ಅತ್ಯಾಚಾರ ಮತ್ತು ಕೊಲೆ (Rape and murder) ಹುಡುಗಿಯರಿಗೆ ಅನ್ಯಾಯವಲ್ಲ, ಅದೊಂದು ಪರೀಕ್ಷೆ ಎಂದು ಇಸ್ಲಾಮಿಕ್ ಬೋಧಕ ಝಾಕಿರ್ ನಾಯ್ಕ್ ( Islamic preacher Zakir Naik ) ಹೇಳಿದ್ದು, ಇದರ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ (Social Media) ಭಾರಿ ವೈರಲ್ (Viral Video) ಆಗಿದೆ. ಈ ಹೇಳಿಕೆಗೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ. ಸಾಕಷ್ಟು ಮಂದಿ ಝಾಕಿರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವೈರಲ್ ಆಗಿರುವ ಝಾಕಿರ್ ನಾಯ್ಕ್ ವಿಡಿಯೋದಲ್ಲಿ ಅತ್ಯಾಚಾರ ಮತ್ತು ಕೊಲೆಗೆ ಸಂಬಂಧಿಸಿದ ಆತನ ಹೇಳಿಕೆಗಳಿಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಅತ್ಯಾಚಾರ ಮತ್ತು ಕೊಲೆಯಲ್ಲಿ ಭಾಗಿಯಾದ ಅಪರಾಧಿಗಳು ನಿಜವಾಗಿಯೂ ಪಶ್ಚಾತ್ತಾಪಪಟ್ಟರೆ ಅಲ್ಲಾ ಅವರನ್ನು ಕ್ಷಮಿಸಬಹುದು ಎಂದು ಝಾಕಿರ್ ಹೇಳಿದ್ದಾನೆ.
According to #Islamic scholar #ZakirNaik, a man can simply get away with punishment for r@pe & murd€r if he asks for forgiveness from #Allah and also blames the girl for getting r@ped because of her clothing, if however she dressed modestly, then it was a test from #Allah SWT. pic.twitter.com/aB2DM6XQ8N
— Dr Skeptic (@drskeptick) October 9, 2024
ಒಬ್ಬ ವ್ಯಕ್ತಿಯು ಅತ್ಯಾಚಾರ ಮತ್ತು ಕೊಲೆ ಮಾಡಿದರೂ ಆತ ಕೆಲವು ನಿಯಮಗಳನ್ನು ಪಾಲಿಸಿದರೆ ಅಲ್ಲಾ ಅವರನ್ನು ಕ್ಷಮಿಸುತ್ತಾನೆ. ಇದಕ್ಕಾಗಿ ಅಪರಾಧಿಗಳು ತಪ್ಪನ್ನು ಒಪ್ಪಿಕೊಳ್ಳಬೇಕು. ಅಂತಹ ನಡವಳಿಕೆಯನ್ನು ತಕ್ಷಣವೇ ನಿಲ್ಲಿಸಬೇಕು. ಮತ್ತೆ ಆ ತಪ್ಪು ಮಾಡದಂತೆ ಭರವಸೆ ನೀಡಬೇಕು. ಪ್ರಾಮಾಣಿಕವಾಗಿ ಕ್ಷಮೆಯನ್ನು ಕೋರಬೇಕು ಎಂದು ಝಾಕಿರ್ ಪ್ರತಿಪಾದಿಸಿದ್ದಾನೆ.
ಝಾಕಿರ್ ಹೇಳಿಕೆ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾದರೂ ಝಾಕಿರ್ ತನ್ನ ಮಾತನ್ನು ಸಮರ್ಥಿಸಿಕೊಂಡಿದ್ದಾನೆ. ಮಹಿಳೆಯರು ಪ್ರಚೋದನಕಾರಿಯಾಗಿ ಉಡುಪು ಧರಿಸಿದರೆ ಅತ್ಯಾಚಾರ, ಕೊಲೆಗೆ ಅವರೇ ಜವಾಬ್ದಾರರು ಎಂದಿರುವ ಝಾಕಿರ್, ಇಂತಹ ಘಟನೆಗಳನ್ನು ತಡೆಯಲು ಮಹಿಳೆಯರು ಇಸ್ಲಾಮಿಕ್ ಮಾರ್ಗಸೂಚಿಗಳನ್ನು ಅನುಸರಿಸಬೇಕು ಎಂದು ತಿಳಿಸಿದ್ದಾನೆ.
According to #Islamic scholar #ZakirNaik, a man can simply get away with punishment for r@pe & murd€r if he asks for forgiveness from #Allah and also blames the girl for getting r@ped because of her clothing, if however she dressed modestly, then it was a test from #Allah SWT. pic.twitter.com/aB2DM6XQ8N
— Dr Skeptic (@drskeptick) October 9, 2024
ಅತ್ಯಾಚಾರ, ಕೊಲೆ ಯುವತಿಗೆ ಮಾಡುವ ಅನ್ಯಾಯವಲ್ಲ ಎಂದಿರುವ ಝಾಕಿರ್, ಇದೊಂದು ಪರೀಕ್ಷೆ ಎಂದಿದ್ದಾನೆ. ಅತ್ಯಾಚಾರಕ್ಕೆ ಒಳಗಾದವರು ಮತ್ತು ಅತ್ಯಾಚಾರ ಮಾಡಿರುವವರು ಪರೀಕ್ಷೆಗೆ ಒಳಗಾಗುತ್ತಿದ್ದಾರೆ. ಅಲ್ಲಾ ಮಹಿಳೆಗೆ ದೇಹವನ್ನು ಮುಚ್ಚುವ, ಮುಖವನ್ನು ಮಾತ್ರ ನೋಡಬಹುದಾದ ಉಡುಗೆಯನ್ನು ಧರಿಸುವಂತೆ ಹೇಳಿದ್ದಾರೆ. ಆ ಹುಡುಗಿ ಕಡಿಮೆ ಉಡುಗೆ ಧರಿಸಿದ್ದರೆ ಅದರಿಂದ ಜನರು ಉದ್ರೇಕಗೊಳ್ಳುತ್ತಾರೆ ಮತ್ತು ಅತ್ಯಾಚಾರವೆಸಗುತ್ತಾರೆ. ಇದರ ಅರ್ಥ ಹುಡುಗನಿಗೆ ಅತ್ಯಾಚಾರ ಮಾಡುವ ಹಕ್ಕು ಇದೆ ಎಂದಲ್ಲ. ಸರಿಯಾದ ಬಟ್ಟೆಗಳನ್ನು ಧರಿಸಲು ಮಾರ್ಗಸೂಚಿಗಳನ್ನು ಅನುಸರಿಸದೇ ಇದ್ದರೆ ಮಹಿಳೆಯೇ ಪುರುಷರನ್ನು ಅತ್ಯಾಚಾರಕ್ಕೆ ಆಕರ್ಷಿಸಿದ್ದಾಳೆ ಎಂದು ದೂಷಿಸಬೇಕು ಎಂದು ಝಾಕಿರ್ ತಿಳಿಸಿದ್ದಾನೆ.
ಝಾಕಿರ್ ಹೇಳಿಕೆಗಳಿಗೆ ಅನೇಕರು ಕಾಮೆಂಟ್ ಮಾಡಿದ್ದು, ಅನೇಕರು ಇದು ಸ್ತ್ರೀದ್ವೇಷ ಹೇಳಿಕೆ ಎಂದು ಹೇಳಿ ಖಂಡಿಸಿದ್ದಾರೆ. ಅನೇಕರು ಝಾಕಿರ್ ಹೇಳಿಕೆಗೆ ನಿರಾಶೆ ಮತ್ತು ಅಸಹ್ಯವನ್ನು ವ್ಯಕ್ತಪಡಿಸಿದ್ದಾರೆ. ಒಬ್ಬರು ಪ್ರತಿಕ್ರಿಯಿಸಿ, ನೀವು ಈ ಮನುಷ್ಯನ ಮಾತನ್ನು ಎಷ್ಟು ಕೇಳುತ್ತಿರೋ ಅಷ್ಟೇ ಅಸಹ್ಯಪಡುತ್ತೀರಿ ಎಂದು ಹೇಳಿದ್ದಾರೆ. ಮತ್ತೊಬ್ಬರು, ಭಾರತ ಸರ್ಕಾರವು ಸಾಮಾಜಿಕ ಮಾಧ್ಯಮದಲ್ಲಿ ಆತನ ಎಲ್ಲಾ ಖಾತೆಗಳನ್ನು ನಿಷೇಧಿಸಬೇಕು ಮತ್ತು ಎಲ್ಲಾ ವಿಡಿಯೋಗಳನ್ನು ತೆಗೆದುಹಾಕಬೇಕು. ಕೊಳೆತ ಉಗ್ರಗಾಮಿ ಮನಸ್ಥಿತಿ ಎಂದಿದ್ದಾರೆ.
ಇನ್ನೊಬ್ಬರು, ಬುದ್ಧಿಮಾಂದ್ಯ ಜೀವಿ, ಎಂದಿದ್ದು, ಮತ್ತೊಬ್ಬರು, ಅವನಿಗೂ ಪರೀಕ್ಷೆ ಇರಬೇಕು ಎಂದು ಹೇಳಿದ್ದಾರೆ. ಪ್ರಸ್ತುತ ಮಲೇಷ್ಯಾದಲ್ಲಿ ನೆಲೆಸಿರುವ ಝಾಕಿರ್ ನಾಯ್ಕ್ ಕಳೆದ ವಾರ ಪಾಕಿಸ್ತಾನಕ್ಕೆ ಭೇಟಿ ನೀಡಿದ್ದ. ಪಾಕಿಸ್ತಾನದಲ್ಲಿ ಅವಿವಾಹಿತ ಮಹಿಳೆಯರ ಸ್ಥಾನಮಾನದ ಬಗ್ಗೆ ನೀಡಿರುವ ಅವರ ಹೇಳಿಕೆಗಳು ವಿವಾದವನ್ನು ಹುಟ್ಟುಹಾಕಿದೆ.
ಎಕ್ಸ್ ನಲ್ಲಿ ವೈರಲ್ ಆಗಿರುವ ಇನ್ನೊಂದು ವಿಡಿಯೋದಲ್ಲಿ ಝಾಕಿರ್, ಅವಿವಾಹಿತ ಮಹಿಳೆಯನ್ನು ಸಮಾಜದಲ್ಲಿ ಗೌರವಿಸಲಾಗುವುದಿಲ್ಲ. ಒಬ್ಬಂಟಿ ಪುರುಷ ಲಭ್ಯವಿಲ್ಲದಿದ್ದರೆ ಮಹಿಳೆಯು ಈಗಾಗಲೇ ವಿವಾಹಿತ ಪುರುಷನನ್ನು ಗೌರವಿಸಲು ಮದುವೆಯಾಗಬೇಕು ಎಂದು ಹೇಳಿದ್ದಾರೆ.
Fact Check: ಶೋಯೆಬ್ ಮಲಿಕ್ ಪತ್ನಿಯ ಮಾಜಿ ಪತಿಯನ್ನು ಮದುವೆಯಾಗಲಿದ್ದಾರಾ ಸಾನಿಯಾ ಮಿರ್ಜಾ?
ಅವಿವಾಹಿತ ಮಹಿಳೆಯನ್ನು ಗೌರವಿಸಲು ಸಾಧ್ಯವೇ ಇಲ್ಲ. ಹಾಗಾಗಿ ಅವರಿಗೆ ಎರಡು ಆಯ್ಕೆಗಳಿವೆ. ಮೊದಲ ಆಯ್ಕೆಯು ಈಗಾಗಲೇ ಹೆಂಡತಿಯನ್ನು ಹೊಂದಿರುವ ವ್ಯಕ್ತಿಯನ್ನು ಮದುವೆಯಾಗುವುದು ಅಥವಾ ಅವಳು ವೈಶ್ಯೆಯಾಗುವುದು. ಆಗ ಅವಳು ಸಾರ್ವಜನಿಕ ಆಸ್ತಿಯಾಗುತ್ತಾಳೆ. ಹೀಗಾಗಿ ಗೌರವಾನ್ವಿತ ಮಹಿಳೆ ಮೊದಲ ಆಯ್ಕೆಯನ್ನು ಆರಿಸಿಕೊಳ್ಳುತ್ತಾಳೆ ಎಂದು ಝಾಕಿರ್ ಹೇಳಿದ್ದ.