ಫ್ಲೋರಿಡಾ: ಹಿಮದಿಂದ ಆವೃತ್ತವಾದ ಪ್ರದೇಶ ಇದಲ್ಲ. ಇಲ್ಲಿ ಬಿಸಿಲಿನ ತಾಪವೇ ಹೆಚ್ಚಾಗಿರುತ್ತದೆ. ಹೀಗಿರುವಾಗ ಫ್ಲೋರಿಡಾದ ವ್ಯಕ್ತಿಯೊಬ್ಬರು ತನ್ನ ಸಾಕು ನಾಯಿಗಳಿಗೆ ಹಿಮದಲ್ಲಿ ಆಡಲು ಫ್ಲೋರಿಡಾದ ಬಿಸಿಲಿನ ಭೂಮಿಯನ್ನು ಹಿಮಭರಿತವಾದ ಸ್ವಿಟ್ಜರ್ಲ್ಯಾಂಡ್‍ನಂತೆ ಮಾಡಿದ್ದಾರೆ. ಇದರ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ. ತನ್ನ ಸಾಕು ನಾಯಿಗಳಿಗಾಗಿ ವ್ಯಕ್ತಿ ಮಾಡಿದ ಕಾರ್ಯಕ್ಕೆ ನೆಟ್ಟಿಗರು ಫಿದಾ ಆಗಿದ್ದಾರೆ.
ಟನ್‍ಗಟ್ಟಲೆ ಹಿಮವನ್ನು ತಂದು ಸುರಿದು ಇಡೀ ಉದ್ಯಾನವನ್ನು ಹಿಮಭರಿತ ‘ಸ್ವಿಟ್ಜರ್ಲ್ಯಾಂಡ್’ ಆಗಿ ಪರಿವರ್ತಿಸಿದ್ದಾರೆ. ಹಾಗೇ ಇದನ್ನು ವಿಡಿಯೊ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ. ಇದು ವೈರಲ್ ಆಗಿದೆ. ವೈರಲ್ ವಿಡಿಯೊದಲ್ಲಿ, ವ್ಯಕ್ತಿಯು ತನ್ನ ಹಸಿರು ಉದ್ಯಾನವನ್ನು ತನ್ನ ಎರಡು ಮುದ್ದಾದ ಸಾಕು ನಾಯಿಗಳೊಂದಿಗೆ ಖುಷಿಯಿಂದ ಕಳೆಯಲು ಹಿಮಭರಿತ ಸ್ಥಳವಾಗಿ ಹೇಗೆ ಪರಿವರ್ತಿಸಿದ್ದಾರೆ ಎಂಬುದನ್ನು ತೋರಿಸಿದ್ದಾರೆ. ಒಂದಿಷ್ಟು ಜನರು ಉದ್ಯಾನವನದಲ್ಲಿ ಹಿಮವನ್ನು ಹಾಕುವುದು ಮತ್ತು ಅಲ್ಲಿ ಕ್ರಿಸ್‍ಮಸ್‍ಗೆ ಸಂಬಂಧಪಟ್ಟ ವಸ್ತುಗಳಿಂದ ಅಲಂಕರಿಸುವುದು ರೆಕಾರ್ಡ್ ಆಗಿದೆ.
‘ಲೂನಾ ದಟ್ ಗೋಲ್ಡನ್’ ಮತ್ತು ‘ಬ್ರಾಡಿ ದಟ್ ಡೂಡ್’ ಎಂಬ ನಾಯಿಗಳ ಇನ್‌ಸ್ಟಾಗ್ರಾಂ ಪುಟಗಳಲ್ಲಿ ಈ ವಿಡಿಯೊವನ್ನು ಅಪ್ಲೋಡ್ ಮಾಡಲಾಗಿದೆ. ಸ್ವಿಟ್ಜರ್ಲ್ಯಾಂಡ್‍ನ ಹಿಮದಿಂದ ಆವೃತವಾದ ಪರ್ವತಗಳನ್ನು ಕಣ್ತುಂಬಿಕೊಳ್ಳಲು ನಾಯಿಗಳು ನಮ್ಮೊಂದಿಗೆ ಪ್ರಯಾಣಿಸಲು ಸಾಧ್ಯವಿಲ್ಲದ ಕಾರಣ, ನಾನು ಹಿಮವನ್ನು ಅವುಗಳ ಬಳಿಗೆ ತರಬೇಕಾಯಿತು ” ಎಂದು ಅವರು ಅದರಲ್ಲಿ ಬರೆದಿದ್ದಾರೆ. ಈ ಘಟನೆ ಇನ್‌ಸ್ಟಾಗ್ರಾಂನಲ್ಲಿ ವೈರಲ್ ಆಗುತ್ತಿದ್ದಂತೆ, ನೆಟ್ಟಿಗರು ಅವರ ನಾಯಿಯ ಮೇಲಿನ ಪ್ರೀತಿಯನ್ನು ಹೊಗಳಿದ್ದಾರೆ. ಕಾಮೆಂಟ್‍ಗಳಲ್ಲಿ ಅವರನ್ನು “ಕೂಲ್ ಡಾಗ್ ಡ್ಯಾಡ್” ಎಂದು ಶ್ಲಾಘಿಸಿದ್ದಾರೆ.
ಈ ಸುದ್ದಿಯನ್ನೂ ಓದಿ:ಗಿಳಿಯೂ ಪಂಜರದೊಳಿಲ್ಲ…. ಹುಡುಕಿಕೊಟ್ಟವರಿಗೆ ಒಂದು ಲಕ್ಷ ರೂಪಾಯಿ ಬಹುಮಾನ!
ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಲಾದ ಈ ವಿಡಿಯೊ ಈಗಾಗಲೇ ವೈರಲ್ ಆಗಿದ್ದು, ಸೋಶಿಯಲ್ ಮೀಡಿಯಾದಲ್ಲಿ 3.5 ಮಿಲಿಯನ್ ವೀಕ್ಷಣೆಗಳನ್ನು ಪಡೆದಿದೆ. ನಾಲ್ಕು ಲಕ್ಷಕ್ಕೂ ಹೆಚ್ಚು ಇನ್‌ಸ್ಟಾಗ್ರಾಂ ಬಳಕೆದಾರರು ಈ ವಿಡಿಯೊವನ್ನು ಲೈಕ್ ಮಾಡಿದ್ದಾರೆ ಮತ್ತು ಸಾಕು ಪ್ರಾಣಿಗಳ ಬಗ್ಗೆ ಆ ವ್ಯಕ್ತಿಗಿರುವ ಅಕ್ಕರೆಯನ್ನು ಆರಾಧಿಸಿದ್ದಾರೆ.