ನವದೆಹಲಿ: ಸಾರ್ವಜನಿಕ ಪ್ರದೇಶದಲ್ಲಿ ಮೂತ್ರ ವಿಸರ್ಜನೆ ಮಾಡಬೇಡಿ (Don’t Urinate In Public) ಎಂದು ಹೇಳಿದ್ದ ವ್ಯಕ್ತಿಗೆ ದಿಚಕ್ರ ವಾಹನದಲ್ಲಿ ಬಂದ ವ್ಯಕ್ತಿಯಿಯೊಬ್ಬ ಕೋಲಿನಿಂದ ಹೊಡೆದು ಥಳಿಸಿರುವ ಘಟನೆ ಉತ್ತರ ದೆಹಲಿಯ ಮಾಡೆಲ್ ಟೌನ್‌ನಲ್ಲಿ ಶುಕ್ರವಾರ ಈ ಘಟನೆ ನಡೆದಿದ್ದು, ಇದರ ಸಿಸಿಟಿವಿ ( CCTV) ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ (Viral Video) ಆಗಿದೆ.
ದ್ವಿಚಕ್ರ ವಾಹನದಲ್ಲಿ ಬಂದ ಮೂವರು ವ್ಯಕ್ತಿಗಳಲ್ಲಿ ಒಬ್ಬ ಬೈಕ್ ನಿಂದ ಇಳಿದು ಬೀದಿ ಬದಿಯಲ್ಲಿ ಮಲಗಿದ್ದ ವ್ಯಕ್ತಿಗೆ ಕೋಲಿನಿಂದ ತೀವ್ರವಾಗಿ ಹಲ್ಲೆ ನಡೆಸಿದ್ದಾನೆ. ಇದರ ಸಂಪೂರ್ಣ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ವಿಡಿಯೋದಲ್ಲಿ ಆರೋಪಿಗಳು ದ್ವಿಚಕ್ರ ವಾಹನದಿಂದ ಇಳಿದು ಫುಟ್‌ಪಾತ್‌ನಲ್ಲಿ ಮಲಗಿದ್ದ ವ್ಯಕ್ತಿಯ ಬಳಿ ಹೋಗುತ್ತಿರುವುದನ್ನು ಕಾಣಬಹುದು. ಬಳಿಕ ಒಬ್ಬ ಮಲಗಿದ್ದ ವ್ಯಕ್ತಿಯನ್ನು ಎಬ್ಬಿಸಿದನು. ಅವನ ಇಬ್ಬರು ಸ್ನೇಹಿತರು ಬೈಕ್‌ನಲ್ಲಿ ಕಾಯುತ್ತಿದ್ದಂತೆ ಕೋಲಿನಿಂದ ಹೊಡೆಯಲು ಪ್ರಾರಂಭಿಸುತ್ತಾನೆ.
ಸುಮಾರು 20 ಸೆಕೆಂಡುಗಳ ಕಾಲ ಅವನ ಮೇಲೆ ಹಲ್ಲೆ ಮಾಡಿದ ಅನಂತರ ಅವನು ಹಿಂದಿರುಗಿ ತನ್ನ ಸ್ನೇಹಿತರೊಂದಿಗೆ ಪರಾರಿಯಾಗಿದ್ದಾನೆ. ಹತ್ತಿರದಲ್ಲೇ ಉದ್ಯಾನವನವಿದ್ದು, ಅಲ್ಲಿ ಸಾಕಷ್ಟು ಮಂದಿ ವಾಕಿಂಗ್ ಮಾಡುತ್ತಿದ್ದರು. ಆದರೆ ಯಾರೂ ಇತ್ತ ಗಮನ ಹರಿಸಲಿಲ್ಲ. ಆರೋಪಿಗಳು ತಪ್ಪಿಸಿಕೊಳ್ಳುವಷ್ಟರಲ್ಲಿ ಕಾರೊಂದು ಬಂದಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ.
India has an anger epidemic.
— Bharati Chaturvedi (@Bharati09) October 6, 2024
On Camera, Sleeping Delhi Man Beaten For "Don't Urinate In Public" Request https://t.co/hrq0iM8LrV
ವೈರಲ್ ಆಗಿರುವ ದೃಶ್ಯವನ್ನು ಆಧರಿಸಿ ಸಿಸಿಟಿವಿ ಪರಿಶೀಲಿಸಿರುವ ಪೊಲೀಸರು ಅನಂತರ ತನಿಖೆಯನ್ನು ಪ್ರಾರಂಭಿಸಿದರು. ಮಲಗಿದ್ದ ವ್ಯಕ್ತಿ ಮೇಲೆ ಹಲ್ಲೆ ನಡೆಸಿದವನನ್ನು ಅದೇ ಪ್ರದೇಶದ ಆರ್ಯನ್ ಎಂದು ಗುರುತಿಸಲಾಗಿದೆ. ಆತ ಹತ್ತಿರದ ಮನೆಯೊಂದರಲ್ಲಿ ಕೆಲಸ ಮಾಡುತ್ತಿದ್ದಾನೆ ಎನ್ನಲಾಗಿದೆ.
ಉದ್ಯಾನದ ಬಳಿಯ ಬಯಲಿನಲ್ಲಿ ಮೂತ್ರ ವಿಸರ್ಜನೆ ಮಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಹತ್ತಿರದ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ರಾಮ್‌ಫಾಲ್ ಎಂಬವರು ತಡೆಯಲು ಪ್ರಯತ್ನಿಸಿದರು. ಆಗ ಇಬ್ಬರ ನಡುವೆ ಜಗಳವಾಗಿತ್ತು.
Viral Video: ರಾಮಲೀಲಾ ವೇದಿಕೆಯಲ್ಲೇ ಹೃದಯಾಘಾತ; ಶ್ರೀರಾಮನ ಪಾತ್ರ ಮಾಡುತ್ತಿದ್ದ ವ್ಯಕ್ತಿ ದಾರುಣ ಸಾವು
ಇದಾಗಿ ಒಂದು ದಿನದ ಬಳಿಕ ಆರ್ಯನ್ ತನ್ನ ಸ್ನೇಹಿತರೊಂದಿಗೆ ಹಿಂತಿರುಗಿ ಬಂದು ರಾಮ್ ಪಾಲ್ ಮೇಲೆ ದಾಳಿ ಮಾಡಿದ್ದನು. ಈ ಕುರಿತು ಪ್ರಕರಣ ದಾಖಲಾಗಿದ್ದು, ಆರ್ಯನ್ ನನ್ನು ಬಂಧಿಸಿ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ.