (ಆರ್ಪಿಎಫ್) ಸಿಬ್ಬಂದಿಯನ್ನು ಪ್ಲ್ಯಾಟ್ಫಾರ್ಮ್ಗಳಲ್ಲಿ ಮತ್ತು ಮಹಿಳಾ ಬೋಗಿಗಳ ಒಳಗೆ ನಿಯೋಜಿಸುವಂತೆ ಹಲವರು ಒತ್ತಾಯಿಸಿದ್ದಾರೆ.
ಘಟನೆಯ ಬಗ್ಗೆ ಮಾತನಾಡಿದ ಪ್ರಯಾಣಿಕರೊಬ್ಬರು “ಟಿಸಿ ತಕ್ಷಣ ಬಂದು ಸಮಸ್ಯೆಯಾಗುವ ಮೊದಲು ವ್ಯಕ್ತಿಯನ್ನು ಕಂಪಾರ್ಟ್ಮೆಂಟ್ನಿಂದ ಹೊರಗೆ ಹಾಕಿದ್ದಾರೆ ಎಂದು ತಿಳಿಸಿದ್ದಾರೆ. “ಪ್ರಯಾಣಿಸುವಾಗ ನಾವು ಅಸುರಕ್ಷಿತ ಭಾವನೆ ಅನುಭವಿಸುತ್ತಿರುವುದು ಇದೇ ಮೊದಲಲ್ಲ. ಮಹಿಳಾ ಬೋಗಿಗಳಲ್ಲಿ ಆರ್ಪಿಎಫ್ ಕಾನ್ಸ್ಟೇಬಲ್ ನಿಯೋಜಿಸುವುದು ಅಗತ್ಯವಾಗಿದೆ” ಎಂದು ಮತ್ತೊಬ್ಬ ಪ್ರಯಾಣಿಕರು ಹೇಳಿದ್ದಾರೆ.
ಈ ಸುದ್ದಿಯನ್ನೂ ಓದಿ:ಸಖತ್ ವೈರಲ್ ಆಯ್ತು ರೂಂಮೇಟ್ ಅನ್ನು ಆಕರ್ಷಿಸಲು ಈ ಮಹಿಳೆ ಮಾಡಿದ ಪೋಸ್ಟ್; ಅಂಥದ್ದೇನಿದೆ ಅದರಲ್ಲಿ?
ಕುರ್ಲಾದ ಸರ್ಕಾರಿ ರೈಲ್ವೆ ಪೊಲೀಸರು (ಜಿಆರ್ಪಿ) ಅಪರಿಚಿತ ವ್ಯಕ್ತಿಯ ವಿರುದ್ಧ ಬಿಎನ್ಎಸ್ನ ಸೆಕ್ಷನ್ 296 ಮತ್ತು ರೈಲ್ವೆ ಕಾಯ್ದೆಯ ಸೆಕ್ಷನ್ 162 ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಹೆಚ್ಚಿನ ತನಿಖೆ ನಡೆಯುತ್ತಿದೆ. ಇದಲ್ಲದೆ, ಪ್ರಕರಣದಲ್ಲಿ ಭಾಗಿಯಾಗಿರುವ ವ್ಯಕ್ತಿಯ ಹುಡುಕಾಟವನ್ನು ತ್ವರಿತಗೊಳಿಸಲು ಇತರ ನಿಲ್ದಾಣಗಳಿಂದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲು ಆರ್ಪಿಎಫ್ ಮತ್ತು ಜಿಆರ್ಪಿಯ ಜಂಟಿ ತಂಡವನ್ನು ಸಹ ರಚಿಸಿದೆ.