Wednesday, 18th December 2024

Viral Video: ಮಕ್ಕಳ ಜಗಳಕ್ಕೆ ತಾಯಂದಿರ ನಡುವೆ ಕಚ್ಚಾಟ; ಬಾಲಕನ ಕೆನ್ನೆಗೆ ಬಾರಿಸಿದ ಮಹಿಳೆ- ಶಾಕಿಂಗ್‌ ವಿಡಿಯೊ ಇದೆ

Viral Video

ನವದೆಹಲಿ: ಗ್ರೇಟರ್ ನೋಯ್ಡಾದ ವಸತಿ ಸಂಕೀರ್ಣದಲ್ಲಿ ಇಬ್ಬರು ಮಕ್ಕಳ ನಡುವಿನ ಜಗಳವು ಅವರ ತಾಯಂದಿರ ನಡುವೆ ದೊಡ್ಡ ವಾಗ್ವಾದಕ್ಕೆ ಕಾರಣವಾಗಿದೆ. ಮಹಿಳೆಯರಲ್ಲಿ ಒಬ್ಬರು ಇನ್ನೊಬ್ಬರ ಆರು ವರ್ಷದ ಮಗುವಿಗೆ ಕಪಾಳಮೋಕ್ಷ ಮಾಡಿದ್ದಾರೆ.  ಮಹಿಳೆ ಮಗುವಿಗೆ ಎಷ್ಟು ಬಲವಾಗಿ ಕಪಾಳಮೋಕ್ಷ ಮಾಡಿದ್ದಾರೆ ಎಂದರೆ ಅವರು ಹೊಡೆದ ಏಟಿಗೆ ಮಗುವಿನ ಕೆನ್ನೆಯಲ್ಲಿ ಗಾಯವಾಗಿದೆ. ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ.

ವರದಿಗಳ ಪ್ರಕಾರ, ಇಬ್ಬರು ಮಕ್ಕಳು ಸಣ್ಣ ವಿಚಾರಕ್ಕೆ ಜಗಳವಾಡಿದ್ದಾರೆ. ನಂತರ  ಒಬ್ಬ ಬಾಲಕ  ತನ್ನ ತಾಯಿಯನ್ನು ಕರೆದಿದ್ದಾನೆ. ಆಗ ಮಹಿಳೆ ತಾಳ್ಮೆ ಕಳೆದುಕೊಂಡು ಮತ್ತೊಂದು ಮಗುವಿನ ಮುಖಕ್ಕೆ ಹೊಡೆದಿದ್ದಾರೆ. ಮಗುವಿನ ತಾಯಿ ಮತ್ತು ಪ್ರದೇಶದ ಇತರ ಮಹಿಳೆಯರು ಮಹಿಳೆಯನ್ನು ಎದುರಿಸಿದಾಗ, ಅವರು ಮಗುವನ್ನು ಮತ್ತೆ ಹೊಡೆಯುವುದಾಗಿ ಬೆದರಿಕೆ ಹಾಕಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ  ವಿಡಿಯೊದಲ್ಲಿ “ಅವನು ನನಗೆ ಒಂಟಿಯಾಗಿ ಸಿಕ್ಕರೆ, ನಾನು ಅವನಿಗೆ ಕಪಾಳಮೋಕ್ಷ ಮಾಡುತ್ತೇನೆ” ಎಂದು ಮಹಿಳೆ ಅವಾಜ್‌ ಹಾಕಿದ್ದಾರೆ. ಘಟನೆಗಳನ್ನು ತನ್ನ ಫೋನ್‍ನಲ್ಲಿ ರೆಕಾರ್ಡ್ ಮಾಡಿದ ಇನ್ನೊಬ್ಬ ಮಹಿಳೆಗೂ ಈ ಸಂದರ್ಭದಲ್ಲಿ ಕಪಾಳಮೋಕ್ಷವಾಗಿದೆಯಂತೆ.

ಈ ಸುದ್ದಿಯನ್ನೂ ಓದಿ: ನಡುಬೀದಿಯಲ್ಲಿ ಹುಡುಗಿಯ ಕೂದಲು ಹಿಡಿದೆಳೆದು ಥಳಿಸಿದ ಕಿರಾತಕರು-ವಿಡಿಯೊ ವೈರಲ್  

ಕಪಾಳಮೋಕ್ಷಕ್ಕೊಳಗಾದ ಮಗುವಿನ ತಂದೆ ಈಗ ಮಹಿಳೆಯ ವಿರುದ್ಧ ಪೊಲೀಸ್ ದೂರು ದಾಖಲಿಸಿದ್ದಾರೆ. ಘಟನೆಯ ಬಗ್ಗೆ ಸೋಶಿಯಲ್ ಮೀಡಿಯಾದ ಪೋಸ್ಟ್‌ಗೆ  ಪ್ರತಿಕ್ರಿಯಿಸಿದ ಪೊಲೀಸರು, ಗೌರ್ ಸಿಟಿ 2 ರಲ್ಲಿ ಈ ಘಟನೆ ನಡೆದಿದೆ ಎಂದು ತಿಳಿಸಿದ್ದಾರೆ. ಘಟನೆಯ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.