ಪುಣೆ: ಕೆಲವೊಮ್ಮೆ ರೆಸ್ಟೋರೆಂಟ್‍ಗೆ ಊಟಕ್ಕೆ ಹೋದಾಗ ಕೆಚಪ್ ಪ್ಯಾಕೆಟ್‍ಗಳನ್ನು ನೀಡುತ್ತಾರೆ. ಕೆಲವರು ಅದನ್ನು ಬಳಸದಿದ್ದರೆ ಅಲ್ಲೆ ಬಿಟ್ಟು ಬರುತ್ತಾರೆ.ಆದರೆ ಸಾರ್ಥಕ್ ಸಚ್‌ದೇವ್ ಎಂಬ ವ್ಯಕ್ತಿ ಇತ್ತೀಚೆಗೆ ಪುಣೆಯ ಮಾಲ್‍ನಲ್ಲಿರುವ ಫುಡ್ ಸ್ಟಾಲ್‍ಗೆ ಹೋಗಿ ಉಚಿತವಾಗಿ ನೀಡುವ ಕೆಚಪ್ ಪ್ಯಾಕೆಟ್‍ಗಳನ್ನು ಸಂಗ್ರಹಿಸಿದ್ದಾರೆ. ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದ್ದು, ಅನೇಕ ಜನರ ಗಮನ ಸೆಳೆದಿದೆ.
ಸಾರ್ಥಕ್ ಸಚ್‌ದೇವ್ ಇನ್ಸ್ಟಾಗ್ರಾಂನಲ್ಲಿ ತಮ್ಮ ವೆರಿಫೈಡ್ ಹ್ಯಾಂಡಲ್‍ನಲ್ಲಿ ಈ ವಿಡಿಯೊವನ್ನು ಪೋಸ್ಟ್ ಮಾಡಿದ್ದು, ಇದು ವೈರಲ್ ಆಗಿದೆ. ಈ ವೈರಲ್ ವಿಡಿಯೊದಲ್ಲಿ, ಸಾರ್ಥಕ್ ತಮ್ಮ ಪ್ಲ್ಯಾನ್ ಬಗ್ಗೆ ವಿವರಣೆ ನೀಡಿದ್ದಾರೆ. ಅದರ ಪ್ರಕಾರ ಅವರು ಒಂದು ದೊಡ್ಡ ಗಾಜಿನ ಜಾರ್‌ನಲ್ಲಿ ಉಚಿತ ಟೊಮೆಟೊ ಸಾಸ್ ಅನ್ನು ತುಂಬಲು ನಿರ್ಧರಿಸಿದ್ದಾರಂತೆ. ಅದಕ್ಕಾಗಿ ಅವರು ಮೆಕ್ ಡೊನಾಲ್ಡ್ ಸ್ಟಾಲ್‍ಗೆ ಹೋಗಿ ಅಲ್ಲಿಂದ ಅವರು ಕೆಲವು ಪ್ಯಾಕೆಟ್‍ಗಳನ್ನು ನೀಡುವಂತೆ ಕೇಳಿದ್ದಾರಂತೆ. ನಂತರ ಅದನ್ನು ತೆಗೆದುಕೊಂಡು ಬಂದು ಅದರಲ್ಲಿರುವ ಸಾಸ್ ಅನ್ನು ಗಾಜಿನ ಬಾಟಲಿನಲ್ಲಿ ತುಂಬಿಸಿದ್ದಾರೆ. ನಂತರ ಕೆಎಫ್‌ಸಿಗೆ ಹೋಗಿ ಅಲ್ಲಿಂದ ಕೆಲವು ಪ್ಯಾಕೆಟ್ ಸಾಸ್ ತಂದು ಅದನ್ನು ಗಾಜಿನ ಬಾಟಲಿನಲ್ಲಿ ಸುರಿದಿದ್ದಾರಂತೆ. ಆದರೆ ಇದರಿಂದ ಬಾಟಲಿ ಅರ್ಧದಷ್ಟು ಸಹ ತುಂಬಲಿಲ್ಲವಂತೆ. ನಂತರ ಸಾರ್ಥಕ್ ಪಿಜ್ಜಾ ಹಟ್‍ಗೆ ಹೋಗಿ ಅಲ್ಲಿ ಅವರು ಪ್ಯಾಕೆಟ್‍ಗಳ ಬದಲು ಸಾಸ್ ಬಾಟಲಿಗಳನ್ನು ತಂದು ಅದನ್ನು ಬಾಟಲಿನಲ್ಲಿ ಸುರಿದಿದ್ದಾರೆ. ಹೀಗೆ ಮಾಡುತ್ತಾ ಅವರು ತನ್ನ ಪ್ಲ್ಯಾನ್ ಅನ್ನು ಪೂರ್ಣಗೊಳಿಸಿದ್ದಾರೆ. ಅವರ 2.5 ಲೀಟರ್ ಬಾಟಲಿ ಸಂಪೂರ್ಣವಾಗಿ ತುಂಬಿದೆ.
ಇದನ್ನೂ ಓದಿ: ಕ್ಯಾನ್ಸರ್ ರೋಗಿ ತಾಯಿಗೆ ತಪ್ಪು ಔಷಧ; ಡಾಕ್ಟರ್‌ಗೆ ಇರಿದ ಮಗ!
ಈ ವಿಡಿಯೊಗೆ “ಆಹಾ ತಮಾಟರ್ ಬಡೇ ಮಜೇದಾರ್” ಎಂಬ ಶೀರ್ಷಿಕೆ ನೀಡಿ ಅದನ್ನು ಅಪ್ಲೋಡ್ ಮಾಡಿದ್ದಾರೆ. ಉಚಿತ ಕೆಚಪ್ ಪ್ಯಾಕೆಟ್‍ಗಳನ್ನು ಕೇಳಲು ಅವರು ಫುಡ್ ಸ್ಟಾಲ್‍ಗಳಿಗೆ ಭೇಟಿ ನೀಡುವುದನ್ನು ತೋರಿಸುವ ಈ ವಿಡಿಯೊ ವೈರಲ್ ಆಗಿ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಸಂಚಲನ ಮೂಡಿಸಿದೆ. ಈ ವಿಡಿಯೊ 10 ದಶಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿದೆ ಮತ್ತು ಸೋಶಿಯಲ್ ಮೀಡಿಯಾ ಬಳಕೆದಾರರಿಂದ ಟನ್ ಗಟ್ಟಲೆ ಪ್ರತಿಕ್ರಿಯೆಗಳನ್ನು ಪಡೆದಿದೆ. ಕೆಲವು ಜನರು ಇದಕ್ಕೆ ಕೆಟ್ಟದಾಗಿ ಕಾಮೆಂಟ್ ಮಾಡಿದ್ದಾರೆ. ರೀಲ್ ಕ್ರೇಜ್‍ಗಾಗಿ ಈ ರೀತಿ ಚೀಪ್ ಆದ ನಡವಳಿಕೆಯಲ್ಲಿ ತೊಡಗಿದ್ದಕ್ಕಾಗಿ ಬಹಳಷ್ಟು ಜನರು ಅವರನ್ನು ಟ್ರೋಲ್ ಮಾಡಿದ್ದಾರೆ. ಈ ಕೃತ್ಯವನ್ನು “ಭಿಕ್ಷಾಟನೆ” ಎಂದು ಕೆಲವರು ಕರೆದಿದ್ದಾರೆ. ಕೆಲವರು ಅವರನ್ನು ನಿರುದ್ಯೋಗಿ ಎಂದು ಜಡಿದಿದ್ದಾರೆ.