ಮುಂಬೈ: ಇತ್ತೀಚಿಗೆ ಡ್ರಿಂಕ್ ಆಂಡ್ ಡ್ರೈವ್, ರ್ಯಾಶ್ ಡ್ರೈವಿಂಗ್ ಪ್ರಕರಣಗಳು ದಿನೇ ದಿನೆ ಹೆಚ್ಚಾಗುತ್ತಿವೆ. ಚಾಲಕರ ಹುಚ್ಚಾಟಕ್ಕೆ ಅದೆಷ್ಟೋ ಅಮಾಯಕ ಜೀವಗಳು ಬಲಿಯಾಗುತ್ತಿವೆ. ಇದೀಗ ಮತ್ತೊಂದೆಡೆ ಪ್ರಕರಣ ಮುಂಬೈನಲ್ಲಿ ನಡೆದಿದೆ(Viral Video). ಸಂಪದಾ (Sanpada) ಪ್ರದೇಶದಲ್ಲಿ ದೀಪಾವಳಿಯ ಹಿಂದಿನ ದಿನ ವೇಗವಾಗಿ ಚಲಿಸುತ್ತಿರುವ ಕಾರೊಂದು ಪಾದಾಚಾರಿಗಳಿಗೆ ಡಿಕ್ಕಿ ಹೊಡೆದ ಘಟನೆ ನಡೆದಿದೆ. ಅತೀ ವೇಗದಿಂದ ಬಂದ ಎಸ್ಯುವಿ (SUV Car) ಕಾರು ರಸ್ತೆ ಪಕ್ಕ ನಿಂತಿದ್ದವರ ಮೂವರ ಮೇಲೆ ಹರಿದಿದೆ. ಸಂಪದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
Navi Mumbai, Maharashtra: In Sanpada, a car nearly hit four people for parking his vehicle. The Sanpada police have registered a case and initiated an investigation pic.twitter.com/PBPb4sVLzY
— IANS (@ians_india) November 1, 2024
ಪ್ರಾಥಮಿಕ ಮಾಹಿತಿ ಪ್ರಕಾರ, ಕಾರ್ ಚಾಲಕ ತನ್ನ ವಾಹನವನ್ನು ನಿಲ್ಲಿಸಲು ಪ್ರಯತ್ನಿಸುತ್ತಿದ್ದಾಗ ಪಾದಚಾರಿಗಳಿಗೆ ಡಿಕ್ಕಿ ಹೊಡೆದಿದ್ದಾನೆ ಎಂದು ಹೇಳಲಾಗುತ್ತಿದೆ. ಘಟನೆಯಲ್ಲಿ ಮೂವರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಪೊಲೀಸರು ತನಖೆ ನಡೆಸುತ್ತಿದ್ದಾರೆ.
ಇತ್ತೀಚೆಗೆ ಕೊಲ್ಕತ್ತಾದಲ್ಲಿ ಉದ್ಯಮಿಯೊಬ್ಬರ ಕಾರ್ ಹರಿದು ಒಬ್ಬ ವ್ಯಕ್ತಿ ಮೃತಪಟ್ಟಿದ್ದು, ಮೂವರು ಗಾಯಗೊಂಡಿದ್ದರು. ಉದ್ಯಮಿ ಯು ಟರ್ನ್ ತೆಗೆದುಕೊಳ್ಳಲು ಪ್ರಯತ್ನಿಸಿದಾಗ ಕಾರು ನಿಯಂತ್ರಣ ತಪ್ಪಿ ಪುಟ್ಪಾತ್ ಮೇಲೆ ಹತ್ತಿದ್ದು 54 ವರ್ಷದ ವ್ಯಾಪಾರಿ ಮೃತಪಟ್ಟಿದ್ದ. ಘಟನೆಯಲ್ಲಿ ಮೂವರು ಗಾಯಗೊಂಡಿದ್ದರು.
ಸೋಮವಾರ ಬೆಳಗ್ಗೆ 8.15ರ ಸುಮಾರಿಗೆ ಪರೇಶನಾಥ ದೇವಸ್ಥಾನದಿಂದ 100 ಮೀಟರ್ ದೂರದಲ್ಲಿ ಈ ಘಟನೆ ನಡೆದಿದ್ದು, ಆರೋಪಿ ತನ್ನ ತಂದೆ ಹಾಗೂ ಪರಿಚಯಸ್ಥನ ಜತೆ ಪ್ರಾರ್ಥನೆ ಸಲ್ಲಿಸಲು ತೆರಳಿದ್ದ. ನಂತರ ಮನೆಗೆ ತೆರಳಲು ಆರ್.ಜಿ ಕರ್ ಸೇತುವೆಯ ಬಳಿ ಯು ಟರ್ನ್ ತೆಗೆದುಕೊಳ್ಳಲು ಕಾರ್ ಚಲಾಯಿಸಿದ್ದಾನೆ. ಕಾರು ತನ್ನ ನಿಯಂತ್ರಣ ತಪ್ಪಿ ಪುಟ್ಪಾತ್ ಮೇಲೇರಿದೆ. ಕಾರು ಅತೀ ವೇಗದಲ್ಲಿ ಇಲ್ಲವಾದರೂ ಈ ಘಟನೆ ಸಂಭವಿಸಿದೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಬ್ರೇಕ್ ಹಾಕಲು ಆಕ್ಸಿಲೇಟರ್ ಒತ್ತಿರಬಹುದು ಊಹಿಸಲಾಗಿದೆ.
ಇದನ್ನೂ ಓದಿ : Road Accident: ಭೀಕರ ರಸ್ತೆ ಅಪಘಾತ; ಬಸ್ ಮೋರಿಗೆ ಡಿಕ್ಕಿ ಹೊಡೆದು 12 ಮಂದಿ ಸಾವು
ಮೃತ ಸೋಹೈಬ್ ಅಹ್ಮದ್ (52) ಮೂಲತಃ ಮುಜಾಫರ್ಪುರದ ರಾಜಾಪುರದ ನಿವಾಸಿಯಾಗಿದ್ದು, ತನ್ನ ತಂಬಾಕು ಅಂಗಡಿಯ ಎದುರಿನ ಬದಿಯಲ್ಲಿ ತನ್ನ ಸಂಬಂಧಿಕರೊಂದಿಗೆ ಬಾಡಿಗೆಗೆ ವಾಸವಿದ್ದ. ಗಾಯಗೊಂಡ ಪಾದಚಾರಿಗಳನ್ನು ಎಂಡಿ ಸುಲ್ತಾನ್ (25), ಸಿರಾಜುಲ್ ಅನ್ಸಾರಿ (30), ಎಂಡಿ ಸೈಯದ್ ಅಲಿ (49) ಮತ್ತು ಸುಮಿತ್ ಅನ್ಸಾರಿ (20) ಎಂದು ಗುರುತಿಸಲಾಗಿದ್ದು, ಅವರು ಬೆಲ್ಗಾಚಿಯಾ ನಿವಾಸಿಗಳು ಎಂದು ತಿಳಿದು ಬಂದಿದೆ. ಎಲ್ಲಾ ಸಂತ್ರಸ್ತರನ್ನು ಆರ್ಜಿ ಕರ್ ವೈದ್ಯಕೀಯ ಆಸ್ಪತ್ರೆಗೆ ಸಾಗಿಸಲಾಯಿತು.