Sunday, 24th November 2024

Viral Video: ಫೋಟೊ ತೆಗೆಸಿಕೊಳ್ಳಲು ಬಂದ ಕಾರ್ಯಕರ್ತನಿಗೆ ಜಾಡಿಸಿ ಒದ್ದ ಬಿಜೆಪಿ ನಾಯಕ!

Viral Video

ಚುನಾವಣೆ (election) ಸಂದರ್ಭದಲ್ಲಿ ಕಾರ್ಯಕರ್ತರನ್ನು ದೇವರಂತೆ ಕಾಣುವವರು ಬಳಿಕ ಅವರನ್ನು ಕೇವಲವಾಗಿ ನೋಡುತ್ತಾರೆ. ಇದಕ್ಕೆ ಹಲವಾರು ನಿದರ್ಶನಗಳಿವೆ. ಇದೀಗ ಮಹಾರಾಷ್ಟ್ರದ ಬಿಜೆಪಿ ನಾಯಕನೊಬ್ಬನ (Maharastra bjp leader) ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ (Viral Video) ಆಗಿದ್ದು, ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ. ಬಿಜೆಪಿ ನಾಯಕ ಮತ್ತು ಮಾಜಿ ಕೇಂದ್ರ ಸಚಿವ ರಾವ್ ಸಾಹೇಬ್ ದಾನ್ವೆ ಅವರು ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯ ಮತದಾನಕ್ಕೂ ಮುನ್ನ ಪಕ್ಷದ ಕಾರ್ಯಕರ್ತನೊಂದಿಗೆ ವರ್ತಿಸಿದ ರೀತಿ ಇದೀಗ ವಿವಾದವನ್ನು ಹುಟ್ಟು ಹಾಕಿದೆ.

ಬಿಜೆಪಿ ನಾಯಕನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಆಕ್ರೋಶಕ್ಕೆ ಕಾರಣವಾಗಿದೆ. ಈ ವಿಡಿಯೋದಲ್ಲಿ ಫೋಟೋ ತೆಗೆಸಿಕೊಳ್ಳಲು ಹತ್ತಿರಬಂದ ಕಾರ್ಯಕರ್ತನೊಬ್ಬನನ್ನು ದಾನ್ವೆ ಕಾಲಿನಿಂದ ಒದ್ದು ದೂರ ಮಾಡಿರುವುದನ್ನು ಕಾಣಬಹುದು. ರಾವ್ ಸಾಹೇಬ್ ದಾನ್ವೆ ಅವರ ವರ್ತನೆಗೆ ಸಾಮಾಜಿಕ ಮಾಧ್ಯಮದಲ್ಲಿ ಅನೇಕ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದು, ಅವರನ್ನು ದುರಂಹಕಾರಿ ಎಂದು ಕರೆದಿದ್ದಾರೆ.

ಜಲ್ನಾದಲ್ಲಿ ಈ ಘಟನೆ ನಡೆದಿದ್ದು, ಬಿಜೆಪಿ ಮುಖಂಡ ರಾವ್ ಸಾಹೇಬ್ ದಾನ್ವೆ ಅವರು ಶಿವಸೇನಾ ಶಿಂಧೆ ಬಣದ ಅಭ್ಯರ್ಥಿ ಅರ್ಜುನ್ ಖೋಟ್ಕರ್ ಅವರೊಂದಿಗೆ ಫೋಟೋ ತೆಗೆಸಿಕೊಳ್ಳಲು ಮುಂದಾದಾಗ ಪಕ್ಷದ ಕಾರ್ಯಕರ್ತರೊಬ್ಬರು ಫೋಟೋಗೆ ಪೋಸ್ ಕೊಡಲು ಅವರ ಹತ್ತಿರ ಬರಲು ಪ್ರಯತ್ನಿಸಿದರು. ಆಗ ದಾನ್ವೆ ಆತನನ್ನು ಕಾಲಿನಿಂದ ಒದ್ದು ದೂರ ಮಾಡುವುದನ್ನು ವಿಡಿಯೋದಲ್ಲಿ ತೋರಿಸಲಾಗಿದೆ.

ದಾನ್ವೆ ಅವರ ವರ್ತನೆಯನ್ನು ಟೀಕಿಸಿದ ಬಳಕೆದಾರರೊಬ್ಬರು, ದುರಹಂಕಾರಿ ಬಿಜೆಪಿ ನಾಯಕ ರಾವ್ ಸಾಹೇಬ್ ದಾನ್ವೆ ಅಧಿಕಾರಕ್ಕೆ ಬಂದ ಅನಂತರ ಬಿಜೆಪಿ ಸಾಮಾನ್ಯ ಜನರನ್ನು ಒದೆಯುವ ರೀತಿ ಇದು ಎಂದು ಹೇಳಿದ್ದಾರೆ.

ಇನ್ನೊಬ್ಬ ಬಳಕೆದಾರ ಕಾಮೆಂಟ್ ಮಾಡಿ, ಬಿಜೆಪಿಯ ರಾಜ್ಯ ಚುನಾವಣಾ ಮುಖ್ಯಸ್ಥ ರಾವ್ ಸಾಹೇಬ್ ದಾನ್ವೆ ಅವರು ಆರೆಸ್ಸೆಸ್ ಕಾರ್ಯಕರ್ತನಿಗೆ ಒದೆಯುತ್ತಿರುವುದನ್ನು ಈ ವಿಡಿಯೋದಲ್ಲಿ ತೋರಿಸಲಾಗಿದೆ. ಈ ಕೃತ್ಯದಿಂದ ರಾಜ್ಯಾದ್ಯಂತ ಅನೇಕ ಬಿಜೆಪಿ ಆರ್‌ಎಸ್‌ಎಸ್ ಬೆಂಬಲಿಗರು ತೀವ್ರವಾಗಿ ನೊಂದಿದ್ದು, ಚುನಾವಣಾ ದಿನದಂದು ಬಿಜೆಪಿಗೆ ತಕ್ಕ ಪಾಠ ಕಲಿಸಲು ನಿರ್ಧರಿಸಿದ್ದಾರೆ ಎಂದು ಹೇಳಿದರು.

Viral Video: ʼನಾಮ್‌ ಸುನ್ಕೇ ಫ್ಲವರ್‌ ಸಮ್ಝಾ ಕ್ಯಾ..??ʼ ಎಂದು ಯೂಟ್ಯೂಬ್‌ ಚಾನೆಲ್‌ ಆಫೀಸಿಗೆ ನುಗ್ಗಿದ ಅಲ್ಲು ಅರ್ಜುನ್‌ ಫ್ಯಾನ್ಸ್..!!‌ ಮುಂದೇನಾಯ್ತು?

ಬಿಜೆಪಿ ನಾಯಕ ರಾವ್ ಸಾಹೇಬ್ ದಾನ್ವೆ ಅಕ್ಷರಶಃ ಬಿಜೆಪಿ ಸದಸ್ಯನನ್ನು ಒದೆಯುತ್ತಾರೆ ನೋಡಿ. ಮುಂಬರುವ ಚುನಾವಣೆಯಲ್ಲಿ ಬಿಜೆಪಿ ಮತ್ತು ಮಹಾಯುತಿಯ ಈ ದುರಹಂಕಾರವು ನಾಶವಾಗಲಿದೆ. ಬಿಜೆಪಿಗೆ ಮತ ನೀಡಿ ಎಂದು ಇನ್ನೊಬ್ಬ ಬಳಕೆದಾರರು ತಿಳಿಸಿದ್ದಾರೆ.