ಉತ್ತರಪ್ರದೇಶ: ಕಾಲೇಜು, ಹಾಸ್ಟೆಲ್‍ಗಳಲ್ಲಿ ರ‍್ಯಾಗಿಂಗ್ ಮಾಡುವುದು ಸಾಮಾನ್ಯ. ಇದು ಕೆಲವೊಂದು ವಿದ್ಯಾರ್ಥಿಗಳಿಗೆ ಇಷ್ಟವಾಗದ ಕಾರಣ ಅವರ ನಡುವೆ ಜಗಳ ಶುರುವಾಗಿ ಹೊಡೆದಾಡಿಕೊಳ್ಳುವ ಮಟ್ಟಕ್ಕೂ ಹೋಗುತ್ತದೆ. ಇಂತಹ ಎಷ್ಟೋ ಪ್ರಕರಣಗಳು ನಡೆದಿವೆ. ಇತ್ತೀಚೆಗೆ ಉತ್ತರ ಪ್ರದೇಶದ ನೋಯ್ಡಾದ ಮಹರ್ಷಿ ವಿಶ್ವವಿದ್ಯಾಲಯದ ಹಾಸ್ಟೆಲ್‍ನಲ್ಲಿ ಅಂತಹದೊಂದು ಘಟನೆ ನಡೆದಿರುವುದಾಗಿ ತಿಳಿದುಬಂದಿದೆ. ರ‍್ಯಾಗಿಂಗ್ ವಿರೋಧಿಸಿದ್ದಕ್ಕಾಗಿ ಹಿರಿಯ ವಿದ್ಯಾರ್ಥಿಗಳ ಗುಂಪು ಕಿರಿಯ ವಿದ್ಯಾರ್ಥಿಗಳನ್ನು ಕೆಟ್ಟದಾಗಿ ಥಳಿಸಿದ್ದಾರೆ. ಹಾಸ್ಟೆಲ್ ರೂಂನಲ್ಲಿ ನಡೆದ ವಿದ್ಯಾರ್ಥಿಗಳ ಈ ದೃಶ್ಯ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್(Viral Video) ಆಗಿದೆ.
ವರದಿ ಪ್ರಕಾರ ಹಿರಿಯ ವಿದ್ಯಾರ್ಥಿಗಳು ಕಿರಿಯ ವಿದ್ಯಾರ್ಥಿಗಳಿಗೆ ರ‍್ಯಾಗಿಂಗ್ ಮಾಡಿದ್ದಾರೆ. ಆದರೆ ಕೆಲವು ಕಿರಿಯ ವಿದ್ಯಾರ್ಥಿಗಳು ಅದನ್ನು ವಿರೋಧಿಸಿದ್ದಾರೆ. ಇದರಿಂದ ಹಿರಿಯ ಮತ್ತು ಕಿರಿಯ ವಿದ್ಯಾರ್ಥಿಗಳ ನಡುಗೆ ವಾದ ಶುರುವಾಗಿ ಕೆಟ್ಟ ಪದಗಳಿಂದ ನಿಂದಿಸಲು ಶುರುಮಾಡಿದ್ದಾರೆ. ಇದರಿಂದ ಜಗಳ ವಿಕೋಪಕ್ಕೆ ಹೋಗಿ ಒಬ್ಬರು ಇನ್ನೊಬ್ಬರ ಮೇಲೆ ದೈಹಿಕ ಹಲ್ಲೆ ಮಾಡಿದ್ದಾರೆ. ಇದರಿಂದ ಹಾಸ್ಟೆಲ್ ರೂಂ ಯುದ್ಧಭೂಮಿಯಂತೆ ಕಂಡುಬಂದಿದೆ. ಈ ಘರ್ಷಣೆಯಲ್ಲಿ ಹಲವಾರು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ.
नोएडा, यूपी की महर्षि यूनिवर्सिटी में रैगिंग का विरोध करने पर सीनियर छात्रों ने जूनियर छात्रों को जमकर पीटा। हॉस्टल का रूम लड़ाई का अखाड़ा बना। एक छात्र का दांत टूटा। @Jyoti_karki_ pic.twitter.com/aW1vL8LRO2
— Sachin Gupta (@SachinGuptaUP) November 12, 2024
ಈ ಘಟನೆಯನ್ನು ವಿದ್ಯಾರ್ಥಿಯೊಬ್ಬನ ಕ್ಯಾಮೆರಾದಲ್ಲಿ ಸೆರೆಹಿಡಿಯಲಾಗಿದ್ದು, ಜಗಳದ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ವಿದ್ಯಾರ್ಥಿಗಳು ಪರಸ್ಪರ ಹಿಂಸಾತ್ಮಕವಾಗಿ ಹಲ್ಲೆ ನಡೆಸಿದ್ದಾರೆ. ಘಟನೆಯ ಬಗ್ಗೆ ವಿಶ್ವವಿದ್ಯಾಲಯ ಇನ್ನೂ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ಈ ಘಟನೆಯನ್ನು ನೋಡಿದ ಬಳಕೆದಾರರೊಬ್ಬರು, ಈ ಘಟನೆಯನ್ನು ಬಲವಾಗಿ ಖಂಡಿಸಿದ್ದಾರೆ. ಇದರಲ್ಲಿ ಭಾಗಿಯಾಗಿರುವ ವಿದ್ಯಾರ್ಥಿಗಳು ತೋರಿಸಿದ ಈ ಹಿಂಸಾತ್ಮಕ ನಡವಳಿಕೆಗಾಗಿ ಅವರಿಗೆ ತಕ್ಕ ಶಿಕ್ಷೆ ವಿಧಿಸಬೇಕು ಎಂದು ಹೇಳಿದ್ದಾರೆ.
ಇದನ್ನೂ ಓದಿ:ಬಟ್ಟೆಯಂಗಡಿಯಲ್ಲಿ ಮಾಡೆಲ್‌ಗಳೇ ಗೊಂಬೆಗಳು! ಭಾರೀ ವೈರಲಾಗ್ತಿದೆ ಈ ವಿಡಿಯೊ
ವಿಶ್ವವಿದ್ಯಾಲಯದಲ್ಲಿ ಈ ರೀತಿ ಕಿತ್ತಾಡಿಕೊಂಡ ಘಟನೆ ಇದೇ ಮೊದಲಲ್ಲ. ಇದಕ್ಕೂ ಮೊದಲು ನೋಯ್ಡಾ ಸೆಕ್ಟರ್ -126 ರ ಅಮಿಟಿ ವಿಶ್ವವಿದ್ಯಾಲಯದ ಹೊರಗೆ ಯುವಕರ ಗುಂಪೊಂದು ಪರಸ್ಪರ ಕಿತ್ತಾಡಿಕೊಂಡಿದ್ದಾರೆ. ಅವರು ಜಗಳವಾಡುತ್ತಿರುವ ವಿಡಿಯೊವನ್ನು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿ, ಸಖತ್ ವೈರಲ್ ಆಗಿತ್ತು. ವಿಡಿಯೊದಲ್ಲಿ ಯುವಕರ ಗುಂಪು ಪರಸ್ಪರ ಹೊಡೆದುಕೊಂಡಿದ್ದಾರೆ. ಆದರೆ ಘರ್ಷಣೆಯ ಕಾರಣ ಮತ್ತು ಭಾಗಿಯಾಗಿರುವ ವ್ಯಕ್ತಿಗಳು ಅಮಿಟಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳೇ ಎಂಬುದು ಸ್ಪಷ್ಟವಾಗಿಲ್ಲ. ಪೊಲೀಸರು ಘಟನೆಯ ಬಗ್ಗೆ ತನಿಖೆ ನಡೆಸಿದ್ದಾರೆ.