ಭೋಪಾಲ್: ಗ್ರಾಮ ಪಂಚಾಯತ್ ಅಧ್ಯಕ್ಷ ವಿರುದ್ಧ ಭ್ರಷ್ಟಾಚಾರದ ಆರೋಪ ಹೊರಿಸಿ ಆತನ ವಿರುದ್ಧ ಕ್ರಮ ಜರುಗಿಸುವಂತೆ ಆಗ್ರಹಿಸಿ ಕಾಗದದ ಹಾಳೆಗಳ ಹಾರವನ್ನು ಮೈಗೆ ಸುತ್ತಿಕೊಂಡು ಜಿಲ್ಲಾಧಿಕಾರಿ ಕಚೇರಿ ಎದುರು ಉರುಳು ಸೇವೆ ಮಾಡಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಇನ್ನು ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಎಲ್ಲರ ಗಮನ ಸೆಳೆದಿದೆ(Viral Video).
ಮಧ್ಯಪ್ರದೇಶದ ನೀಮುಚ್ ಪ್ರದೇಶದಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಎದುರು ಈ ಘಟನೆ ನಡೆದಿದ್ದು, ಮುಖೇಶ್ ಪ್ರಕಾಪಥ್ ಎಂಬಾತ ಸರ್ಕಾರದ ಗಮನ ಸೆಳೆಯುವ ಪ್ರಯತ್ನ ಮಾಡಿದ್ದಾನೆ. ಕಳೆದ 6ರಿಂದ 7 ವರ್ಷಗಳಲ್ಲಿ ಸಮಸ್ಯೆಗಳನ್ನು ಹೇಳುತ್ತಿದ್ದರೂ ಸೂಕ್ತ ಪರಿಹಾರ ನೀಡದೇ ಗ್ರಾಮ ಪಂಚಾಯತ್ ಅಧ್ಯಕ್ಷ ವಿರುದ್ದ ಕ್ರಮ ಜರುಗಿಸುವಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಆತ ಆರೋಪಿಸಿದ್ದಾನೆ.
ತನ್ನ ಕಂಕಾರಿಯಾ ಎಂಬ ಗ್ರಾಮದಲ್ಲಿ ಪಂಚಾಯತ್ ಅಧ್ಯಕ್ಷ ಭ್ರಷ್ಟಾಚಾರ ಎಸಗುತ್ತಿದ್ದಾನೆ ಎಂದು ಆರೋಪಿಸಿ ಪ್ರಜಾಪಥ್ ದೂರಿದ್ಧಾನೆ. ಅಲ್ಲದೇ ಮೈಮೇಲೆ ಸುತ್ತಿಕೊಂಡಿರುವ ಕಾಗದಗಳು ಬರೀ ಕಾಗದಗಳಲ್ಲ. ಅವುಗಳು ಭ್ರಷ್ಟಾಚಾರದ ವಿರುದ್ಧ ನೀಡುತ್ತಿರುವ ದೂರು ಎಂದಿದ್ದಾನೆ.
ಪ್ರತಿಭಟನೆಯ ನಂತರ-ಇದು ಜುಲೈ ನಂತರ ರಾಜ್ಯದಲ್ಲಿ ನಡೆದ ಇಂತಹ ಎರಡನೇ ಘಟನೆಯಾಗಿದೆ-ನೀಮಚ್ ಜಿಲ್ಲಾಧಿಕಾರಿ ಹಿಮಾಂಶು ಚಂದ್ರ ಅವರು ವ್ಯಕ್ತಿಯ ದೂರಿನ ತನಿಖೆಯನ್ನು ರೀ ಓಪನ್ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಉಪವಿಭಾಗೀಯ ಮ್ಯಾಜಿಸ್ಟ್ರೇಟ್ (ಎಸ್‌ಡಿಎಂ) ಮಮತಾ ಖೇಡೆ, ಪ್ರಜಾಪತ್ ಅವರು ಈ ಹಿಂದೆ ಸರಪಂಚ್ ವಿರುದ್ಧ ದೂರು ಸಲ್ಲಿಸಿದ್ದರು ಮತ್ತು ಪಂಚಾಯತ್ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆ ಈಗಾಗಲೇ ಅವರ ಆರೋಪಗಳ ಬಗ್ಗೆ ವಿಚಾರಣೆ ನಡೆಸಿತ್ತು. ಜಿಲ್ಲಾಧಿಕಾರಿಗಳ ನಿರ್ದೇಶನದ ಮೇರೆಗೆ ಹೊಸ ತನಿಖೆ ನಡೆಸಲಾಗುವುದು ಎಂದು ಖೇಡೆ ತಿಳಿಸಿದ್ದಾರೆ.
ಮಧ್ಯಪ್ರದೇಶ ಕಾಂಗ್ರೆಸ್ ತನ್ನ ಅಧಿಕೃತ X ಹ್ಯಾಂಡಲ್‌ನಲ್ಲಿ ಕ್ಲಿಪ್ ಅನ್ನು ಹಂಚಿಕೊಂಡಿದೆ, ಮುಖ್ಯಮಂತ್ರಿ ಮೋಹನ್ ಯಾದವ್ ಅವರನ್ನು ಟೀಕಿಸಿದ್ದು, ಇದು ಸರ್ಕಾರದ ಅಸಹಾಯಕತೆಯನ್ನು ಎತ್ತಿ ತೋರಿಸುತ್ತದೆ. ಜನರು ತಮ್ಮ ಹಕ್ಕಿಗಾಗಿ, ನ್ಯಾಯಕ್ಕಾಗಿ ನೆಲದಲ್ಲಿ ಉರುಳುಸೇವೆ ಮಾಡುವಂತಹ ಸ್ಥಿತಿ ನಿರ್ಮಾಣಗೊಂಡಿದೆ. ಇದು ಮೋಹನ್ ಯಾದವ್ ಅವರ ಅಸಾಹಾಯಕತೆಗೆ ಕೈಗನ್ನಡಿ ಎಂದು ವಿಡಿಯೋ ಸಮೇತ ಪೋಸ್ಟ್‌ವೊಂದನ್ನು ಮಾಡದೆ.
ಪ್ರತಿ ಮಂಗಳವಾರ, ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಾರ್ವಜನಿಕ ವಿಚಾರಣೆಗಳನ್ನು ನಡೆಸಲಾಗುತ್ತದೆ, ಅಲ್ಲಿ ಹಿರಿಯ ಅಧಿಕಾರಿಗಳು ನಾಗರಿಕರು ಸಲ್ಲಿಸುವ ಕುಂದುಕೊರತೆಗಳು ಮತ್ತು ದೂರುಗಳನ್ನು ಪರಿಶೀಲಿಸುತ್ತಾರೆ. ಇದೇ ರೀತಿ ನಿನ್ನೆ ನಡೆದ ಕಾರ್ಯಕ್ರಮದಲ್ಲಿ ರೈತ ಉರುಳು ಸೇವೆ ಮಾಡಿ ಜಿಲ್ಲಾಧಿಕಾರಿಯ ಗಮನ ಸೆಳೆದಿದ್ದಾರೆ ಎನ್ನಲಾಗಿದೆ.
ಜುಲೈನಲ್ಲಿ, ಮಂಡಸೌರ್ ಜಿಲ್ಲೆಯ ವಯೋವೃದ್ಧ ರೈತರೊಬ್ಬರು ತಮ್ಮ ಭೂಹಗರಣದ ಕುಂದುಕೊರತೆಯನ್ನು ಆಡಳಿತವು ಪರಿಹರಿಸಲಿಲ್ಲ ಎಂದು ಆರೋಪಿಸಿ ಕಲೆಕ್ಟರ್ ಕಚೇರಿಯ ನೆಲದ ಮೇಲೆ ಉರುಳು ಸೇವೆ ಮಾಡಿ ಭಾರೀ ಸುದ್ದಿಯಾಗಿದ್ದ.
ವಿಡಿಯೋಗಾಗಿ ಇಲ್ಲಿ ಕ್ಲಿಕ್ ಮಾಡಿ: https://x.com/PTI_News/status/1830989453260922902