ಕೆಲವು ಬಗೆಯ ಹಾವುಗಳು ಅತ್ಯಂತ ವಿಷಕಾರಿ. ಅವು ಕಚ್ಚಿದಾಗ ಸರಿಯಾದ ಚಿಕಿತ್ಸೆ ಪಡೆಯದಿದ್ದರೆ ಸಾವು ಸಂಭವಿಸುವುದು ಖಚಿತ. ಹಾಗಾಗಿ ಜನರು ಹಾವು ಕಚ್ಚಿದ ತಕ್ಷಣ ಎಲ್ಲಾ ಕೆಲಸವನ್ನು ಬಿಟ್ಟು ಮೊದಲು ಆಸ್ಪತ್ರೆಗೆ ಓಡುತ್ತಾರೆ. ಆದರೆ ಇಲ್ಲೊಬ್ಬ ವ್ಯಕ್ತಿ ವಿಶ್ವದ ಅತ್ಯಂತ ವಿಷಕಾರಿ ಹಾವುಗಳಲ್ಲಿ ಒಂದಾದ ರಸೆಲ್ ವೈಪರ್ (Russell’s Viper)ನಿಂದ ಕಚ್ಚಿಸಿಕೊಂಡಿದ್ದರೂ ಕೂಡ ಹೆದರದೆ ಹಾವನ್ನು ಕುತ್ತಿಗೆಗೆ ಸುತ್ತಿಕೊಂಡು ಅದರ ಬಾಯಿಯನ್ನು ಕೈಯಲ್ಲಿ ಒತ್ತಿ ಹಿಡಿಕೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಘಟನೆ ಬಿಹಾರದ ಭಾಗಲ್ಪುರದಲ್ಲಿ ನಡೆದಿದೆ. ಆತನ ವಿಡಿಯೊ ಸೋಶಿಯಲ್ ಮಿಡಿಯಾದಲ್ಲಿ ವೈರಲ್ (Viral Video)ಆಗಿದ್ದು, ಅನೇಕರು ಅವನ ಕಾರ್ಯವನ್ನು ಕಂಡು ಆಶ್ಚರ್ಯಗೊಂಡಿದ್ದಾರೆ.
ಸಾಮಾನ್ಯವಾಗಿ ಹಾವು ಕಚ್ಚಿದರೆ ಹೆದರಿ ಕಂಗಾಲಾಗುತ್ತಾರೆ. ಯಾವ ಹಾವು ಕಚ್ಚಿದ್ದು ಎಂದು ನೋಡಲು ಕೂಡ ಹೋಗುವುದಿಲ್ಲ. ಆದರೆ ಪ್ರಕಾಶ್ ಮಂಡಲ್ ಎಂಬ ವ್ಯಕ್ತಿ ತನಗೆ ಕಚ್ಚಿದ ಹಾವನ್ನು ಕೈಯಲ್ಲಿ ಹಿಡಿದುಕೊಂಡೇ ಆಸ್ಪತ್ರೆಗೆ ಹೋಗಿದ್ದಾನೆ. ಹಾವನ್ನು ಕುತ್ತಿಗೆಗೆ ಸುತ್ತಿಕೊಂಡು ಆಸ್ಪತ್ರೆಯ ಎಮರ್ಜೆನ್ಸಿ ವಾರ್ಡ್‍ನಲ್ಲಿ ತುರ್ತು ಚಿಕಿತ್ಸೆ ಪಡೆಯಲು ಬಂದಿರುವುದನ್ನು ನೋಡಿ ವೈದ್ಯರು ಮತ್ತು ಇತರೆ ರೋಗಿಗಳು ದಿಗ್ಭ್ರಮೆಗೊಂಡಿದ್ದಾರಂತೆ.
The incident is from Bihar's Bhagalpur district, where a snake bit a laborer, and the laborer brought the snake along with him to the hospital. The video went viral.
— बाबा जी बिहार वाले 🗿🕉️🧘💛 (@BiharWaleBaba0) October 16, 2024
Bihar is not for beginners 😭😭😭😭 pic.twitter.com/UC7ChONiZP
ಆಸ್ಪತ್ರೆಯ ಆವರಣದಲ್ಲಿ ನಡೆದ ಈ ವಿಲಕ್ಷಣ ದೃಶ್ಯವನ್ನು ಜನರು ತಮ್ಮ ಫೋನ್‍ನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದಾರೆ. ಹಾವನ್ನು ಹಿಡಿದಿದ್ದ ಆ ವ್ಯಕ್ತಿಯನ್ನು ನೋಡಿ ಕೆಲವರು ದೂರ ಹೋಗಿದ್ದಾರೆ.ಯಾಕೆಂದರೆ ಹಾವು ಅತನ ಕೈಯಿಂದ ತಪ್ಪಿಸಿಕೊಂಡು ಬಂದು ತಮಗೆಲ್ಲಿ ಕಚ್ಚಿ ಬಿಡುತ್ತದೆಯೋ ಎಂಬ ಭಯ ಅವರನ್ನು ಕಂಗೆಡಿಸಿತ್ತು.
ಇದನ್ನೂ ಓದಿ: ಕುಡಿದ ಮತ್ತಿನಲ್ಲಿದ್ದ ವ್ಯಕ್ತಿಯ ಮೈ ಏರಿದ ಹೆಬ್ಬಾವು! ವಿಡಿಯೊ ನೋಡಿ
ಇಷ್ಟೆಲ್ಲಾ ಆದರೂ ಆ ವ್ಯಕ್ತಿ ಮಾತ್ರ ತನ್ನ ಕೈಯಿಂದ ಹಾವನ್ನು ಬಿಡಲಿಲ್ಲ. ಹಾವಿನೊಂದಿಗೆ ಸ್ಟ್ರೆಚರ್ ಮೇಲೆ ಮಲಗಿ ಪದೇ ಪದೇ ಹಾವನ್ನು ನೋಡುತ್ತಿರುವ ದೃಶ್ಯ ಸೆರೆಯಾಗಿದೆ. ಆದರೆ ಹಾವನ್ನು ಈ ರೀತಿ ಹಿಡಿದಿಟ್ಟುಕೊಂಡರೆ ಚಿಕಿತ್ಸೆ ನೀಡುವುದು ಕಷ್ಟ ಎಂದು ವೈದ್ಯರು ಹೇಳಿದ ಬಳಿಕ ಅವನು ಹಾವನ್ನು ಬಿಟ್ಟಿದ್ದಾನೆ.