Sunday, 24th November 2024

Viral Video: ಮುಖಕ್ಕೆ ಮೆಹೆಂದಿ ಮೇಕಪ್ ಟ್ರೆಂಡ್; ಇದು ಅಪಾಯಕಾರಿಯೆ?

Viral Video

ಕೈಗಳಿಗೆ ಮೆಹೆಂದಿ (Mehendi) ಹಾಕಿಕೊಳ್ಳುವುದನ್ನು ನೋಡಿದ್ದೇವೆ. ಆದರೆ ಇದೀಗ ಮುಖದ ಮೇಲೆ ಮೆಹೆಂದಿ ಹಾಕಿಕೊಳ್ಳುವ ಟ್ರೆಂಡ್ ( henna makeup trend) ಶುರುವಾಗಿದೆ. ಇದರ ವಿಡಿಯೋವೊಂದು (Viral Video) ಸಾಮಾಜಿಕ ಜಾಲತಾಣದಲ್ಲಿ (Social Media) ವೈರಲ್ ಆಗಿದ್ದು, ಇದು ಆರೋಗ್ಯಕರವೇ ಎನ್ನುವ ಚರ್ಚೆಯನ್ನು ಹುಟ್ಟು ಹಾಕಿದೆ.

ಇನ್‌ಸ್ಟಾಗ್ರಾಮ್‌ನಲ್ಲಿ ಯುವತಿಯೊಬ್ಬಳು ಮುಖಕ್ಕೆ ಮೆಹೆಂದಿ ಹಚ್ಚಿಕೊಳ್ಳುತ್ತಿರುವ ವಿಡಿಯೋವನ್ನು ಪೋಸ್ಟ್ ಮಾಡಿದ್ದು, ಇದು ವೈರಲ್ ಆಗಿದೆ. ಸಾಂಪ್ರದಾಯಿಕವಾಗಿ ಕೈಗಳ ಸೌಂದರ್ಯ ಹೆಚ್ಚಿಸಲು ಮೆಹೆಂದಿ ಹಾಕುತ್ತೇವೆ. ಆದರೆ ಇಲ್ಲಿ ಯುವತಿಯೊಬ್ಬಳು ಮುಖ, ತುಟಿ, ಮೂಗು, ಕಣ್ಣಿನ ರೆಪ್ಪೆಗಳಿಗೆ ಯುವತಿ ಮೆಹೆಂದಿ ಹಚ್ಚಿಕೊಂಡಿದ್ದು, ಇದು ಆರೋಗ್ಯಕರವೇ ಎಂಬ ಚರ್ಚೆಯನ್ನು ಹುಟ್ಟು ಹಾಕಿದೆ.

ಗೋರಂಟಿ ಮೇಕ್ಅಪ್ ಹಾನಿಕಾರಕವಲ್ಲ ಎಂಬಂತೆ ಕಾಣುತ್ತದೆ. ಚರ್ಮದ ಮೇಲೆ ಸುಂದರವಾದ ತಾತ್ಕಾಲಿಕ ಚಿತ್ರಗಳನ್ನು ಬಿಡಿಸಲು ನೆರವಾಗುತ್ತದೆ. ಆದರೆ ಈ ಚಿತ್ರಗಳು ಚರ್ಮಕ್ಕೆ ಹಾನಿಯುಂಟು ಮಾಡುತ್ತದೆ. ಗೋರಂಟಿಯು ಪ್ಯಾರಾ- ಫೀನಿಲೆನೆಡಿಯಮೈನ್ ಎಂಬ ರಾಸಾಯನಿಕವಿದ್ದು, ಇದು ಸಾಮಾನ್ಯವಾಗಿ ‘ಕಪ್ಪು ಗೋರಂಟಿ’ಯಲ್ಲಿ ಕಂಡುಬರುತ್ತದ. ಇದು ಅಲರ್ಜಿಯನ್ನು ಉಂಟು ಮಾಡುತ್ತದೆ. ಕೆಂಪು ಗುಳ್ಳೆಗಳು, ಊತವನ್ನು ಉಂಟು ಮಾಡುತ್ತದೆ. ಕೆಲವು ಸಂದರ್ಭಗಳಲ್ಲಿ ಇದು ಗುರುತನ್ನು ದೀರ್ಘ ಕಾಲದವರೆಗೂ ಇರುವಂತೆ ಮಾಡುತ್ತದೆ ಎನ್ನುತ್ತಾರೆ ಆರೋಗ್ಯ ಪರಿಣತರು.

ನೈಸರ್ಗಿಕ ಗೋರಂಟಿ ಸಾಮಾನ್ಯವಾಗಿ ಸುರಕ್ಷಿತವಾಗಿದ್ದರೂ ಅದರ ಬಳಕೆಯಲ್ಲೂ ಕೆಲವೊಮ್ಮೆ ಅಲರ್ಜಿಯನ್ನು ಉಂಟು ಮಾಡುತ್ತದೆ. ವಿಶೇಷವಾಗಿ ಮುಖದ ಚರ್ಮ ಹೆಚ್ಚು ತೆಳು ಮತ್ತು ಸೂಕ್ಷ್ಮವಾಗಿರುತ್ತದೆ. ಗೋರಂಟಿಯಿಂದ ಚರ್ಮಕ್ಕೆ ಹಾನಿಯಾಗುವ ಅಪಾಯವಿದೆ ಎನ್ನುತ್ತಾರೆ ಚರ್ಮ ತಜ್ಞರು.

ಗೋರಂಟಿ ಮೇಕ್ಅಪ್ ಪ್ರವೃತ್ತಿಯು ಸಾಮಾಜಿಕ ಮಾಧ್ಯಮದಲ್ಲಿ ಜನಪ್ರಿಯತೆಯನ್ನು ಗಳಿಸಿದೆ. ಆದರೆ ಅನೇಕರಿಗೆ ಇದರ ಅಪಾಯಗಳ ಬಗ್ಗೆ ತಿಳಿದಿಲ್ಲ.

ಲಾಸೋನಿಯಾ ಸಸ್ಯದಿಂದ ಪಡೆದ ನೈಸರ್ಗಿಕ ಗೋರಂಟಿ ಲಾಸೋನ್ ಎನ್ನುವ ರಾಸಾಯನಿಕವನ್ನು ಹೊಂದಿರುತ್ತದೆ. ಇದು ರೋಗ ನಿರೋಧಕ ಗುಣಲಕ್ಷಣಗಳಿಗೆ ಹೆಸರುವಾಸಿಯಾಗಿದೆ. ಇದು ಚರ್ಮ ಮತ್ತು ಕೂದಲಿಗೆ ಕಿತ್ತಳೆ-ಕೆಂಪು ಬಣ್ಣವನ್ನು ನೀಡುತ್ತದೆ.

ಆದರೆ ಮಾರುಕಟ್ಟೆಯಲ್ಲಿ ಲಭ್ಯವಿರುವ ಹೆಚ್ಚಿನ ಗೋರಂಟಿಗಳು ಪ್ಯಾರಾಫೆನಿಲೆನೆಡಿಯಾಮೈನ್ ನಂತಹ ರಾಸಾಯನಿಕಗಳನ್ನು ಒಳಗೊಂಡಿರುತ್ತವೆ. ಇದು ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಚರ್ಮದ ತುರಿಕೆ, ಕೆಂಪು ಗುಳ್ಳೆಗಳನ್ನು ಉಂಟು ಮಾಡುವ ಸಾಧ್ಯತೆ ಇರುತ್ತದೆ.

Manu Bhaker: ಅನಗತ್ಯ ಟೀಟ್‌ ಮಾಡಿ ಟೀಕೆಗೆ ಗುರಿಯಾದ ಒಲಿಂಪಿಯನ್‌ ಮನು ಭಾಕರ್‌

ನೈಸರ್ಗಿಕ ಗೋರಂಟಿ ಚರ್ಮದ ಒಳಗೆ ಹೋಗುವ ಸಾಧ್ಯತೆ ಕಡಿಮೆ. ಹೀಗಾಗಿ ಇದು ಚರ್ಮದ ಮೇಲೆ ಅಪಾಯಕಾರಿ ಪ್ರತಿಕ್ರಿಯೆಗಳನ್ನು ಉಂಟುಮಾಡುವುದಿಲ್ಲ, ಇದು ಸುರಕ್ಷಿತವಾಗಿದೆ. ರಾಸಾಯನಿಕ ಮಿಶ್ರಿತ ಗೋರಂಟಿಗಿಂತ ಇದು ಸಂಪೂರ್ಣ ಭಿನ್ನವಾಗಿದೆ ಎಂದು ಆರೋಗ್ಯ ಪರಿಣತರು ಅಭಿಪ್ರಾಯಪಟ್ಟಿದ್ದಾರೆ.