Saturday, 23rd November 2024

Viral Video : ನಾಯಿಯ ನಿಯತ್ತು; ವಿಷಕಾರಿ ಕಾಳಿಂಗ ಸರ್ಪವನ್ನು ಕೊಂದು ಮಕ್ಕಳನ್ನು ಕಾಪಾಡಿದ ಶ್ವಾನ!

ಬೆಂಗಳೂರು: ಉತ್ತರ ಪ್ರದೇಶ ಝಾನ್ಸಿಯಲ್ಲಿ ವರದಿಯಾದ ಘಟನೆಯೊಂದರಲ್ಲಿ ಪಿಟ್‌ಬುಲ್ ತಳಿಯ ಶ್ವಾನವೊಂದು ಅಪಾಯಕಾರಿ ಹಾಗೂ ವಿಷಕಾರಿ ಕಾಳಿಂಗ ಸರ್ಪವನ್ನು ಕಾದಾಡಿ (Viral Video) ಕೊಂದು ಮಕ್ಕಳ ಜೀವವನ್ನು ಉಳಿಸಿದೆ. ಈ ಘಟನೆಯ ವಿಡಿಯೊ ವೈರಲ್ ಆಗಿದ್ದು ನಾಯಿಯ ನಿಯತ್ತಿಗೆ ಶಹಬ್ಬಾಸ್ ಎಂದಿದ್ದಾರೆ. ಇಲ್ಲಿನ ಶಿವ ಗಣೇಶ್ ಕಾಲೋನಿಯಲ್ಲಿ ಘಟನೆ ನಡೆದಿದೆ. ಮನೆಯ ತೋಟಕ್ಕೆ ಹಾವು ನುಗ್ಗಿದ್ದು. ಮನೆ ಮನೆಗೆಲಸದವರ ಮಕ್ಕಳು ಆಟವಾಡುತ್ತಿದ್ದರು. ಹಾವನ್ನು ನೋಡಿದ ಮಕ್ಕಳು ಕಿರುಚಿ ಸಹಾಯಕ್ಕಾಗಿ ಕೂಗಿದ್ದಾರೆ. ಈ ವೇಳೆ ತೋಟದ ಇನ್ನೊಂದು ತುದಿಯಲ್ಲಿ ಕಟ್ಟಿಹಾಕಲಾಗಿದ್ದ ಪಿಟ್ ಬುಲ್ ನಾಯಿ ತನ್ನನ್ನು ಕಟ್ಟಿ ಹಾಕಿದ್ದ ಸಂಕೊಲೆಯನ್ನು ಕಿತ್ತುಕೊಂಡು ಬಂದು ಮಕ್ಕಳನ್ನು ಕಾಪಾಡಿದೆ.

ವೀಡಿಯೊದಲ್ಲಿ, ಪಿಟ್ ಬುಲ್ ನಾಯಿ ಬಾಯಿಯಲ್ಲಿ ಕಾಳಿಂಗ ಸರ್ಪವನ್ನು ಬಿಗಿಯಾಗಿ ಹಿಡಿದುಕೊಂಡು ಪದೇ ಪದೇ ನೆಲಕ್ಕೆ ಬಡಿದು ಕೊಂದಿದೆ. ನಾಯಿ ಹಾವಿನ ಜತೆಗಿನ ಹೋರಾಟವನ್ನು ಸುಮಾರು ಐದು ನಿಮಿಷಗಳ ಕಾಲ ಮುಂದುವರಿ ಸಿ ಕೊನೆಗೆ ಅದನ್ನು ಕೊಂದಿದೆ. ನಾಯಿಯ ಮಾಲೀಕ ಪಂಜಾಬ್ ಸಿಂಗ್ ಪ್ರಕಾರ, ಹಾವು ಕೊಂದು ಜೀವ ಉಳಿಸಿರುವುದು ಇದೇ ಮೊದಲಲ್ಲ. ಇಲ್ಲಿಯವರೆಗೆ, ಜೆನ್ನಿ ಸುಮಾರು ಎಂಟರಿಂದ ಹತ್ತು ಹಾವುಗಳನ್ನು ಕೊಂದು ಮನುಷ್ಯರನ್ನು ಕಾಪಾಡಿದೆ.

ಘಟನೆ ನಡೆದ ದಿನ, ಸಿಂಗ್ ಅವರು ಮನೆಯಲ್ಲಿ ಇರಲಿಲ್ಲ. ಜೆನ್ನಿಯ ಧೈರ್ಯದ ಬಗ್ಗೆ ಮಾತನಾಡಿದ ಅವರು ಹಾವು ಮನೆಗೆ ಪ್ರವೇಶಿಸಿದ್ದರೆ, ದುರ್ಘಟನೆ ಸಂಭವಿಸುತ್ತಿತ್ತು ಎಂದು ಹೇಳಿದ್ದಾರೆ.

ನಾನು ನಿನ್ನೆ ಮನೆಯಲ್ಲಿ ಇರಲಿಲ್ಲ, ಆದರೆ ನನ್ನ ಮಕ್ಕಳು ಇದ್ದರು. ಇದು ನಾವು ನೋಡಿದ ಮೊದಲ ಹಾವು ಅಲ್ಲ, ನಮ್ಮ ಮನೆ ಹೊಲಗಳ ಬಳಿ ಇದೆ. ಮತ್ತು ಮಳೆಗಾಲದಲ್ಲಿ ಹಲವಾರು ಹಾವುಗಳು ಬರುತ್ತವೆ. ನಾಯಿ ಸುಮಾರು 8 ರಿಂದ 10 ಹಾವುಗಳನ್ನು ಕೊಂದಿದೆ ಎಂದು ಅವರು ಹೇಳಿದ್ದಾರೆ.

ಮನೆಯ ಸಹಾಯಕಿಯ ಮಕ್ಕಳು ಆಟವಾಡುತ್ತಿದ್ದಾಗ ಕಪ್ಪು ಹಾವು ಕಾಣಿಸಿಕೊಂಡಿದೆ. ಮಕ್ಕಳು ಕಿರುಚಿದ್ದಾರೆ. ಆಗ ಹಾವು ಗಾಬರಿಗೊಂಡಿತ್ತು. ನಮ್ಮ ಪಿಟ್ ಬುಲ್ ಅದನ್ನು ಗಮನಿಸಿ, ಅದರ ಹಗ್ಗ ಬಿಡಿಸಿಕೊಂಡು ಬಂದು ಹಾವಿನ ಮೇಲೆ ದಾಳಿ ಮಾಡಿದೆ ಎಂದು ಹೇಳಿದರು.

ಇದನ್ನೂ ಓದಿ: Wedding Traditions: ಇಲ್ಲಿ ಮದುವೆಯಾದ ವಧು ಒಂದು ವಾರದವರೆಗೆ ನಗ್ನವಾಗಿರಬೇಕು!

ಸಿಂಗ್ ಅವರು ತಮ್ಮ ನಾಯಿಯ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ್ದಾರೆ. ಪ್ರತಿಯೊಬ್ಬರೂ ಪ್ರಾಣಿಗಳಿಗೆ ಹೆಚ್ಚಿನ ಪ್ರೀತಿಯನ್ನು ತೋರಿಸಬೇಕು ಎಂದು ಸಿಂಗ್ ಹೇಳಿದ್ದಾರೆ. ನಾವು ಪ್ರಾಣಿಗಳಿಗೆ ಪ್ರೀತಿ ತೋರಿಸಬೇಕು. ಯಾಕೆಂದರೆ ನಾಯಿ ಮತ್ತು ಹಾವಿನ ನಡುವಿನ ಹೋರಾಟ ಸುಮಾರು ಐದು ನಿಮಿಷಗಳ ಕಾಲ ನಡೆದಿತ್ತು. ಶ್ವಾನ ಹಾವನ್ನು ಕೊಲ್ಲದಿದ್ದರೆ, ದುರಂತ ಸಂಭವಿಸುತ್ತಿತ್ತು ಎಂದು ಹೇಳಿದ್ದಾರೆ.