Tuesday, 17th December 2024

Viral Video: ಈ ಅಜ್ಜ-ಅಜ್ಜಿಯ ಪ್ರೀತಿಗೆ ಫಿದಾ ಆದ ನೆಟ್ಟಿಗರು; ಹೃದಯ ಸ್ಪರ್ಶಿ ವಿಡಿಯೊ ನೋಡಿ

Viral Video

ಹೊಸದಿಲ್ಲಿ: ಗಂಡ-ಹೆಂಡತಿಯ ಅನುಬಂಧ ಬಿಡಿಸಲಾಗದ್ದು ಎಂಬ ಮಾತಿದೆ. ಅವರಿಬ್ಬರ ಪ್ರೀತಿ, ನಂಬಿಕೆ ಕೊನೆ ತನಕ ಜೊತೆಯಾಗಿ ಇರಲು ಸಹಾಯ ಮಾಡುತ್ತದೆ. ಇನ್ನು ವಯಸ್ಸಾದ ಹಾಗೇ ಈ ಪ್ರೀತಿ ಮತ್ತಷ್ಟೂ ಹೆಚ್ಚಾಗುತ್ತದೆ. ಇದಕ್ಕೆ ನಿದರ್ಶನವೆಂಬಂತೆ ವೃದ್ಧರೊಬ್ಬರು ತಮ್ಮ ಪ್ರೀತಿಯ ಮಡದಿಯ ಫೋಟೊವನ್ನು ಮೊಬೈಲ್‌ ಕ್ಯಾಮೆರಾದಲ್ಲಿ ಸೆರೆ ಹಿಡಿಯಲು ಪ್ರಯತ್ನಿಸಿದ ವಿಡಿಯೊವೊಂದು ಸೋಶಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌ (Viral Video) ಆಗಿದೆ.

ಇಳಿ ವಯಸ್ಸಿನ ವ್ಯಕ್ತಿಯೊಬ್ಬರು ಮೈದಾನದಲ್ಲಿ ಖುಷಿಯಿಂದ ತಮ್ಮ ಪತ್ನಿಯ ಫೋಟೊ ಕ್ಲಿಕ್ಕಿಸಿದ ವಿಡಿಯೊ ಇದಾಗಿದೆ. ಸೋಶಿಯಲ್‌ ಮೀಡಿಯಾದಲ್ಲಿ ಸಖತ್‌ ಸದ್ದು ಮಾಡುತ್ತಿದೆ. ಈ ವಿಡಿಯೊದಲ್ಲಿ ವೃದ್ಧ ವ್ಯಕ್ತಿ ನೀಲಿ ಸೀರೆಯಲ್ಲಿ ಮಿಂಚುತ್ತಿರುವ ತಮ್ಮ ಪತ್ನಿಯ ಫೋಟೊವನ್ನು ಸೆರೆಹಿಡಿಯಲು ಕೆಳಗೆ ಕುಳಿತುಕೊಂಡು ಬ್ಯಾಲೆನ್ಸ್ ಮಾಡುತ್ತ ಹೆಣಗಾಡಿದ್ದಾರೆ. ದೆಹಲಿ ಮೂಲದ ವ್ಯಕ್ತಿಯೊಬ್ಬರು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಈ ವಿಡಿಯೊ ಸಖತ್‌ ವೈರಲ್‌ ಆಗಿದೆ.

11 ದಶಲಕ್ಷಕ್ಕೂ ಹೆಚ್ಚು ವೀಕ್ಷಣೆಗಳು ಮತ್ತು ಲೈಕ್ಸ್ ಮೂಲಕ ಈ ಮುದ್ದಾದ ವಿಡಿಯೊ ಸೋಶಿಯಲ್ ಮೀಡಿಯಾ ನೆಟ್ಟಿಗರನ್ನು ಆಕರ್ಷಿಸಿದೆ. ಪ್ರೀತಿಗೆ ಯಾವುದೇ ವಯಸ್ಸು ಇಲ್ಲ ಎಂಬುದನ್ನು ಇದು ಒತ್ತಿ ಹೇಳುತ್ತದೆ. ಇನ್ನು ನೆಟ್ಟಿಗರು ಕಾಮೆಂಟ್ ವಿಭಾಗದಲ್ಲಿ ಸಾಕಷ್ಟು ಹೃದಯಸ್ಪರ್ಶಿ ಪ್ರತಿಕ್ರಿಯೆಗಳನ್ನು ವ್ಯಕ್ತಪಡಿಸಿದ್ದಾರೆ.

ಈ ಸುದ್ದಿಯನ್ನೂ ಓದಿ: ಅಯ್ಯೋ… ಇದೆಂಥಾ ಬಾಯಿ ರುಚಿನೋ? ಚಿಕನ್ ಟಿಕ್ಕಾವನ್ನು ಚಾಕೋಲೆಟ್‌ ಜೊತೆ ಬೆರೆಸಿ ತಿಂದ ಭೂಪಾ!

ಈ ವಿಡಿಯೊ ಕೇವಲ ಸಾಮಾನ್ಯ ಜನರಷ್ಟೇ ಅಲ್ಲ, ನಟಿಯರಾದ ಕೃಷ್ಣ ಮುಖರ್ಜಿ, ಶಿಬಾನಿ ಬೇಡಿ, ರಿಧಿಮಾ ಪಂಡಿತ್, ರೋಡೀಸ್ ಖ್ಯಾತಿಯ ಆರುಷಿ ದತ್ತಾ ಮತ್ತು ನೃತ್ಯ ಸಂಯೋಜಕ ತುಷಾರ್ ಕಾಲಿಯಾ ಅವರ ಗಮನ ಸೆಳೆದಿದೆ. ಪ್ರಸಿದ್ಧ ತಾರೆಯರು ಕಾಮೆಂಟ್ ವಿಭಾಗದಲ್ಲಿ ಹಾರ್ಟ್ ಎಮೋಜಿಗಳಿಂದ ಪ್ರತಿಕ್ರಿಯಿಸಿದ್ದಾರೆ. “ನಾನು ಸೋಶಿಯಲ್ ಮೀಡಿಯಾದಲ್ಲಿ ನೋಡಿದ ಅತ್ಯಂತ ಮಧುರ ಕ್ಷಣ” ಎಂದು ನೆಟ್ಟಿಗರೊಬ್ಬರು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರರು “ನನ್ನ ಹೃದಯ ಕರಗಿದೆ, ಮತ್ತು ನಾನು ತುಂಬಾ ಸಂತೋಷದ ಕಣ್ಣೀರನ್ನು ಹಾಕಿದ್ದೇನೆ” ಎಂದು ಕಾಮೆಂಟ್ ಮಾಡಿದ್ದಾರೆ.