ನವದೆಹಲಿ: ಇತ್ತೀಚಿನ ದಿನಗಳಲ್ಲಿ ಆಹಾರ ಪದಾರ್ಥಗಳಲ್ಲಿ ಚಿತ್ರ-ವಿಚಿತ್ರ ಪ್ರಯೋಗಗಳನ್ನು ಮಾಡುವ ವಿಡಿಯೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುತ್ತವೆ. ಇದೀಗ ಅಂತಹದ್ದೇ ಒಂದು ವಿಡಿಯೊ ಹರಿದಾಡುತ್ತಿದೆ. ವ್ಯಕ್ತಿಯೊಬ್ಬ ಚಿಕನ್ ಟಿಕ್ಕಾಗೆ ಚಾಕೋಲೆಟ್ ಬೆರೆಸಿ ಭರ್ಜರಿಯಾಗಿ ಬ್ಯಾಟಿಂಗ್ ನಡೆಸಿದ್ದಾನೆ(Viral Video).
ಈ ವೈರಲ್ ವಿಡಿಯೊದಲ್ಲಿ ವ್ಯಕ್ತಿಯೊಬ್ಬರು ಚಿಕನ್ ಟಿಕ್ಕಾಗೆ ಚಾಕೋಲೆಟ್ ಬೆರೆಸಿ ತಯಾರಿಸಿದ್ದಾರೆ. @imjustbesti ಖಾತೆಯು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಈ ವಿಡಿಯೊ ಆಹಾರ ಪ್ರಿಯರಲ್ಲಿ ಆಘಾತವನ್ನುಂಟು ಮಾಡಿದೆ ಎಂದರೆ ತಪ್ಪಾಗಲಾರದು. ವಿಡಿಯೊದಲ್ಲಿ ವ್ಯಕ್ತಿ ಚಾಕೋಲೆಟ್ ಅಚ್ಚಿನಲ್ಲಿ ಫುಡ್ ಕಲರ್ ಅನ್ನು ಸಿಂಪಡಿಸಿ ನಂತರ ಅವರು ಬಿಳಿ ಚಾಕೊಲೇಟ್ ಅನ್ನು ಆ ಪಾತ್ರೆಗೆ ಸುರಿಯುತ್ತಾರೆ, ಕರಗಿದ ಚಾಕೊಲೇಟ್ ಅನ್ನು ಅಚ್ಚಿಗೆ ಲೇಪಿಸುತ್ತಾರೆ. ನಂತರ ಅದರ ಮೇಲೆ ಚಿಕನ್ ಟಿಕ್ಕಾವನ್ನು ಹಾಕಿ ಅದರ ಮೇಲೆ ಚಾಕೊಲೇಟ್‍ನ ಮತ್ತೊಂದು ಪದರದಿಂದ ಮುಚ್ಚುತ್ತಾರೆ. ಫ್ರೀಜರ್‌ನಲ್ಲಿ ಕೆಲವು ಗಂಟೆಗಳ ನಂತರ, ಈ ವಿಚಿತ್ರ ಫುಡ್ ಅನ್ನು ಅನಾವರಣಗೊಳಿಸಲಾಗುತ್ತದೆ. “ಚಿಕನ್ ಟಿಕ್ಕಾ ಚಾಕೊಲೇಟ್ ಬಗ್ಗೆ ನಿಮ್ಮ ಅಭಿಪ್ರಾಯ ಏನು?” ಎಂದು ಈ ವಿಡಿಯೊಗೆ ಶೀರ್ಷಿಕೆ ನೀಡಲಾಗಿದೆ.
ಈ ವಿಡಿಯೊಗೆ ಲಕ್ಷಾಂತರ ವೀಕ್ಷಣೆಗಳು ಮತ್ತು ಕಾಮೆಂಟ್‍ಗಳು ಬಂದಿವೆ. ನೆಟ್ಟಿಗರೊಬ್ಬರು ಕಾಮೆಂಟ್ ಮಾಡಿ, “ಚಿಕನ್ ಟಿಕ್ಕಾ ಮತ್ತು ಚಾಕೊಲೇಟ್? ಮುಂದೇನು, ಬಿರಿಯಾನಿ ಐಸ್ ಕ್ರೀಮ್?” ಎಂದು ಕೇಳಿದ್ದಾರೆ.ಇದರಿಂದ ನಿರಾಶೆಗೊಂಡ ಆಹಾರ ಪ್ರಿಯರೊಬ್ಬರು, “ಇದು ಈ ವರ್ಷ ನಾನು ನೋಡಿದ ಅತ್ಯಂತ ಕೆಟ್ಟ ಪಾಕವಿಧಾನವಾಗಿರಬೇಕು.” ಎಂದಿದ್ದಾರೆ. ಇನ್ನೊಬ್ಬರು ವ್ಯಂಗ್ಯವಾಗಿ, “ದಯವಿಟ್ಟು ಅದನ್ನು ನಿಲ್ಲಿಸಿ.” ಎಂದು ಹೇಳಿದ್ದಾರೆ.
ಈ ಸುದ್ದಿಯನ್ನೂ ಓದಿ:ತರಗತಿಯಲ್ಲಿ ತಲೆಕೆಳಗಾಗಿ ನಿಂತ ಶಿಕ್ಷಕ- ಇಷ್ಟೆಲ್ಲಾ ಸರ್ಕಸ್ ಬೇಕಿತ್ತಾ ಎಂದ ನೆಟ್ಟಿಗರು; ಅಷ್ಟಕ್ಕೂ ನಡೆದಿದ್ದೇನು?