Wednesday, 11th December 2024

Viral Video: ಕಿರಿಯ ವಯಸ್ಸಿನ ಯುವತಿಯೊಂದಿಗೆ ಮುದುಕನ ಮದುವೆ! ಕಾರಣ ಇನ್‌ಕಮ್‌ ಮತ್ತು ದಿನ್‌ಕಮ್‌ ಅಂತೆ!

Viral Video

ಹಣ್ಣು ಹಣ್ಣು ಮುದುಕನೊಬ್ಬ ಅತ್ಯಂತ ಸುಂದರವಾದ ಕಿರಿಯ ವಯಸ್ಸಿನ ಯುವತಿಯನ್ನು ಮದುವೆಯಾಗಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ (Viral Video) ಆಗಿದೆ. ಇದು ಸಾಮಾಜಿಕ ಜಾಲತಾಣದಲ್ಲಿ (social media) ಸಾಕಷ್ಟು ಮಂದಿ ಗಮನ ಸೆಳೆದಿದೆ. ಈ ಘಟನೆ ಎಲ್ಲಿ ನಡೆದಿದೆ ಎನ್ನುವುದು ಸ್ಪಷ್ಟವಾಗಿಲ್ಲ. ಕಿರಿಯ ವಯಸ್ಸಿನ ಯುವತಿ ಮುದುಕನನ್ನು ಮದುವೆಯಾಗಿರುವುದಕ್ಕೆ ಹಲವಾರು ಮಂದಿ ಕಾಮೆಂಟ್ ಕೂಡ ಮಾಡಿದ್ದಾರೆ.

ತನಗಿಂತ ಅತ್ಯಂತ ಕಿರಿಯ ವಯಸ್ಸಿನ ಯುವತಿಯನ್ನು ಮದುವೆಯಾಗಿ ಸಂಭ್ರಮ ಪಡುತ್ತಿರುವ ಅಜ್ಜನನ್ನು ನೋಡಿ ಹಲವು ನೆಟ್ಟಿಗರು ನಾನಾ ರೀತಿಯಲ್ಲಿ ತಮಾಷೆ ಮಾಡಿ ಕಾಮೆಂಟ್ ಕೂಡ ಮಾಡಿದ್ದಾರೆ. ಪ್ರಸ್ತುತ ಇದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಮೂರು ಲಕ್ಷಕ್ಕೂ ಹೆಚ್ಚು ಮಂದಿ ಇದನ್ನು ವೀಕ್ಷಿಸಿದ್ದಾರೆ.

ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ಈ ವಿಡಿಯೋದಲ್ಲಿ ವಧುವಿನ ಪಕ್ಕ ಕುಳಿತಿರುವ ವರ ಅತ್ಯಂತ ಸಂತೋಷದಿಂದ ಇರುವುದು ಸಾಮಾಜಿಕ ಜಾಲತಾಣದಲ್ಲಿ ವಿವಿಧ ರೀತಿಯಲ್ಲಿ ತಮಾಷೆಯ ಕಾಮೆಂಟ್ ಗಳಿಗೆ ಕಾರಣವಾಗಿದೆ. ಈವರೆಗೆ 3.87 ಲಕ್ಷಕ್ಕೂ ಹೆಚ್ಚು ಮಂದಿ ಇದನ್ನು ವೀಕ್ಷಿಸಿದ್ದಾರೆ. ಕಾಮೆಂಟ್‌ನಲ್ಲಿ ಒಬ್ಬರು ಹೀಗೆ ತಮಾಷೆ ಮಾಡಿದ್ದಾರೆ: 18 ವರ್ಷದ ಹುಡುಗಿಯೊಬ್ಬಳು 75 ವರ್ಷದ ವ್ಯಕ್ತಿಯನ್ನು ಮದುವೆಯಾದಳು. ಜನರು ಆಕೆಯ ಬಳಿ ಬಂದು ಏನು ನೋಡಿ ಮದುವೆಯಾದೆ ಎಂದು ಕೇಳಿದಾಗ ಆಕೆ ನಗುತ್ತಾ ಹೇಳಿದಳು: ಇನ್‌ಕಮ್‌ ಮತ್ತು ದಿನ್‌ಕಮ್‌! ಅಂದರೆ ಮೊದಲು ಅವನ ಆದಾಯ ಮತ್ತು ಎರಡನೆಯದು ಅವನು ಹೆಚ್ಚು ದಿನ ಬದುಕುವುದಿಲ್ಲ ಎಂಬ ಕಾರಣ!

Viral Video: ರೀಲ್ಸ್ ಶೋಕಿ; ಕಣಿವೆಯಲ್ಲಿ ಜಾರಿ ಬಿದ್ದ ಯುವತಿ!

ಒಬ್ಬ ಬಳಕೆದಾರ, ಪಾಪ ಬಡ ಹುಡುಗಿ ಎಂದು ಹೇಳಿದ್ದರೆ, ಇನ್ನೊಬ್ಬ ಅವರು ಇದನ್ನು ವೈರಲ್ ಖ್ಯಾತಿಗಾಗಿ ತೋರಿಸುತ್ತಿದ್ದಾರೆ; ನಿಜವಾದ ವರ ಬೇರೆಯವನಾಗಿರಬೇಕು ಎಂದು ಹೇಳಿದ್ದಾರೆ. ಅನೇಕ ಬಳಕೆದಾರರು ನಗುವ ಎಮೋಜಿಗಳನ್ನು ಹಂಚಿಕೊಂಡಿದ್ದಾರೆ.