ಚಿಕ್ಕ ಹಾವನ್ನು ನೋಡಿದರೂ ಜನರು ಹೆದರಿ ಹೋಗುತ್ತಾರೆ. ಹಾಗಾಗಿ ಅದನ್ನು ಕೈಯಲ್ಲಿ ಹಿಡಿದುಕೊಳ್ಳುವುದು ಊಹಿಸಲು ಸಾಧ್ಯವಾಗದು. ಅಂತದರಲ್ಲಿ ಇಲ್ಲೊಬ್ಬ ವ್ಯಕ್ತಿ ಬೃಹತ್ ಕಾಳಿಂಗ ಸರ್ಪದ ತಲೆಗೆ ಚುಂಬಿಸಿದ್ದಾರೆ. ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video)ಆಗಿದ್ದು, ಈ ಭಯಾನಕ ದೃಶ್ಯವನ್ನು ಕಂಡು ಅನೇಕರು ಬೆಚ್ಚಿಬಿದ್ದಿದ್ದಾರೆ. ಕೆಲವರು ಈ ಕೆಲಸವನ್ನು “ಹುಚ್ಚು” ಎಂದು ಹೇಳಿದ್ದಾರೆ.
ಮೈಕ್ ಹಾಲ್ಸ್‌ಟನ್ ಎಂಬುವವರು ದೊಡ್ಡ ಕಾಳಿಂಗ ಸರ್ಪವನ್ನು ಬರಿಗೈಯಲ್ಲಿ ಹಿಡಿದುಕೊಂಡು ಅದನ್ನು ನಿಯಂತ್ರಿಸುವ ಪ್ರಯತ್ನದಲ್ಲಿದ್ದಾಗ ಹಾವು ಇದ್ದಕ್ಕಿದ್ದಂತೆ ಅವರಿಗೆ ಕಚ್ಚಲು ಬಂದಿದೆ.ಹಾವಿನಿಂದ ತಪ್ಪಿಸಿಕೊಂಡ ಅವರು ಕೊನೆಗೆ ಹಾವಿನ ತಲೆಯ ಮೇಲೆ ಚುಂಬಿಸಿದ್ದಾರೆ. ಈ ದೃಶ್ಯ ವೀಕ್ಷಕರನ್ನು ದಂಗಾಗಿಸುವಂತೆ ಮಾಡಿದೆ. ಈ ವಿಡಿಯೊದಲ್ಲಿ ಮೈಕ್ ಹಾಲ್ಸ್‌ಟನ್ ಅವರ ಧೈರ್ಯ ಮತ್ತು ಭಯ ಎರಡೂ ಕಾಣಿಸುತ್ತಿದೆ.
ಈ ವಿಡಿಯೊವನ್ನು ಅನೇಕರು ಹುಚ್ಚು ಕೆಲಸ ಎಂದು ಟೀಕಿಸಿದ್ದಾರೆ. ಈ ವಿಡಿಯೊ 19 ದಶಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿದೆ. ಇದಕ್ಕೆ ಅನೇಕರು ಕಾಮೆಂಟ್ ಮಾಡಿದ್ದಾರೆ. ಇಂತಹ ಸಾಹಸದ ವೇಳೆ ಸುರಕ್ಷತೆಯ ಬಗ್ಗೆ ಎಚ್ಚರವಹಿಸುವಂತೆ ಕೆಲವರು ಸಲಹೆ ನೀಡಿದ್ದಾರೆ. ಒಬ್ಬ ಬಳಕೆದಾರರು “ಇದು ಹುಚ್ಚುತನ! ನನಗೆ ಈ ದೃಶ್ಯವನ್ನು ನೋಡಲು ಸಹ ಸಾಧ್ಯವಾಗಲಿಲ್ಲ” ಎಂದಿದ್ದಾರೆ.
ಇದನ್ನೂ ಓದಿ:ರೈಲಿನ ಟಾಯ್ಲೆಟ್ ವಿಡಿಯೊ ಮಾಡಿದ ಅಮೆರಿಕದ ಮಹಿಳೆಯ ಮೇಲೆ ನೆಟ್ಟಿಗರ ಕೋಪ; ಯಾಕೆ?
ಆದಾಗ್ಯೂ, ಇಂತಹ ವಿಡಿಯೊಗಳು ವೈರಲ್ ಆಗುತ್ತಿರುವುದು ಇದೇ ಮೊದಲಲ್ಲ. ಇದೇ ರೀತಿಯ ವಿಡಿಯೊ ಈ ಹಿಂದೆ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿವೆ. ನಿಕ್ ದಿ ರಾಂಗ್ಲರ್ ಎಂಬ ಇನ್ನೊಬ್ಬ ವನ್ಯಜೀವಿ ಪ್ರೇಮಿ 12 ಅಡಿ ಉದ್ದದ ಕಾಳಿಂಗ ಸರ್ಪದ ತಲೆಗೆ ಪ್ರೀತಿಯಿಂದ ಚುಂಬಿಸಿದ್ದರು. ಈ ವಿಡಿಯೊದಲ್ಲಿ, ನಿಕ್ ಬೃಹತ್ ಹಾವನ್ನು ಕೌಶಲ್ಯದಿಂದ ನಿಭಾಯಿಸಿ ಪೋಸ್ ನೀಡಿದ್ದರು.