ಹಿಂದೂ ಯುವತಿಯೊಂದಿಗೆ ((Hindu Girl) ಬೈಕ್ನಲ್ಲಿ ಬರುತ್ತಿದ್ದ ಮುಸ್ಲಿಂ (Muslim Youth ) ಯುವಕನಿಗೆ ಯುವತಿಯ ಸಹೋದರರು ಸೇರಿ ಥಳಿಸಿರುವ ಘಟನೆ ಉತ್ತರ ಪ್ರದೇಶದ (Uttar Pradesh) ಹಾಪುರ್ ಜಿಲ್ಲೆಯ (Hapur district) ಮುಖ್ಯ ರಸ್ತೆಯಲ್ಲೇ ನಡೆದಿದೆ. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ (Viral Video) ಆಗಿದೆ. ಸಾಮಾಜಿಕ ಜಾಲತಾಣವಾದ ಎಕ್ಸ್ನಲ್ಲಿ ವೈರಲ್ ಆಗಿರುವ ಈ ವಿಡಿಯೋಗೆ ಹಲವಾರು ಮಂದಿ ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಹಾಡಹಗಲೇ ಜೋಡಿಯ ಮೇಲೆ ಈ ರೀತಿ ಅಮಾನುಷವಾಗಿ ಹಲ್ಲೆ ನಡೆಸಿರುವುದಕ್ಕೆ ಅನೇಕರು ಆಘಾತ ವ್ಯಕ್ತಪಡಿಸಿದ್ದಾರೆ.
ಸೆಪ್ಟೆಂಬರ್ 28ರಂದು ಈ ಘಟನೆ ನಡೆದಿದೆ ಎನ್ನಲಾಗಿದ್ದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಸಚಿನ್ ಗುಪ್ತ ಎಂಬವರು ಅಕ್ಟೋಬರ್ 9ರಂದು ಈ ಹಿಂಸಾತ್ಮಕ ಘಟನೆಯ ವಿಡಿಯೋ ಹಂಚಿಕೊಂಡಿದ್ದು, ಈಗಾಗಲೇ ಸಾವಿರಕ್ಕೂ ಹೆಚ್ಚು ಮಂದಿ ಇದನ್ನು ವೀಕ್ಷಿಸಿದ್ದಾರೆ.
ಅಕ್ರಂ ಎಂಬ ಯುವಕ ಹಿಂದೂ ಯುವತಿಯೊಂದಿಗೆ ಹೊಟೇಲ್ನಿಂದ ಬೈಕ್ನಲ್ಲಿ ಹಿಂದಿರುಗುತ್ತಿದ್ದಾಗ ಈ ಘಟನೆ ನಡೆದಿದೆ ಎನ್ನಲಾಗಿದೆ. ರಸ್ತೆ ಮಧ್ಯದಲ್ಲೇ ಅವರನ್ನು ನಿಲ್ಲಿಸಿದ ಯುವತಿಯ ಸಹೋದರರು ಸೇರಿದಂತೆ ಕೆಲವು ಯುವಕರು ಅಕ್ರಂ ಮೇಲೆ ತೀವ್ರವಾಗಿ ಹಲ್ಲೆ ನಡೆಸಿದ್ದಾರೆ. ಅಲ್ಲದೇ ಯುವತಿಯ ಮೇಲೂ ಕೈ ಮಾಡಿದ್ದಾರೆ. ರಸ್ತೆಯಲ್ಲಿ ಸಾಕಷ್ಟು ವಾಹನಗಳು ಸಾಗುತ್ತಿದ್ದು, ಹಗಲು ಹೊತ್ತಿನಲ್ಲಿ ನಡೆದಿರುವ ಈ ಘಟನೆ ಸಾರ್ವಜನಿಕರನ್ನು ಬೆಚ್ಚಿ ಬೀಳಿಸಿದೆ.
दावा : इस लड़के को इसलिए मारा गया, क्योंकि इसने पैगंबर मोहम्मद की शान में हुई गुस्ताखी का विरोध किया था।
— Sachin Gupta (@SachinGuptaUP) October 9, 2024
सच : ये अकरम है। हिन्दू लड़की के साथ होटल से वापस आ रहा था। रास्ते में लड़की के भाइयों ने पकड़ लिया। पिटाई की और पुलिस को सौंप दिया।
वीडियो हापुड़, यूपी की 28 सितंबर की है। pic.twitter.com/9OznyLdo8z
ಈ ಕುರಿತು ಹಾಪುರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಾಗಿದೆ. ಅಕ್ರಂ ವಿರುದ್ಧ ಆಮಿಷ ಒಡ್ಡಿ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಈ ಕುರಿತು ಮಾಹಿತಿ ನೀಡಿರುವ ಹಾಪುರ್ನ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ (ಎಎಸ್ಪಿ) ವಿನೀತ್ ಜೈಸ್ವಾಲ್, ಅಕ್ರಮ್ ವಿರುದ್ಧದ ಎಫ್ಐಆರ್ ದಾಖಲಾಗಿರುವುದನ್ನು ಖಚಿತಪಡಿಸಿದ್ದಾರೆ.
ಆನ್ಲೈನ್ನಲ್ಲಿ ಹರಿದಾಡುತ್ತಿರುವ ವದಂತಿಗಳಿಗೆ ಗಮನ ಕೊಡದಂತೆ ಹೇಳಿರುವ ಅವರು, ಈ ಘಟನೆಯ ವಿಡಿಯೋ ಮಾಡಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.