ಘಾಜಿಯಾಬಾದ್: ಅಂಗಡಿಗಳಿಂದ ಕುರುಕುಲು ತಿಂಡಿಗಳನ್ನು, ಸ್ನ್ಯಾಕ್‌ಗಳನ್ನು ಖರೀದಿ ಮಾಡಿ ಚಪ್ಪರಿಸಿಕೊಂಡು ತಿನ್ನುತ್ತಿರಾ. ಹಾಗಿದ್ದರೆ ತಿನ್ನುವುದಕ್ಕೆ ಮೊದಲು ಒಂದು ಸಲ ಒಳಗೆ ಏನಿದೆ ಎಂಬುದನ್ನು ಬಿಡಿಸಿ ನೋಡಿ. ಯಾಕೆಂದರೆ ಇಲ್ಲೊಬ್ಬರಿಗೆ ಸ್ವೀಟ್ ಅಂಗಡಿಯಲ್ಲಿ (sweet shop) ಖರೀದಿ ಮಾಡಿದ ಸಮೋಸದಲ್ಲಿ (samosa) ಕಪ್ಪೆ ಕಾಲು (frog leg) ಸಿಕ್ಕಿದೆ. ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ (Viral Video) ಆಗಿದೆ.
ಉತ್ತರ ಪ್ರದೇಶದ ಗಾಜಿಯಾಬಾದ್‌ನ ಸ್ವೀಟ್ ಅಂಗಡಿಯಲ್ಲಿ ಖರೀದಿ ಮಾಡಿದ ಸಮೋಸಾದಲ್ಲಿ ಗ್ರಾಹಕರೊಬ್ಬರಿಗೆ ಕಪ್ಪೆ ಕಾಲು ಸಿಕ್ಕಿದೆ. ಇದರಿಂದ ಶಾಕ್ ಆದ ಗ್ರಾಹಕರು, ಕಪ್ಪೆಯ ಕಾಲು ಮತ್ತು ಸಮೋಸಾವನ್ನು ಖರೀದಿ ಮಾಡಿದ ಅಂಗಡಿ ಬಿಕಾನೆರ್ ಸ್ವೀಟ್ಸ್ ಎಂದು ತೋರಿಸುತ್ತ ವಿಡಿಯೋ ಚಿತ್ರೀಕರಣ ಮಾಡಿದ್ದಾರೆ. ವೆಜ್ ಸಮೋಸದಲ್ಲಿ ಕಪ್ಪೆ ಕಾಲು ಕೊಟ್ಟಿರುವುದು ಮೋಸ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ಘಟನೆ ವೈರಲ್ ಆದ ಬಳಿಕ ಸುತ್ತಮುತ್ತ ಸೇರಿದ ಸಾಕಷ್ಟು ಮಂದಿ ಅಂಗಡಿಗೆ ಬಂದು ಅಂಗಡಿ ಮಾಲೀಕನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಬಳಿಕ ಪೊಲೀಸ್ ದೂರು ನೀಡಿದ್ದಾರೆ. ಈ ಎಲ್ಲ ದೃಶ್ಯಗಳು ವೈರಲ್ ಆಗಿರುವ ವಿಡಿಯೋದಲ್ಲಿ ಸೆರೆಯಾಗಿದೆ.
In Ghaziabad, UP, a frog's leg was found inside a samosa. The case is of Bikaner Sweets. Police took the shopkeeper into custody. The food department sent samples for testing.
— amrish morajkar (@mogambokhushua) September 12, 2024
ससुरे पूरा मेंढक भी नहीं डाल सकते ?
हद है कंजूसी की 🤦🏻♂️ pic.twitter.com/TmbzndZyUa
ಪೊಲೀಸರು ಅಂಗಡಿ ಮಾಲೀಕನನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ. ಆಹಾರ ಇಲಾಖೆಯು ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಿದೆ ಎನ್ನಲಾಗಿದೆ.
Viral News: ಸಹಪಾಠಿ ಹುಟ್ಟುಹಬ್ಬಕ್ಕೆ ಕ್ಲಾಸ್‌ರೂಂನಲ್ಲೇ ವಿದ್ಯಾರ್ಥಿನಿಯರಿಂದ ಎಣ್ಣೆ ಪಾರ್ಟಿ!
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಈ ವಿಡಿಯೋ ಸಾಕಷ್ಟು ಚರ್ಚೆ ಹುಟ್ಟು ಹಾಕಿದೆ. ಕಾಮೆಂಟ್ ನಲ್ಲಿ ಒಬ್ಬರು ಫಾಸ್ಟ್‌ಫುಡ್‌ನಲ್ಲಿ ಜಿರಳೆ, ಹಲ್ಲಿ, ಇಲಿ ಎಲ್ಲವೂ ಇರುತ್ತದೆ. ಇವೆಲ್ಲವನ್ನೂ ತಪ್ಪಿಸಿ ಹಣ್ಣುಗಳನ್ನು ತಿನ್ನಿ, ಜ್ಯೂಸ್ ಕುಡಿಯಿರಿ ಎಂದು ಸಲಹೆ ಕೊಟ್ಟಿದ್ದಾರೆ.
ಇನ್ನೊಬ್ಬರು ದೊಡ್ಡ ಅಂಗಡಿ, ರುಚಿಯಿಲ್ಲದ ಆಹಾರ ಎಂದು ಹೇಳಿಕೊಳ್ಳುವ ಜತೆಗೆ ದೊಡ್ಡ ಬ್ರ್ಯಾಂಡ್ ಮತ್ತು ಅವರಿಂದ ಕೆಟ್ಟ ನಡವಳಿಕೆ ಎಂದು ತಿಳಿಸಿದ್ದಾರೆ. ಮತ್ತೊಬರು ಇಂದಿನ ದಿನಗಳಲ್ಲಿ ಆದಷ್ಟು ಹೊರಗಿನ ಆಹಾರವನ್ನು ಸೇವಿಸುವುದನ್ನು ತಪ್ಪಿಸಿ ಎಂದು ಹೇಳಿದ್ದಾರೆ.