Thursday, 14th November 2024

Viral Video: ಎಣ್ಣೆ ಏಟಿನಲ್ಲಿ ರೈಲು ಹಳಿಗಳ ಮೇಲೆ ʼಥಾರ್‌ʼ ವಾಹನ ಓಡಿಸುವ ದುಸ್ಸಾಹಸ!

ಈ ರೀಲ್ಸ್ ಎಂಬ ವೈರಸ್ (Viral Video) ಎಷ್ಟರ ಮಟ್ಟಿಗೆ ಹರಡಿದೆ ಎಂದರೆ, ಜನ ತಮ್ಮ ಅಗತ್ಯದ ಕೆಲಸಗಳ ನಡುವೆಯೂ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಸಕ್ರೀಯರಾಗಿರುತ್ತಾರೆ, ಫೇಸ್‌ಬುಕ್ (Facebook), ಇನ್‌ಸ್ಟಾಗ್ರಾಮ್ (Instagram), ವಾಟ್ಸ್‌ಆ್ಯಪ್ (Whats App), ಟ್ವಿಟರ್ (Twitter).. ಹೀಗೆ ಒಂದೆರಡಲ್ಲ, ಇನ್ನು ಕೆಲವರು ಒಂದು ಹೆಜ್ಜೆ ಮುಂದೆ ಹೋಗಿ ರೀಲ್ಸ್ ಮಾಡಿ ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿ ಪ್ರಚಾರ ಗಿಟ್ಟಿಸಿಕೊಳ್ಳುವುದುಂಟು.

ದಿನದಿಂದ ದಿನಕ್ಕೆ ರೀಲ್ಸ್‌ ಮಾಡುವವರ ಹುಚ್ಚಾಟ ಹೆಚ್ಚಾಗುತ್ತಲೇ ಇದ್ದು, ಕೆಲವೊಂದಿಷ್ಟು ಜನರು ರೀಲ್ಸ್‌ ಶೋಕಿಗಾಗಿ ಬಸ್‌, ರೈಲು, ಮೆಟ್ರೋ, ಬಸ್‌ಸ್ಟಾಂಡ್‌ ಇತ್ಯಾದಿ ಸಾರ್ವಜನಿಕ ಸ್ಥಳಗಳಲ್ಲಿ ವಿಡಿಯೋ ಮಾಡಿ ಸಾರ್ವಜನಿಕರಿಗೆ ತೊಂದರೆ ಕೊಡುತ್ತಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ರೀಲ್ಸ್ ಗಳದ್ದೇ ಕಾರುಬಾರು ಒಬ್ಬರು ಇನ್ನೊಬ್ಬರಿಗಿಂತ ಭಿನ್ನವಾಗಿ ಏನಾದರು ಮಾಡಬೇಕೆಂದು ಹುಚ್ಚು ಸಾಹಸಕ್ಕೆ ಕೈ ಹಾಕಿ ಕೆಲವರ ಪ್ರಾಣಕ್ಕೆ ಕುತ್ತು ಬಂದಿದ್ದೂ ಇದೆ ಅದೇ ರೀತಿ ಇಲ್ಲೊಬ್ಬ ರೀಲ್ಸ್ ಗಾಗಿ ರೈಲ್ವೆ ಹಳಿಯ ಮೇಲೆ ಮಹೀಂದ್ರಾ ಥಾರ್ ವಾಹನವನ್ನು ಓಡಿಸುವ ಅಪಾಯಕಾರಿ ಸಾಹಸ ಮಾಡಿದ್ದಾನೆ, ಇಲ್ಲಿ ಒಂದು ವೇಳೆ ರೈಲು ಏಕಾಏಕಿ ಬಂದರೆ ಆತನ ಪ್ರಾಣಕ್ಕೆ ಕುತ್ತು ಬರುವುದಂತೂ ಪಕ್ಕಾ, ಸದ್ಯ ಈ ಭಯಾನಕ ರೀಲ್ಸ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ನೆಟ್ಟಿಗರಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

ರಾಜಸ್ಥಾನದ ಜೈಪುರದಲ್ಲಿ ಕುಡುಕ ವ್ಯಕ್ತಿಯೊಬ್ಬ ರೀಲ್ಸ್ ಗಾಗಿ ಅಪಾಯವನ್ನ ಮೈಮೇಲೆ ಎಳೆದುಕೊಂಡಿದ್ದು, ಕಂಠಪೂರ್ತಿ ಕುಡಿದ ಮತ್ತಿನಲ್ಲಿ ರಸ್ತೆ ಎಂದುಕೊಂಡು ರೈಲು ಹಳಿಯಲ್ಲೇ ಥಾರ್ ಚಲಾಯಿಸಿದ್ದಾನೆ. ಮದ್ಯದ ಅಮಲಿನಲ್ಲಿ ಸಾಹಸ ಮಾಡ ಹೊರಟ್ಟಿದ್ದು, ಅದೃಷ್ಟವಶಾತ್ ಪವಾಡ ಸದೃಶ್ಯದಂತೆ ಸಾವಿನ ದವಡೆಯಿಂದ ಪಾರಾಗಿದ್ದಾನೆ.

ಇದನ್ನೂ ಓದಿ: IND vs SA: ಸತತ ಎರಡನೇ ಬಾರಿ ಡಕ್‌ಔಟ್‌ ಆಗಿ ಅನಗತ್ಯ ದಾಖಲೆ ಬರೆದ ಸಂಜು ಸ್ಯಾಮ್ಸನ್‌!

ಹೌದು, ತನ್ನ ಮಹೀಂದ್ರಾ ಥಾರ್ ವಾಹನವನ್ನ ರೈಲ್ವೆ ಹಳಿಯ ಮೇಲೆ ಓಡಿಸಿಕೊಂಡು ಬಂದಿದ್ದು, ಒಂದು ಟ್ರ್ಯಾಕ್‌ನಲ್ಲಿ ಒಂದು ಬದಿಯ ಚಕ್ರಗಳನ್ನು ಮತ್ತೊಂದು ಟ್ರ್ಯಾಕ್‌ನಲ್ಲಿ ಮತ್ತೊಂದು ಬದಿಯಲ್ಲಿ ಲೋಡ್ ಮಾಡಿ ವಾಹನವನ್ನು ಓಡಿಸಲು ಮುಂದಾಗಿದ್ದಾನೆ. ಇದೇ ವೇಳೆ ವಿರುದ್ಧ ದಿಕ್ಕಿನಿಂದ ರೈಲು ಆಗಮಿಸಿದೆ. ಅದೃಷ್ಠವಶಾತ್ ಲೋಕೋಪೈಲೆಟ್ ಕಾರು ಗಮನಿಸಿದ ಕಾರಣ ತುರ್ತು ಬ್ರೇಕ್ ಹಾಕಿದ್ದಾನೆ.

ಆದರೆ ಇದು ಮಹಾನ್ ಎಡವಟ್ಟಿಗೆ ಕಾರಣವಾಗಿದ್ದು, ಕುಡಿದ ಮತ್ತಿನಲ್ಲಿದ್ದ ಚಾಲಕ ಕಾರಿನಿಂದ ಇಳಿಯದೇ ರೈಲು ಹಳಿಯಲ್ಲಿ ಸಿಲುಕಿದ್ದ ಕಾರನ್ನು ತೆಗೆಯಲು ಪ್ರಯತ್ನಿಸಿದ್ದಾನೆ. ಪೊಲೀಸರು ಸಮೀಪಿಸುತ್ತಿದ್ದಂತೆ ಈತ ಅತೀ ವೇಗವಾಗಿ ಕಾರನ್ನು ಹಿಂದಕ್ಕೆ ತೆಗೆಯಲು ಯತ್ನಿಸಿದ್ದು, ಪಕ್ಕದಲ್ಲಿದ್ದವರು ಜೀವ ಭಯದಿಂದ ದೂರ ಸಾಗಿದ್ದಾರೆ.

ಆದರೆ ಅಜಾಗರೂಕತೆಯಿಂದ ಕಾರು ರಿವರ್ಸ್ ಪಡೆದ ವೇಳೆ ಮೂವರು ಗಾಯಗೊಂಡಿದ್ದು, ವೇಗದಲ್ಲಿ ಕಾರನ್ನು ಹಿಂದಕ್ಕೆ ತೆಗೆದ ಪರಿಣಾಮ ಸಣ್ಣ ಪ್ರಪಾತಕ್ಕೆ ಥಾರ್ ಬಿದ್ದಿದೆ. ಆದರೆ ಈ ವೇಳೆ ಚಾಲಕ ಮಾತ್ರ ಪೊಲೀಸರನ್ನು ಯಾಮಾರಿಸಿ ಚರಂಡಿ, ಇಳಿಜಾರು, ಪೊದೆಗಳ ಮೂಲಕ ಎಸ್ಕೇಪ್ ಆಗಿದ್ದಾನೆ.

ಸದ್ಯ ಈ ಘಟನೆಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಕಾರು ಚಾಲಕ ಸ್ಥಳದಿಂದ ಪರಾರಿಯಾಗುತ್ತಿದ್ದಂತೆ ಪೊಲೀಸರು ಚೇಸ್ ಮಾಡಿದ್ದಾರೆ. ಅತೀ ವೇಗವಾಗಿ ಸಾಗಿದ ಕಾರು ಚಾಲಕನ ಚೇಸ್ ಮಾಡಿದ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಚಾಲನಕ ವಿರುದ್ದ ಹಲವು ಪ್ರಕರಣಗಳು ದಾಖಲಾಗಿದೆ. ರೈಲು ಹಳಿಯಲ್ಲಿ ವಾಹನ ಡ್ರೈವ್, ಕುಡಿದು ವಾಹನ ಚಲಾವಣೆ, ಮೂವರಿಗೆ ಡಿಕ್ಕಿ, ಅಜಾಗರೂಕತೆ ಚಾಲನೆ ಸೇರಿದಂತೆ ಹಲವು ಪ್ರಕರಣ ದಾಖಲಾಗಿದೆ.

ಇನ್ನು ಈ ರೀಲ್ಸ್ ಹುಚ್ಚಿನಿಂದ ಅದೆಷ್ಟೋ ಅಮಾಯಕರ ಜೀವವನ್ನು ಬಲಿ ತೆಗೆದಿದ್ದೂ ಇದೆ, ಇಷ್ಟಾದರೂ ಜನಕ್ಕೆ ಬುದ್ಧಿ ಮಾತ್ರ ಬರುವ ಲಕ್ಷಣ ಕಾಣುತ್ತಿಲ್ಲ.

ರೀಲ್ಸ್ ಗಾಗಿ ಯುವಕ ಯುವತಿಯರು ತಮ್ಮ ಪ್ರಾಣದ ಜೊತೆಗೆ ಚೆಲ್ಲಾಟವಾಡುತ್ತಿರುವ ಅದೆಷ್ಟೋ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು ಅಂಥವರ ವಿರುದ್ಧ ಪೊಲೀಸರು ಕಠಿಣ ಕ್ರಮ ಕೈಗೊಳ್ಳುವ ಅಗತ್ಯವಿದೆ.