ರೈಲು ನಿಲ್ದಾಣವೊಂದರಲ್ಲಿ (train station) ರಾತ್ರಿ ವೇಳೆ ಎಲ್ಲರನ್ನೂ ಬೆಚ್ಚಿಬೀಳಿಸುವ ಘಟನೆಯೊಂದು ನಡೆದಿದೆ. ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ (social media) ವೈರಲ್ (Viral Video) ಆಗಿದ್ದು, ಸಾರ್ವಜನಿಕ ಸಾರಿಗೆಯಲ್ಲಿ ಸುರಕ್ಷತೆಯ ಬಗ್ಗೆ ಸಾಕಷ್ಟು ಮಂದಿ ಕಳವಳ ವ್ಯಕ್ತಪಡಿಸಿದ್ದಾರೆ. ರೈಲಿನಲ್ಲಿ ಕಿಟಕಿ ಬದಿ ಕುಳಿತು ಮೊಬೈಲ್ ನೋಡುತ್ತಿದ್ದ ಬಾಲಕಿಯ ಕೈಯಿಂದ ಮೊಬೈಲ್ ಅನ್ನು ಯುವಕನೊಬ್ಬ ಕಿಟಕಿ ಮೂಲಕ ಕಸಿದುಕೊಂಡು ಪರಾರಿಯಾಗಿರುವ ಘಟನೆ ನಡೆದಿದೆ. ಇದರ ದೃಶ್ಯ ಕೆಮರಾದಲ್ಲಿ ಸೆರೆಯಾಗಿದ್ದು, ಎಕ್ಸ್ ನಲ್ಲಿ ವೈರಲ್ ಆಗಿದೆ.
ವೈರಲ್ ಆಗಿರುವ ವಿಡಿಯೋದಲ್ಲಿ ಒಬ್ಬ ವ್ಯಕ್ತಿ ನಿಧಾನವಾಗಿ ಚಲಿಸುತ್ತಿದ್ದ ರೈಲಿನ ಕಿಟಕಿ ಬಳಿ ಬಾಲಕಿಯ ಫೋನ್ ಅನ್ನು ಬಲವಂತವಾಗಿ ಕಸಿದುಕೊಳ್ಳುತ್ತಿರುವುದನ್ನು ಕಾಣಬಹುದು. ಬಾಲಕಿ ತನ್ನ ಮೊಬೈಲ್ ಅನ್ನು ಆತನಿಗೆ ಕೊಡದೇ ಇರಲು ಪ್ರಯತ್ನಿಸುತ್ತಾಳೆ. ಆದರೆ ಆತ ಅವಳ ಫೋನ್ ಅನ್ನು ಕಸಿದುಕೊಂಡು ಬೇಗನೆ ಓಡಿಹೋಗುತ್ತಾನೆ. ಘಟನೆಯಿಂದ ಬಾಲಕಿ ದಿಗ್ಭ್ರಮೆಗೊಂಡಿದ್ದು, ಕೂಡಲೇ ಆಕೆಗೆ ಪ್ರತಿಕ್ರಿಯಿಸಲು ಸಾಧ್ಯವಾಗದೇ ಇರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.
"ट्रेन में बैठते समय सावधानी बरतें"
— MANOJ SHARMA LUCKNOW UP🇮🇳🇮🇳🇮🇳 (@ManojSh28986262) October 2, 2024
देखिए कैसे खिड़की में से बच्ची से फोन छीनकर चला गया !!
आजकल फोन चोरी वाली घटनाएं कुछ ज्यादा बढ़ रही हैं !!#ViralVideo #Trending #tren pic.twitter.com/C4bRzGKcfY
ಬಾಲಕಿಯು ‘ಮಮ್ಮಿ ಮೇರಾ ಫೋನ್’ ಎಂದು ಕಿರುಚಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಮೊಬೈಲ್ ಕಿತ್ತುಕೊಳ್ಳುವ ಸಂಪೂರ್ಣ ವಿಡಿಯೋ ಕೆಮರಾದಲ್ಲಿ ದಾಖಲಾಗಿದ್ದು, ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಎಕ್ಸ್‌ನಲ್ಲಿ ಹಂಚಿಕೊಂಡಿರುವ ಈ ವೈರಲ್ ವಿಡಿಯೋ ‘ರೈಲು ಹತ್ತುವಾಗ ಜಾಗರೂಕರಾಗಿರಿ’ ಎಂಬ ಶೀರ್ಷಿಕೆಯೊಂದಿಗೆ ಕಂಡು ಬಂದಿದೆ.
ಇತ್ತೀಚಿನ ದಿನಗಳಲ್ಲಿ ರೈಲಿನಲ್ಲಿ ಪ್ರಯಾಣಿಸುವ ಪ್ರಯಾಣಿಕರ ಮೊಬೈಲ್ ಕಸಿದು ಪರಾರಿಯಾಗುತ್ತಿರುವವರು ಹೆಚ್ಚಾಗುತ್ತಿದ್ದಾರೆ. ಅನೇಕ ಪ್ರಯಾಣಿಕರು ಇದೇ ರೀತಿಯ ಅನುಭವಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಇದು ಪ್ರಯಾಣಿಕರಲ್ಲಿ ವಿಶೇಷವಾಗಿ ಮಹಿಳೆಯರಲ್ಲಿ ಅಭದ್ರತೆಯ ಭಾವನೆಯನ್ನು ಹೆಚ್ಚಿಸಿದೆ.
Viral Video: ಇರಾನ್ ಕ್ಷಿಪಣಿ ದಾಳಿಗೆ ಡೋಂಟ್ ಕೇರ್; ಬಂಕರ್‌ನಲ್ಲಿ ನವ ದಂಪತಿಯ ಡ್ಯಾನ್ಸ್!
ವೈರಲ್ ವಿಡಿಯೋದ ನಿಖರವಾದ ಸಮಯ ಮತ್ತು ಸ್ಥಳ ತಿಳಿದು ಬಂದಿಲ್ಲ. ಆದರೆ ವಿಡಿಯೋವನ್ನು ಹೆಚ್ಚಾಗಿ ಹಂಚಿಕೊಳ್ಳಲಾಗುತ್ತಿದೆ. ಈಗಾಗಲೇ ಈ ವಿಡಿಯೋವನ್ನು 1,06,400 ಮಂದಿ ವೀಕ್ಷಿಸಿದ್ದಾರೆ.