ಯಾವುದಾದರೂ ಒಂದು ಹಲ್ಲು ನೋವಿದ್ದರೂ ನಮಗೆ ತಡೆದುಕೊಳ್ಳಲಾಗದಷ್ಟು ಹಿಂಸೆಯಾಗುತ್ತದೆ. ದಂತವೈದ್ಯರಲ್ಲಿ ಹೋಗುವುದೆಂದರೆ ಬೆಚ್ಚಿಬೀಳುತ್ತಾರೆ! ಅಂತಹದ್ದರಲ್ಲಿ ಇಲ್ಲೊಬ್ಬರು ವ್ಯಕ್ತಿ ಸರಿಯಾಗಿರುವ ಹಲ್ಲನ್ನು ಕಿತ್ತು ಗೋಲ್ಡನ್ ಹಲ್ಲನ್ನು ಫಿಕ್ಸ್ ಮಾಡಿಸಿಕೊಂಡಿದ್ದಾರೆ. ಕ್ಲಿನಿಕ್ಗೆ ಭೇಟಿ ನೀಡಿದ ರಜನ್ ಚೌಧರಿ ಬಾಯಿಯ ಮುಂಭಾಗದಲ್ಲಿರುವ ಸಾಮಾನ್ಯ ಬಿಳಿ ಹಲ್ಲುಗಳನ್ನು ಹೊರತೆಗಿಸಿ ದಂತ ವೈದ್ಯರ ಮೂಲಕ ಚಿನ್ನದ ಹಲ್ಲುಗಳನ್ನು ಅಳವಡಿಸಿಕೊಂಡಿದ್ದಾರೆ. ಈ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್(Viral Video) ಆಗಿದೆ.
ಯಾವುದೇ ಹಲ್ಲಿನ ಸಮಸ್ಯೆಗಳಿಲ್ಲದಿದ್ದರೂ ಕೇವಲ ಕಸ್ಟಮೈಸ್ ಮಾಡಿದ ಹಲ್ಲುಗಳನ್ನು ಅಳವಡಿಸಿಕೊಳ್ಳಲು ತನ್ನ ಮೂಲ ಹಲ್ಲುಗಳನ್ನು ಕೀಳುವಂತೆ ದಂತವೈದ್ಯರನ್ನು ಕೇಳಿಕೊಂಡಿದ್ದಾರೆ. ವೈದ್ಯರು ಬಾಯಿಯ ಮುಂಭಾಗದಲ್ಲಿರುವ ಬಿಳಿ ಹಲ್ಲುಗಳನ್ನು ಹೊರತೆಗೆದು, ಚಿನ್ನದ ಹಲ್ಲುಗಳನ್ನು ಅಳವಡಿಸಿದ್ದಾರೆ.
ರಜನ್ ತನ್ನ ಬಾಯಿಯ ಮುಂಭಾಗದಲ್ಲಿ ಚಿನ್ನದ ಹಲ್ಲುಗಳನ್ನು ಅಳವಡಿಸಿದ್ದಲ್ಲದೆ, ಹಲ್ಲುಗಳ ಮೇಲೆ ತನ್ನ ಹೆಸರಿನ ಅಕ್ಷರಗಳನ್ನು ಕೆತ್ತಿಸಿಕೊಂಡಿದ್ದಾನೆ. ತಾನು ಅಳವಡಿಸಿಕೊಂಡ ಪ್ರತಿಯೊಂದು ಸೌಂದರ್ಯವರ್ಧಕ ಹಲ್ಲುಗಳಲ್ಲಿ ತನ್ನ ಹೆಸರಿನ ಅಕ್ಷರಗಳನ್ನು ಬರೆಸಿದ್ದಾನೆ. ಅದರಲ್ಲಿ “ರಜನ್” ಎಂದು ಬರೆಯಲಾಗಿದ್ದು, ತಮ್ಮ ಹೆಸರನ್ನು ಚಿನ್ನದ ಹಲ್ಲುಗಳ ಮೇಲೆ ಬರೆಸಿಕೊಂಡ ಭಾರತದ ಮೊದಲ ವ್ಯಕ್ತಿಯಾಗಿದ್ದಾರೆ.
ದಂತ ವೈದ್ಯರು ತಮ್ಮ ಮೂಲ ಹಲ್ಲುಗಳ ಜಾಗದಲ್ಲಿ “ರಜನ್” ಎಂಬ ಹೆಸರನ್ನು ಹೊಂದಿರುವ ಚಿನ್ನದ ಹಲ್ಲುಗಳನ್ನು ಅಳವಡಿಸುವ ವೀಡಿಯೊವನ್ನು ರಜನ್ ಅಂತರ್ಜಾಲದಲ್ಲಿ ಹಂಚಿಕೊಂಡಿದ್ದು, ಈ ವೀಡಿಯೊ ವೈರಲ್ ಆಗಿದೆ. ರಜನ್ ಸೆಪ್ಟೆಂಬರ್ನಲ್ಲಿ ಇನ್ಸ್ಟಾಗ್ರಾಮ್ ನಲ್ಲಿ ವೀಡಿಯೊವನ್ನು ಅಪ್ಲೋಡ್ ಮಾಡಿದ್ದರು, ಈಗಲೂ ಈ ವೀಡಿಯೋ ಕ್ಲಿಪ್ ವೈರಲ್ ಆಗುತ್ತಿದೆ. ಇದು ಈಗಾಗಲೇ ಸಾಮಾಜಿಕ ಮಾಧ್ಯಮ ಪ್ಲಾಟ್ಪಾರ್ಮ್ನಲ್ಲಿ 1 ಕೋಟಿಗೂ ಹೆಚ್ಚು ವೀಕ್ಷಣೆ ಮತ್ತು 1 ಲಕ್ಷ ಲೈಕ್ಸ್ ಪಡೆದಿದೆ.
ಈ ಸುದ್ದಿಯನ್ನೂ ಓದಿ:‘ಬೆರಳುಗಳು ಕಾಣೆಯಾಗಿವೆ’ ಎಂದು ದೂರು ಕೊಟ್ಟ ಭೂಪಾ! ಪೊಲೀಸ್ ವಿಚಾರಣೆ ವೇಳೆ ಈತನ ಕಿತಾಪತಿ ಬಯಲು
ರಜನ್ ಕಾರ್ಯಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಚಿಕಿತ್ಸೆಯನ್ನು ಎಲ್ಲಿ ಪಡೆದಿದ್ದಾರೆ ಎಂಬುದನ್ನು ತಿಳಿಯಲು ಕೆಲವರು ಆಸಕ್ತಿ ವ್ಯಕ್ತಪಪಡಿಸಿದ್ದಾರೆ, ಇನ್ನು ಕೆಲವರು ರಜನ್ ಕಾರ್ಯಕ್ಕೆ ವ್ಯಂಗ್ಯವಾಡಿದ್ದಾರೆ.ಕೆಲವರು ವಿಲಕ್ಷಣ ಹಲ್ಲುಗಳನ್ನು ನೋಡಿ ನಕ್ಕಿದ್ದಾರೆ. ಒಬ್ಬರು “ಛಾಪ್ರಿ ಅಲ್ಟ್ರಾ ಪ್ರೊ ಮ್ಯಾಕ್ಸ್” ಎಂದು ಕಾಮೆಂಟ್ ಮಾಡಿದ್ದಾರೆ.