ಶಾಲೆಯನ್ನು ಜ್ಞಾನದೇಗುಲವೆಂದು ಕರೆಯುತ್ತಾರೆ. ಯಾಕೆಂದರೆ ಇಲ್ಲಿಗೆ ಬರುವ ಮಕ್ಕಳು ವಿದ್ಯೆ ಕಲಿತು ಜೀವನದಲ್ಲಿ ಉನ್ನತ ಮಟ್ಟಕ್ಕೆ ಹೋಗಲು ಶಿಕ್ಷಕರು ಸಹಾಯ ಮಾಡುತ್ತಾರೆ ಎಂಬ ಕಾರಣಕ್ಕೆ. ಹಾಗಾಗಿ ಪೋಷಕರು ತಮ್ಮ ಮಕ್ಕಳನ್ನು ಪ್ರತಿದಿನ ಶಾಲೆಗೆ ಕಳುಹಿಸುತ್ತಾರೆ. ಆದರೆ ಅಲ್ಲಿ ಮಾತ್ರ ಶಿಕ್ಷಕರು ಅಥವಾ ಶಾಲಾ ಸಿಬ್ಬಂದಿ ತಮ್ಮ ಅಧಿಕಾರದ ಸ್ಥಾನವನ್ನು ದುರುಪಯೋಗಪಡಿಸಿಕೊಳ್ಳುವುದರ ಮೂಲಕ ಮಕ್ಕಳಿಂದ ತಮ್ಮ ಸೇವೆಗಳನ್ನು ಮಾಡಿಸಿಕೊಳ್ಳುತ್ತಿರುತ್ತಾರೆ. ಇದೀಗ ಅಂತಹದೊಂದು ಘಟನೆ ಜೈಪುರದ ಸರ್ಕಾರಿ ಶಾಲೆಯಲ್ಲಿ ನಡೆದಿದೆ. ಶಾಲೆಯ ಶಿಕ್ಷಕಿಯೊಬ್ಬರು ನೆಲದ ಮೇಲೆ ಮಲಗಿದ್ದರೆ, ವಿದ್ಯಾರ್ಥಿಗಳು ಅವರ ಕಾಲುಗಳ ಮೇಲೆ ನಿಂತು ಮಸಾಜ್ ಮಾಡುತ್ತಿರುವ ವಿಡಿಯೊ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video) ಆಗಿದೆ.
ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ, ಸರ್ಕಾರಿ ಶಾಲೆಗಳ ಸ್ಥಿತಿಯ ಬಗ್ಗೆ ಪೋಷಕರಲ್ಲಿ ಕಳವಳ ಹೆಚ್ಚಾಗಿದ್ದು, ಅನೇಕ ಶಿಕ್ಷಕರು ಹಾಗೂ ಪೋಷಕರು ಈ ಘಟನೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕರ್ತಾರ್ಪುರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಈ ಘಟನೆಯ ವಿಡಿಯೊದಲ್ಲಿ, ಶಿಕ್ಷಕಿಯೊಬ್ಬರು ತರಗತಿಯಲ್ಲಿ ನೆಲದ ಮೇಲೆ ಮಲಗಿದ್ದಾರೆ. ಇಬ್ಬರು ಮಕ್ಕಳು ಅವರ ಕಾಲುಗಳ ಮೇಲೆ ನಡೆದಾಡುತ್ತಾ ಮಸಾಜ್ ಮಾಡುತ್ತಿದ್ದಾರೆ. ಪಕ್ಕದಲ್ಲಿ ಮತ್ತೊಬ್ಬ ಶಿಕ್ಷಕಿ ಕೂಡ ಕುಳಿತಿದ್ದಾರೆ.
स्कूल टीचर का वीडियो हुआ वायरल. pic.twitter.com/ReTUYkEPoj
— Prashant rai (@prashantrai280) October 10, 2024
ಇದನ್ನೂ ಓದಿ: ನೌಕಾಪಡೆ ಅಧಿಕಾರಿಯಂತೆ ನಟಿಸಿ ಹಿಂದೂ ಮಹಿಳೆಯನ್ನು ಇಸ್ಲಾಂಗೆ ಮತಾಂತರಕ್ಕೆ ಯತ್ನ, ಆರೋಪಿ ಅರೆಸ್ಟ್
ಶಾಲೆಯ ಪ್ರಾಂಶುಪಾಲರಾದ ಅಂಜು ಚೌಧರಿ ಅವರು ಈ ವಿಡಿಯೊವನ್ನು ನೋಡಿದ್ದಾರೆ ಆದರೆ ಈ ಘಟನೆಯ ಬಗ್ಗೆ ತಮಗೆ ತಿಳಿದಿಲ್ಲ ಎಂದು ಹೇಳಿದ್ದಾರೆ. ಅಲ್ಲದೇ ಶಿಕ್ಷಕಿ ಅನಾರೋಗ್ಯದಿಂದ ಬಳಲುತ್ತಿದ್ದ ಕಾರಣ ತಮ್ಮ ಪಾದಗಳಿಗೆ ಮಸಾಜ್ ಮಾಡಲು ಮಕ್ಕಳನ್ನು ವಿನಂತಿಸಿರಬಹುದು ಎಂದು ಅವರು ಹೇಳಿದ್ದಾರೆ. ಆದರೆ ಇದರ ಹಿಂದಿನ ಸತ್ಯವನ್ನು ಕಂಡುಹಿಡಿಯಲು ತನಿಖೆ ನಡೆಸಲಾಗುವುದು ಎಂದು ಅವರು ತಿಳಿಸಿದ್ದಾರೆ. ಆದರೆ ಶಾಲಾ ಆಡಳಿತ ಮಂಡಳಿ ಮತ್ತು ಶಿಕ್ಷಣ ಇಲಾಖೆ ಈ ಘಟನೆಯ ಬಗ್ಗೆ ಈವರೆಗೆ ಯಾವುದೇ ಅಧಿಕೃತ ಹೇಳಿಕೆಯನ್ನು ಬಿಡುಗಡೆ ಮಾಡಿಲ್ಲ.